Category: ಅಂಕಣ

ಅಂಕಣ

ಅಂಕಣ ಬರಹ

ಸಾಧಕಿಯರ ಯಶೋಗಾಥೆ

‘ ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ

ಅಂಕಣ ಬರಹ ತೊರೆಯ ಹರಿವು ಅಮ್ಮನಾಗಿ ಬರೆಯುವಾಗ ನಾನೊಬ್ಬ ಹೊರಗೆ ದುಡಿಯಲು ಹೋಗುವ ಆಧುನಿಕ ಕಾಲದ ಅಮ್ಮ. ವೃತ್ತಿಯ ಜೊತೆಗೆ ಕೆಲವು ಪ್ರವೃತ್ತಿಗಳಿವೆ. ಅದರಲ್ಲೂ ಓದು – ಬರವಣಿಗೆ ಎಂಬುದು ನನ್ನ ಪ್ರೀತಿಯ ಹವ್ಯಾಸ. ಆದರೆ, ಈ ಹವ್ಯಾಸಿ ಬರವಣಿಗೆ ಅನ್ನುವುದು ಯಾವ ಸಮೀಕ್ಷೆ ಅಥವಾ ಅಧ್ಯಯನಗಳಿಗೆ ಒಳಗಾಗದ ಅನೂಹ್ಯ ಘಟನೆ ಎನ್ನುವುದು ನನ್ನ ಅಭಿಮತ. ಏಕೆಂದರೆ, ಬರವಣಿಗೆಗೆ ಒಂದು ಭಾವ ಅಗತ್ಯ. ಆದರೆ, ಭಾವ ಸ್ಫುರಿಸಿದಾಗ ಬರೆದು ಬಿಡಬಹುದಾದ ಯಾವ ಅನುಕೂಲಗಳೂ ವೃತ್ತಿಪರ ಬರಹಗಾರರಲ್ಲದ ನನ್ನಂಥವರಿಗೆ ಇರುವುದಿಲ್ಲ.     ಸೃಜನಶೀಲ ಬರವಣಿಗೆಗೆ ಹೊತ್ತುಗೊತ್ತಿನ ಕಟ್ಟುಪಾಡು ಇರುವುದಿಲ್ಲ. ಯಾವುದೇ ನಿರ್ದಿಷ್ಟವಾದ ನಿರ್ಧರಣೆಯಿಲ್ಲದೇ ಬರುವ ಹಲವು ಭಾವಗಳನ್ನು ಆಗಲೇ ಬರಹಕ್ಕೆ ಇಳಿಸಬೇಕಾದುದು ಬರಹಗಾರರಿಗೆ ಇರಬೇಕಾದ ಅನಿವಾರ್ಯದ ಸ್ಥಿತಿ. ಆದರೆ, ದೈನಂದಿನ ಕೆಲಸ ಕಾರ್ಯಗಳನ್ನು ಒತ್ತಟ್ಟಿಗಿಟ್ಟು ನನ್ನಂಥವರಿಗೆ ದಿಢೀರನೆ ಬರೆಯಲಾಗುವುದಿಲ್ಲ. ಹಾಗೆಂದು, ಮೂಡಿ ಬಂದ ಭಾವನೆಗಳನ್ನು, ಕ್ಷಣದಲ್ಲಿ ಮಿಂಚುವ ವಿಚಾರಗಳನ್ನು ಎಷ್ಟು ಹೊತ್ತು ನೆನಪಿನಲ್ಲಿಟ್ಟುಕೊಂಡು ಬಿಡುವು ಸಿಕ್ಕ ಅನಂತರ ಬರೆಯಲು ಸಾಧ್ಯ?     ಸೃಜನಶೀಲ ಬರವಣಿಗೆಗೆ ಅದರದ್ದೇ ಆದ ವೈಶಿಷ್ಟ್ಯವಿದೆ. ತಿಣುಕಾಡಿ ಬರೆದರೆ ಅದರಷ್ಟು ಪೇಲವವಾದ ವಿಚಾರ ಮತ್ತೊಂದಿರುವುದಿಲ್ಲ.  ಹಾಗೆಂದು ಹಠ ಹಿಡಿದೇ ಬರೆದೆವೆಂದರೆ, ಮತ್ತೊಮ್ಮೆ ನಮಗೇ ಓದಲಾಗುವುದಿಲ್ಲ. ಸಹಜವಾಗಿ ಮೋಡಗಟ್ಟಿ ಮಳೆಗರೆಯುವಂತೆ ಭಾವನೆ- ವಿಚಾರಗಳು ಹರಳುಗಟ್ಟಿ ಬರಹವಾಗಬೇಕು. ಮೋಡ ಬಿತ್ತನೆಯಿಂದ ಕೃತಕ ಮಳೆ ಎಷ್ಟು ತರಿಸಲಾದೀತು? ಹಾಗೆಯೇ ಸೃಜನಾತ್ಮಕ ಬರಹವಣಿಗೆಯನ್ನು ಕೃತಕವಾಗಿ ಮಾಡಲಾಗದು. ಹೇಗೋ ತಿಣುಕಾಡಿ ಬರೆದರೂ, ಅದು ಭ್ರಮನಿರಸನ ಉಂಟು ಮಾಡುವಷ್ಟು ಭಾವತೀವ್ರತೆಯ ಕೊರತೆಯಿಂದ ತುಂಬಿಕೊಂಡಿರಬಹುದು.    ವೈಯಕ್ತಿಕವಾಗಿ ಹೇಳಬೇಕೆಂದರೆ, ಬರವಣಿಗೆಗೆ ತೊಡಗುವಾಗ ಕಚೇರಿ ಕೆಲಸ, ಮನೆವಾರ್ತೆಯ ಬಹುಮುಖ್ಯ ಅಗತ್ಯಗಳನ್ನು ಮೊದಲಿಗೆ ಪೂರೈಸಿಬಿಡುತ್ತೇನೆ. ಏಕೆಂದರೆ, ಬರೆಯುವಾಗ ಒತ್ತಡ ರಹಿತ ಪರಿಸ್ಥಿತಿ ಬಹಳ ಅಗತ್ಯ. ಸಾಮಾಜಿಕ ಜವಾಬ್ದಾರಿಯ ನಿರ್ವಹಣೆ ಮಾಡುವುದು ಯಾರಿಗಾದರೂ ಮೊದಲ ಆದ್ಯತೆ ಆಗಿರಲೇಬೇಕು. ಹಲವಾರು ಜನ ಕೇಳುತ್ತಾರೆ, ಕಚೇರಿ, ಮನೆ, ಪುಟ್ಟಮಕ್ಕಳು ಇವನ್ನೆಲ್ಲಾ ನಿಭಾಯಿಸಿಕೊಂಡು ಹೇಗೆ ಇತರೆ ಚಟುವಟಿಕೆಗಳಲ್ಲಿ ತೊಡಗಲು ಸಾಧ್ಯ?! ಎಂದು. ಅದಕ್ಕೆ ನನ್ನ ಒಂದೇ ಉತ್ತರ, ‘ಮನಸ್ಸಿದ್ದರೆ ಮಾರ್ಗ ‘ ಹಾಗೂ ನಮ್ಮ ಇತರೆ ಅನಗತ್ಯದ ಒತ್ತಡಗಳನ್ನು, ಅಮುಖ್ಯ ವಿಚಾರಗಳನ್ನು, ಇತರೆ ಏನೆಲ್ಲಾ ಅವಸರಗಳನ್ನು ಅನಾಮತ್ತಾಗಿ ಪಕ್ಕಕ್ಕೆ ಸರಿಸಿ ಬಿಡಬೇಕೆಂದು. ಒಂದು ವೈಯಕ್ತಿಕ ಶಿಸ್ತನ್ನು ರೂಢಿಸಿಕೊಂಡರೆ ಹಾಗೂ ಮನೆಮಂದಿಯ ಸಹಕಾರ ದೊರಕಿಸಿಕೊಂಡರೆ ಅಸಾಧ್ಯವಾದುದು ಯಾವುದೂ ಇಲ್ಲ.  ಆದರೂ, ಏನೆಲ್ಲವನ್ನೂ ಅನಾಮತ್ತಾಗಿ ಪಕ್ಕಕ್ಕೆ ಸರಿಸಬಲ್ಲೆನಾದರೂ, ಮಕ್ಕಳ ಸಣ್ಣ ಬೇಡಿಕೆಗಳನ್ನು, ಅವರೊಡನೆ ಕಳೆಯಬಹುದಾದ ದಿವ್ಯ ಗಳಿಗೆಗಳನ್ನು  ನಿರಾಕರಿಸುವ ಧೈರ್ಯವನ್ನು ನಾನು ಮಾಡುವುದು  ಕಡಿಮೆಯೇ.. ಏಕೆಂದರೆ, ಮಕ್ಕಳೆಂದರೆ ನನನಗಷ್ಟೇ ಅಲ್ಲ ಸಮಾಜಕ್ಕೆ ಸೇರಿದ ಪ್ರಜೆಗಳು. ಹಾಗಾಗಿ ಅವರನ್ನು ಜವಾಬ್ದಾರಿಯುತರನ್ನಾಗಿ ಬೆಳೆಸಬೇಕಾದ ಪ್ರಜ್ಞೆಯೂ ಆಂತರ್ಯದಲ್ಲಿ ಕೆಲಸ ಮಾಡುತ್ತಿರುತ್ತದೆ.    ಹೀಗೆ, ಭವದ ಮಕ್ಕಳತ್ತ ಚಿತ್ತ ನೆಟ್ಚಾಗ ಮನದಲ್ಲಿ ಮೂಡಿದ್ದ ‘ಭಾವ’ವೆಂಬ ಹೊಸದಾಗಿ ಜನ್ಮ ತಳೆಯುವ ಆಸೆಯಲ್ಲಿದ್ದ ‘ಬರಹದ ಕೂಸು’  ನನ್ನ ಮೇಲೆ ಮುನಿದುಕೊಂಡದ್ದು ಬೆರಳೆಣಿಕೆಯ ಬಾರಿಯಲ್ಲ.          ಚೆಂದದ ಅನುಭೂತಿ ಮೂಡಿಯೂ ಬರೆಯಲಾಗದೇ ಮರೆಯಾದ ಅನನ್ಯ ಭಾವಗಳು, ಕಲ್ಪನೆಗಳು ಅವೆಷ್ಟೋ..!!! ಯಾವಾಗಲೋ ಹೊಳೆದ ನನ್ನಷ್ಟಕ್ಕೆ ಅತ್ಯುತ್ತಮ ಎನಿಸುವ ಸಾಲುಗಳನ್ನು, ಮೋಹ ಉಕ್ಕಿಸುವ ಬರಹ ರೂಪಗಳನ್ನು ಮಕ್ಕಳ ಸಲುವಾಗಿ ನಾನು ಮರೆತು ಬಿಡಬೇಕಾಗುತ್ತದೆ. ಹಲವು ಬಾರಿ ಒಂದು ಸಣ್ಣ ಟಿಪ್ಪಣಿಯನ್ನೂ ಮಾಡಿಕೊಳ್ಳಲೂ ಆಗಿರುವುದಿಲ್ಲ.  ಆಗೆಲ್ಲಾ ಬರವಣಿಗಾಗಿಯೇ ಬದುಕು ಮುಡಿಪಿಟ್ಟವರನ್ನು ನೆನೆದುಕೊಂಡಿದ್ದೇನೆ. ಬರವಣಿಗೆಯವ್ಲಿರುವ ಲೇಖಕರ ಮಕ್ಕಳನ್ನು ನಿಭಾಯಿಸುವ ಪತಿ/ಮಡದಿ, ಮೂಡು ಬರಿಸಿಕೊಳ್ಳಲು ಅವರು ಮೊರೆ ಹೋಗುವ ತಿರುಗಾಟಗಳು, ಮೋಜು-ಮಸ್ತಿಗಳು, ಅನಾಯಾಸವಾಗಿ ಸಿಕ್ಕಿಬಿಡುವ ಸಮಯಾನುಕೂಲಗಳು (ಇವೆಲ್ಲಾ ವಿಶೇಷವಾಗಿ ಪುರುಷ ಲೇಖಕರಿಗೆ) ಹೀಗೆ… ಇಂಥವೆಲ್ಲಾ ನೆನೆದಾಗ ನನ್ನಂತಹ ಹವ್ಯಾಸಿ ಮಹಿಳಾ ಬರಹಗಾರರಿಗೆ ಆಪ್ತ ಸಮಯ ಎನ್ನುವುದು ಗಗನ ಕುಸುಮವಲ್ಲದೇ ಮತ್ತೇನು..? ಎನಿಸುತ್ತದೆ.        ವೃತ್ತಿ ಪ್ರವೃತ್ತಿಗಳ ನಡುವೆ ಮನೆ-ಮಕ್ಕಳ ಜವಾಬ್ದಾರಿಗಳನ್ನು  ಮರೆಯುವಂತೆಯೇ ಇಲ್ಲವಲ್ಲ. ಹಾಗೇನಾದರು ಆದರೆ  ಅದೆಲ್ಲಿಯೋ ಮರೆಯಾಗಿರುವ ‘ನಾನು ಒಳ್ಳೆ ಅಮ್ಮ ಅಲ್ಲ’, ‘ಮಕ್ಕಳಿಗೆ ಕ್ವಾಲಿಟಿ ಟೈಂ ಕೊಡುತ್ತಿಲ್ಲ’  ಎಂಬ ಛದ್ಮವೇಷದಲ್ಲಿರುವ  ‘ಅಪರಾಧಿ’ ಪ್ರಜ್ಞೆಯೊಂದು ಬಂದು ತಲೆಯೊಳಗೆ ಕುಳಿತು ಕೆಲವೊಮ್ಮೆ ಇನ್ನಿಲ್ಲದಂತೆ ಕಾಡುತ್ತಾ ಹಿಂಸಿಸುತ್ತದೆ.      ಅಲ್ಲದೇ ಹಲವು ಬಾರಿ,  ಓದಲು ಬರೆಯಲು ಕುಳಿತಾಗ ಮಕ್ಕಳೇ ಹತ್ತಿರ ಬಂದು  ಆಟಕ್ಕೋ  ಮತ್ತೊಂದಕ್ಕೋ ಕರೆಯುತ್ತಾರೆ. ಬೆಳಗ್ಗಿಂದಲೂ  ಮನೆಯ ಹೊರಗೇ ಇರುವ ನಾನು, ಮನೆಗೆ ಬಂದ ಮೇಲೂ ಅವರಿಂದ ದೂರ ಇರುವುದನ್ನು ಒಪ್ಪಲು ಅವರು ಸಿದ್ಧರಿರುವುದಿಲ್ಲ.  ನಾನು ಅವರ ಅಮ್ಮ. ಅವರಿಗೆ ಬೇಕಾದಾಗ ಈ ಅಮ್ಮ ಸಿಗಬೇಕು. ಅವರ ಅಮ್ಮ ಅವರಿಗೆ ಬೇಕು ಅಷ್ಟೇ… ಇದೇ ಅವರ ಅಂತಿಮ ಡಿಮ್ಯಾಂಡ್. ಹೀಗಾಗಿ  ಮನೆಗೆ ಬಂದ ಮೇಲೆಯೂ ನಾನು ನನಗಾಗಿ  ಸ್ಪೇಸ್ ಅಪೇಕ್ಷಿಸಲು ಸಾಧ್ಯವಾಗದು. ಹಾಗೇನಾದರು ಮಾಡಿದರೆ ಮಕ್ಕಳೇ ನನ್ನ ಮೇಲೆ ಕೋಪಿಸಿಕೊಂಡು ದೂಷಿಸದೇ ಇರಲಾರು. ಆ ಅನುಭವಗಳೂ ಸಾಕಷ್ಟು ಆಗಿವೆ..      ಹೀಗೆ ಬರೆಯಬೇಕೆಂದು ಕುಳಿತಾಗ ಹಲವಾರು ಬಾರಿ  ಅನಾನುಕೂಲಗಳು ಆಗುವುದು ಹೌದು. ತಕ್ಷಣಕ್ಕೆ ಹೊಳೆಯು ಆ ಪದ, ಆ ಸಾಲು ಮನದಿಂದ ಮರೆಯಾಗಬಹುದು. ಜೊತೆಗೆ ಆ ಭಾವತೀವ್ರತೆಯೂ ಕೊನೆಯಾಗಬಹುದು.  ಹಾಗೆಂದು ಮಕ್ಕಳನ್ನು ಅಪರಾಧಿ ಸ್ಥಾನದಲ್ಲಿಟ್ಟು ನೋಡಲಾರೆ. ಎಷ್ಟಾದರು ನಾನು ಅಮ್ಮನಲ್ಲವೇ.. ಬರೆಯಲಾಗದ ಬಹಳಷ್ಟು ಸಮಯದಲ್ಲಿ  ನನ್ನ  ಇಬ್ಬರು ಮಕ್ಕಳೂ ನನ್ನ ಮತ್ತೊಂದು ಬಗೆಯ ಬರಹದ ಪ್ರಸ್ತುತಿಗಳೇ ಎಂದು ಸಮಾಧಾನ ಮಾಡಿಕೊಳ್ಳುತ್ತೇನೆ. ಏಕೆಂದರೆ ನಾನು ಹೆಣ್ಣು, ಮಿಗಿಲಾಗಿ ಅಮ್ಮ….   ವಸುಂಧರಾ ಕದಲೂರು.  ೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ

ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ—47 ಆತ್ಮಾನುಸಂಧಾನ ನಾಲ್ಕಾರು ಬಂಧುಗಳ ನಡುವೆ ವಿವಾಹ ಬಂಧನಕ್ಕೆ….. : ಬದುಕು ಅನೇಕ ವಿಧದ ಸಂಬಂಧಗಳ ಬೆಸುಗೆ. ನಮ್ಮ ಜೀವಿತದ ಕಾಲಾವಧಿಯ ಉದ್ದಕ್ಕೂ ಈ ಸಂಬಂಧಗಳ ಬೆಸುಗೆ ವಿಸ್ತಾರಗೊಳ್ಳುತ್ತ ಸಾಗುತ್ತದೆ. ಅಂತಹ ಸಂಬಂಧಗಳಲ್ಲಿ ಪ್ರೇಮ ಸಂಬಂಧವೆಂಬುದು ಒಂದು ಅಪರೂಪದ, ವಿಶಿಷ್ಟವಾದ ಭಾವ ಬಂಧ. ಇದು ಗಂಡ-ಹೆಂಡತಿಯ ಸಾಮಾಜಿಕ ಅಂತಸ್ತುಗಳ ರೂಪದಲ್ಲಿ ಸಮಾಜದ ಮುಂದುವರಿಕೆಗೂ ನೆರವಾಗುತ್ತದೆ. ‘ಪ್ರೇಮ’ ಎಂಬುದು ಮುಂಗಡ ಬುಕಿಂಗ್ ಮಾಡುವಂತಹುದಲ್ಲ. ಅದು ಹೊತ್ತು ಗೊತ್ತಿಲ್ಲದೆ ತೀರ ಆಕಸ್ಮಿಕವಾಗಿ ಘಟಿಸುವಂತಹದು. ಅದಕ್ಕೇ ಇರಬಹುದೇನೋ “ಪ್ರೇಮ ಕುರುಡು” ಎಂಬ ಉಕ್ತಿಯೇ ಬಹುಕಾಲದಿಂದ ಜನಜನಿತವಾಗಿದೆ. ನಾನು ಉದ್ಯೋಗಕ್ಕೆ ಸೇರಿ ಆರೆಂಟು ವರ್ಷಗಳೇ ಕಳೆದಿದ್ದವು. ಉತ್ಸಾಹ ತುಂಬಿದ ತರಗತಿಯ ಪಾಠಗಳು, ಯಕ್ಷಗಾನ-ನಾಟಕ-ಸಾಹಿತ್ಯ ಸಂಬಂಧಿಯಾದ ನನ್ನ ಹವ್ಯಾಸಗಳಿಂದಾಗಿ ವರ್ಷಗಳು ಕಳೆದದ್ದೂ ಅರಿವಿಗೆ ಬಾರದಂತಹ ಉಲ್ಲಾಸದ ದಿನಗಳು ನನಗೆ ‘ಮದುವೆಯ ವಯಸ್ಸಾಗಿದೆ’ ಎಂಬುದರತ್ತ ಗಮನ ಹರಿಸಲೂ ಬಿಡಲಾರದಂತೆ ತಡೆದಿದ್ದವು. ನನ್ನ ತಮ್ಮ ನಾಗೇಶ ಗುಂದಿ ನಾನು ಕಾಲೇಜು ಉಪನ್ಯಾಸಕನಾಗಿ ಉದ್ಯೋಗಕ್ಕೆ ಸೇರಿದ ಸಂದರ್ಭದಲ್ಲಿಯೇ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕೆಲಸ ಆರಂಭಿಸಿದ್ದ. ಸಿದ್ದಾಪುರ ತಾಳೂಕಿನ ಕಾನಸೂರಿನ ಆಸುಪಾಸಿನ ಯಾವುದೋ ಹಳ್ಳಿಯ ಶಾಲೆಯಲ್ಲಿ ಅವನ ಶಿಕ್ಷಕ ವೃತ್ತಿಯು ಮುಂದುವರಿದಿತ್ತು. ಅದೇ ಊರಿನ ತರುಣಿಯೋರ್ವಳೊಡನೆ ಪ್ರೇಮ ಸಂಬಂಧ ಬೆಳೆದು ವಿವಾಹದ ತೀರ್ಮಾನಕ್ಕೂ ಬಂದಿದ್ದ. ಮುಖ್ಯವಾಗಿ ಹುಡುಗಿ ದೈವಜ್ಞ ಬ್ರಾಹ್ಮಣ ಸಮುದಾಯದವಳಾಗಿದ್ದು ದಲಿತ ಸಮುದಾಯದ ನನ್ನ ಸಹೋದರನಿಗೆ ಈ ವಿವಾಹ ಸಂಬಂಧವು ಸಂಘರ್ಷಕ್ಕೆ ಎಡೆಯಾಗಬಹುದೆಂಬ ಆತಂಕವೂ ಇತ್ತು. ಈ ಕಾರಣದಿಂದ ಸಹಜವಾಗಿಯೇ ಆತ ಮದುವೆಗೆ ಅವಸರ ಪಡುತ್ತಿರುವುದು ಸ್ಪಷ್ಟವಾಗಿತ್ತು. ಆದರೆ ಅವನಿಗಿಂತ ಹಿರಿಯನಾಗಿ ನಾನು ಇದ್ದುದರಿಂದ ನಮ್ಮ ತಂದೆ-ತಾಯಿಯರು ಅವನ ಮದುವೆಗೆ ಸಮ್ಮತಿಸಲು ಅನಮಾನಿಸುತ್ತಿದ್ದರು. ಸಂದರ್ಭದ ಸೂಕ್ಷ್ಮಗಳೆಲ್ಲ ನನ್ನ ಅರಿವಿಗೆ ಬಂದಾದ ಮೇಲೆ ಈ ಸಮಸ್ಯೆಗೆ ನಾನು ಪರಿಹಾರವನ್ನು ಸೂಚಿಸಲೇ ಬೇಕಾದ ಅನಿವಾರ್ಯತೆಯುಂಟಾಯಿತು. ಒಂದೋ ನಾನು ತಕ್ಷಣ ಮದುವೆಯ ನಿರ್ಧಾರಕ್ಕೆ ಬಂದು ನನ್ನ ಸಹೋದರನ ದಾರಿಯನ್ನು ಸುಗಮಗೊಳಿಸಬೇಕು. ಇಲ್ಲವೆ ನನ್ನ ಮದುವೆಗೆ ಮುನ್ನ ಸಹೋದರನ ಮದುವೆಗೆ ಮುಕ್ತ ಮನಸ್ಸಿನಿಂದ ಒಪ್ಪಿಗೆ ತಿಳಿಸಿ ತಾಯಿ-ತಂದೆಯರನ್ನೂ ಒಡಂಬಡಿಸಬೇಕು. ನನಗೆ ಎರಡನೆಯ ದಾರಿಯೇ ಸುಲಭ ಮತ್ತು ಸೂಕ್ತವೆನ್ನಿಸಿತು. ಹಾಗೆಯೇ ಮಾಡಿದೆ. ಯಾವ ಅಡ್ಡಿ-ಆತಂಕಗಳೂ ಇಲ್ಲದೆ ದೈವಜ್ಞ ಬ್ರಾಹ್ಮಣ ಸಮುದಾಯದ ಯುವತಿ ‘ಮಂಜುಳಾ’ ನನ್ನ ಸಹೋದರನ ಪತ್ನಿಯಾಗಿ ನಮ್ಮ ತಾಯಿ ತಂದೆಯರ ಹಿರಿಯ ಸೊಸೆಯಾಗಿ ನಮ್ಮ ಮನೆ ತುಂಬಿದಳು. ಅಲ್ಲಿಂದ ಮುಂದಿನ ದಿನಗಳಲ್ಲಿ ನಮ್ಮ ತಾಯಿ ತಂದೆ ಬಂಧು ಬಳಗವೆಲ್ಲ ಸೇರಿ ನನಗೂ ಮದುವೆಗಾಗಿ ಒತ್ತಾಯಿಸಲು ಆರಂಭಿಸಿದ್ದರು. ಅಂದಿನ ದಿನಗಳಲ್ಲಿ ನಮ್ಮ ಜಾತಿಯಲ್ಲಿ ಸುಶಿಕ್ಷಿತ ಹೆಣ್ಣು ಮಕ್ಕಳು ದೊರೆಯುವುದು ಕಷ್ಟವಾಗಿತ್ತು. ಅಪರೂಪದಲ್ಲಿ ಕೆಲವು ಓದಿದ, ಓದುತ್ತಿರುವ ಯುವತಿಯರು ಕಾಣಿಸುತ್ತಿದ್ದರೂ ವಿವಾಹ ಸಂಬಂಧದ ಹೊಂದಾಣಿಕೆ ಸಾಧ್ಯವಾಗುತ್ತಿರಲಿಲ್ಲ. ಹಾಗೆಂದು ನಾನು ಮದುವೆಯ ತೀರ್ಮಾನಕ್ಕೆ ಬರದೆ ನಿರಾಳವಾಗಿ ಇರುವಂತೆಯೂ ಇರಲಿಲ್ಲ. ಇಂಥ ಸಂದರ್ಭದಲ್ಲಿ ನನ್ನ ನೆರವಿಗೆ ಬಂದವರು ನನ್ನ ದಾಯಾದಿ ಸಂಬಂಧಿಯಾದ ಹೂವಾ ವಂದಿಗೆ ಎಂಬ ಸದ್ಗೃಹಸ್ಥ. ಹುಬ್ಬಳ್ಳಿಯ ಟೆಲಿಕಾಂ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಹೂವಾ ವಂದಿಗೆಯವರು ಹುಬ್ಬಳ್ಳಿಯ ಗಣೇಶ ಪೇಟೆ ಎಂಬ ಭಾಗದಲ್ಲಿ ಒಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಅವರಿಗೆ ಮೂವರು ಗಂಡು ಮಕ್ಕಳು. ಹುಬ್ಬಳ್ಳಿಯಲ್ಲಿ ಬೇರೆ ಬೇರೆ ಕಡೆಗಳಲ್ಲಿ ಖಾಸಗಿ ಕೆಲಸದಲ್ಲಿದ್ದರು. ಹೂವಾ ಅವರ ಧರ್ಮಪತ್ನಿ ತುಂಬಾ ಬಂಧು ವತ್ಸಲೆಯೆನ್ನಿಸಿದ ತಾಯಿಯಾಗಿದ್ದರು. ಯಾವಾಗಲೂ ಅವರಿಗೆ ನೆಂಟರಿಷ್ಟರು ಮನೆಗೆ ಬರುತ್ತಾ ಇರಬೇಕು. ಅವರಿಗೆ ರುಚಿ ರುಚಿಯಾದ ಅಡಿಗೆ ಮಾಡಿ ಉಣ್ಣಿಸುವುದರಲ್ಲಿ ಅತ್ಯಂತ ಪ್ರೀತಿ ಮತ್ತು ಸಂತೋಷ…! ಊರಿನ ಕಡೆಯಿಂದ ಯಾರೇ ಬಂದರೂ ಅವರ ಯೋಗಕ್ಷೇಮವನ್ನು ನೋಡಿಕೊಂಡು ಆತಿಥ್ಯ ನೀಡುವುದರಲ್ಲಿ ಧನ್ಯತೆಯನ್ನು ಕಾಣುತ್ತಿದ್ದರು. ಗಣೇಶ ಪೇಟೆಯಲ್ಲಿ ಹೂವಾ ವಂದಿಗೆಯವರ ಮನೆಯ ಆಚೀಚೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂರು, ಮರಾಠರು ನೆಲೆಸಿದ್ದರು. ಎಲ್ಲರೊಂದಿಗೆ ಹೂವಾ ವಂದಿಗೆಯವರ ಪರಿವಾರ ಅತ್ಯಂತ ಆಪ್ತವಾಗಿ ಹೊಂದಿಕೊಂಡಿದ್ದರು. ಅವರಿಗೆ ತುಂಬ ಹತ್ತಿರದಲ್ಲಿ ಒಂದು ಮರಾಠಾ ಭಾವಸಾರ ಕ್ಷತ್ರಿಯ ಕುಟುಂಬ ನೆಲೆಸಿತ್ತು. ಅದು ವಿಷ್ಣುರಾವ್ ಸುಲಾಖೆ ಎಂಬ ಗ್ರಹಸ್ಥರ ಮನೆ. ಅವರಿಗೆ ಮೂವರು ಗಂಡು ಮತ್ತು ಮೂರು ಹೆಣ್ಣು ಮಕ್ಕಳಿದ್ದರು. ಮೂರು ಗಂಡು ಮಕ್ಕಳು ಜವಳಿ ವ್ಯಾಪಾರ ಮತ್ತು ಟೇಲರಿಂಗ್ ಕೆಲಸ ಮಾಡುತ್ತಿದ್ದರು. ಗಣೇಶ ಪೇಟೆಯಲ್ಲಿ “ರಾಯಲ್ ಟೇಲರ್ಸ ” ಎಂಬ ಅಂಗಡಿಯನ್ನು ಇಟ್ಟುಕೊಂಡು ಬಟ್ಟೆ ಮತ್ತು ಟೇಲರಿಂಗ್ ಮಟೀರಿಯಲ್ಸ್ಗಳನ್ನು ಬಾಂಬೆಯಿಂದ ಖರೀದಿಸಿ ತಂದು ಮಾರಾಟ ಮಾಡುತ್ತಿದ್ದರು. ತಂದೆ ವಿಷ್ಣುರಾವ್ ರೈಲ್ವೆ ಇಲಾಖೆಯ ಉದ್ಯೋಗಿಯಾಗಿದ್ದರು. ಇಬ್ಬರು ಹೆಣ್ಣು ಮಕ್ಕಳನ್ನು ರಾಣಿಬೆನ್ನೂರಿನ ಇಬ್ಬರು ಸೋದರ ಅಳಿಯಂದಿರಿಗೆ ಕೊಟ್ಟು ಮದುವೆ ಮಾಡಿದ್ದರು. ಈ ಕುಟುಂಬದ ಎಲ್ಲ ಸದಸ್ಯರೂ ಹೂವಾ ವಂದಿಗೆಯವರ ಕುಟುಂಬದೊಡನೆ ಅನ್ಯೋನ್ಯವಾಗಿದ್ದರು. ಹಬ್ಬ ಹುಣ್ಣಿಮೆ ಇತ್ಯಾದಿ ವಿಶೇಷ ದಿನಗಳಲ್ಲಿ ಊಟೋಪಚಾರಗಳ ವಿನಿಮಯವೂ ನಡೆಯುತ್ತಿತ್ತು. ಧಾರವಾಡದಲ್ಲಿ ನಾನು ಎಂ.ಎ ಓದಿನ ದಿನಗಳಿಂದ ಹೂವಾ ವಂದಿಗೆಯವರ ಮನೆಗೆ ಭೇಟಿ ನೀಡುವ ಸಲಿಗೆ ಬೆಳೆಸಿಕೊಂಡಿದ್ದೆ. ವಿಶೇಷವಾಗಿ ಹೂವಾ ಅಂಕಲ್ ಪತ್ನಿ ಶಿವಮ್ಮ ಚಿಕ್ಕಮ್ಮ ಸೊಗಸಾಗಿ ಮಟನ್ ಮಸಾಲೆ ಮಾಡಿ ಬಡಿಸುತ್ತಿದ್ದುದು. ನನಗೆ ಹುಚ್ಚು ಹಿಡಿಸುವಷ್ಟು ಪ್ರಿಯವಾಗಿತ್ತು. ನಾನು ಉದ್ಯೋಗಿಯಾದ ಬಳಿಕ ನಮ್ಮ ಭೇಟಿ ಅಪರೂಪವಾಗಿತ್ತಾದರೂ ಎರಡು ತಿಂಗಳಿಗೊಮ್ಮೆಯಾದರೂ ಹುಬ್ಬಳ್ಳಿಗೆ ಹೋಗಿ ಬರುತ್ತಿದ್ದೆ. ಇದೇ ಹೂವಾ ವಂದಿಗೆಯವರ ಮನೆಯಲ್ಲಿಯೇ ನೆರೆಯ ವಿಶ್ವನಾಥರಾವ್ ಸುಲಾಖೆಯವರ ಕಿರಿಯ ಮಗಳು ನಿರ್ಮಲಾ ನನಗೆ ಪರಿಚಯವಾಗಿದ್ದಳು. ನಾನು ವಿವಾಹಕಾಂಕ್ಷೆಯಾದೆನೆಂಬುದು ತಿಳಿದಾಗ ಹೂವಾ ವಂದಿಗೆ ಅವರು ನಿರ್ಮಲಾ ಕುರಿತು ಸಣ್ಣ ಸೂಚನೆ ನೀಡದರು. ನನಗೂ ಸರಿಯೆನ್ನಿಸಿ ಅಂಕಲ್ ಮನೆಗೆ ಹೋದಾಗಲೆಲ್ಲ ನಿರ್ಮಲಾಳನ್ನು ನೋಡದೆ ಮರಳಿ ಬರುತ್ತಿರಲಿಲ್ಲ. ಆದರೆ ಅದೇ ಆಗ ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾ ತರಗತಿಗೆ ಪ್ರವೇಶ ಪಡೆದ ನಿರ್ಮಲಾಳಿಗೆ ಮದುವೆಯ ಯೋಚನೆಯೂ ಇರಲಿಲ್ಲ. ಇನ್ನು ಒಂದು ವರ್ಷದ ಓದು ಮುಗಿದರೆ ಅವಳು ತನ್ನ ಓದು ಮುಗಿಸಿ ಡಿಪ್ಲೋಮಾ ಪಾಸು ಮಾಡುವ ನಿರೀಕ್ಷೆಯಲ್ಲಿ ಕಾದೆವು. ಆದರೆ ನಮ್ಮ ನಡುವಿನ ಸಂಬಂಧದ ಸುಳಿವು ಅವಳ ಪಾಲಕರ ಗಮನಕ್ಕೆ ಬಂದರೆ ನಮ್ಮ ವಿವಾಹ ಕಷ್ಟವೇ ಎಂಬ ಆತಂಕದಲ್ಲಿ ಅವಳು ವಿವಾಹಕ್ಕೆ ಸಮ್ಮತಿಸಿದಳು. ಈ ನಡುವೆ ನಮ್ಮ ವಿವಾಹ ಸಂಬಂಧ ನಡೆಯಲು ಅವಳ ಹಿರಿಯ ಅಕ್ಕ ಲಕ್ಷ್ಮಿ ಎಂಬುವವರು ಬೆಂಬಲವಾಗಿ ನಿಂತು ಧೈರ್ಯ ತುಂಬಿದರು. ೧೯೮೪ರ ಮೇ ತಿಂಗಳ ಒಂದು ದಿನ ನಾವು ಧಾರವಾಡದ ವಿವಾಹ ನೋಂದಣಿ ಕಛೇರಿಯಲ್ಲಿ ಕೇವಲ ನಾಲ್ಕಾರು ಜನ ಬಂಧುಗಳು-ಸ್ನೇಹಿತರ ಸಮ್ಮುಖದಲ್ಲಿ ವಿವಾಹ ಬಂಧನಕ್ಕೆ ಕಾಲಿಟ್ಟೆವು. ನಮ್ಮ ತಾಯಿ ತಂದೆಯರು ನನ್ನ ನಿರ್ಧಾರಕ್ಕೆ ಯಾವುದೇ  ಆಕ್ಷೇಪವೆತ್ತಲಿಲ್ಲ. ಸುಶಿಕ್ಷಿತರಾದ ನಮ್ಮ ತಂದೆಯವರು ಸಂದರ್ಭದ ಸೂಕ್ಷ್ಮ ವನ್ನು ಅರಿತು ನನ್ನನ್ನು ಬೆಂಬಲಿಸಿದರು. ತಾಯಿಯೂ ಒಪ್ಪಿಕೊಂಡು ನಿರ್ಮಲಾಳನ್ನು ಸೊಸೆಯಾಗಿ ಸ್ವೀಕರಿಸಿದಳು. ಆರಂಭದ ಕೆಲವು ದಿನಗಳವರೆಗೆ ತೀವೃ ಪ್ರತಿರೋಧ ವ್ಯಕ್ತಪಡಿಸಿದ ನಿರ್ಮಲಾಳ ತವರು ಮನೆಯ ಪರಿವಾರ ಕಾಲಕಳೆದಂತೆ ನಮ್ಮ ಸ್ಥಿತಿ-ಗತಿಗಳನ್ನು ಅರ್ಥಮಾಡಿಕೊಂಡು ನಮ್ಮ ವಿವಾಹ ಸಂಬಂಧವನ್ನು ಒಪ್ಪಿಕೊಂಡರು. ನಮ್ಮನ್ನು ಹುಬ್ಬಳ್ಳಿಗೆ ಕರೆಸಿಕೊಂಡು ತಮ್ಮ ಸಮಾಜ ಬಂಧುಗಳ ಸಮ್ಮುಖದಲ್ಲಿ ವಿವಾಹ ವಿಧಿಗಳನ್ನು ಮತ್ತೊಮ್ಮೆ ಪೂರೈಸಿ ವರೋಪಚಾರ ಇತ್ಯಾದಿಗಳಿಂದ ನಮ್ಮನ್ನು ಗೌರವಿಸಿ ಬೀಳ್ಕೊಟ್ಟರು. ಮರಾಠಿ ಮಾತ್ರ ಭಾಷೆಯ ಇಡಿಯ ಪರಿವಾರವೂ ಅಂದಿನಿಂದ ಇಂದಿನವರೆಗೂ ಗೌರವಪೂರ್ವಕವಾಗಿಯೇ ನಮ್ಮನ್ನು  ಬಾಂಧವ್ಯವನ್ನು ಮುಂದುವರೆಸಿದ್ದಾರೆ. “ಬೆಟ್ಟದ ನೆಲ್ಲಿಯ ಕಾಯಿ, ಸಮುದ್ರದೊಳಗಣ ಉಪ್ಪು” ಬೆರೆತಂತೆ ವಿಭಿನ್ನ ಸಂಸ್ಕೃತಿ-ಭಾಷೆ ಇತ್ಯಾದಿ ವ್ಯತ್ಯಾಸಗಳ ನಡುವೆಯೂ ಪರಸ್ಪರರನ್ನು ಅರ್ಥಮಾಡಿಕೊಂಡು ಗ್ರಹಸ್ಥ ಜೀವನ ನಡೆಸುವ ನಮ್ಮ ಸಂಕಲ್ಪ ಸಾಮಾಜಿಕವಾಗಿಯೂ ಗೌರವಾದರಗಳೊಂದಿಗೆ ಸಾಂಸಾರಿಕ ಜೀವನವನ್ನು ಮುನ್ನಡೆಸಲು ಸಾಧ್ಯವಾದದ್ದು ನಮ್ಮ ಅದೃಷ್ಟವೆಂದೇ ನಾನು ಭಾವಿಸಿದ್ದೇನೆ…. ರಾಮಕೃಷ್ಣ ಗುಂದಿ

“ಬಕ್ಕಳರ ಗಝಲ್ ಗಳು” ಎಂಬ ಸಂಕಲನ ಪ್ರಕಟಿಸುವುದಕ್ಕಿಂತಲೂ ಮುಂಚೆ ‘ಮಣ್ಣ ನೆನಪಿನ ಮೇಲೆ’ ಎಂಬ ಕವನ ಸಂಕಲನದಲ್ಲಿಯೂ ಬಕ್ಕಳ ಅವರು ತಮ್ಮ ಕೆಲವು ಗಜಲ್ ಗಳನ್ನು ಪ್ರಕಟಿಸಿದ್ದಾರೆ.

ಸಾಧಕಿಯರ ಯಶೋಗಾಥೆ

‘ ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ‌.
ಸಮಾಜ ಕಾರ್ಯಕರ್ತೆ “ಡಾರ್ಲಿಂಗ್ ಆಫ್ ದಿ ಆರ್ಮಿ” ಮೇರಿ ಕ್ಲಬ್‍ವಾಲಾ ಜಾಧವ್(1909-1975

ಅಂಕಣ ಬರಹ ತೊರೆಯ ಹರಿವು ‘ವ್ಯಾಕುಲತೆಯವ್ಯವಕಲನ’ ಆ ಕರು,‘ಅಂಬಾ…’ ಎಂದುಹೊಟ್ಟೆಯಿಂದರಾಗಕಡೆಸಿಮುಖತುಸುಮೇಲೆತ್ತಿಕೂಗುತ್ತಿದ್ದರೆ, ಅದುಮಾಮೂಲಿಕೂಗಿನಂತೆಕೇಳಲಿಲ್ಲ. ಅಡ್ಡರಸ್ತೆನಡುರಸ್ತೆಗಳಲ್ಲಿಗಾಬರಿಬಿದ್ದು, ಬೀದಿನಾಯಿಹಿಂಡಿನಬೊಗಳುವಿಕೆಗೆಬೆದರಿ, ಕಂಗಾಲಾಗಿಓಡುತ್ತಾ, ದೈನೇಸಿತನದಿಂದಕೂಗಿಡುತ್ತಿದ್ದರೆ, ಹೃದಯವಂತರುನಿಂತುನೋಡಿಕರಗುತ್ತಿದ್ದರು. ಜೊತೆಯಿದ್ದಮಕ್ಕಳು, ಕೈಗಟ್ಟಿಹಿಡಿದುಕೊಂಡುಅವರಮನದಅವ್ಯಕ್ತಭಯ-ವೇದನೆಯನ್ನುನನಗೆವರ್ಗಾಯಿಸಿದರು.ಸಂಜೆಸರಿದು, ಇರುಳುನಿಧಾನಕಾಲಿಡುತ್ತಿತ್ತು.ಕಚೇರಿಹಾಗೂಇತರೆಕೆಲಸಮುಗಿಸಿಮನೆಗೆಮರಳುತ್ತಿದ್ದುದರಿಂದಜನರಹಾಗೂವಾಹನಗಳಓಡಾಟತುಸುಜಾಸ್ತಿಯೇಇತ್ತು.ಪದೇಪದೇ‘ಅಂಬಾಅಂಬಾ…’ಎಂದುಕೂಗುತ್ತಿದ್ದಅತ್ತಕರುವೂಅಲ್ಲದಇತ್ತಬೆಳೆದುದೊಡ್ಡದಾಗಿರುವಹಸುವೂಅಲ್ಲದಆಕಳು ತನ್ನಗುಂಪಿನಸಂಪರ್ಕವನ್ನುಎಲ್ಲಿ,ಹೇಗೆಕಳೆದುಕೊಂಡಿತ್ತೋಏನೋಬಹಳಆತಂಕಪಡುತ್ತಾನೋಡುಗರನ್ನುಕಂಗೆಡಿಸಿತ್ತು. ಎಷ್ಟುಕಳವಳವಾಗುತ್ತದೆಏನನ್ನಾದರೂಕಳೆದುಕೊಂಡರೆ! ತುಂಬಾಪ್ರೀತಿಪಾತ್ರವಕ್ತಿ, ವಸ್ತುಗಳನ್ನುಕಳೆದುಕೊಂಡರೆಆಗುವಸಂಕಟವನ್ನುಬಣ್ಣಿಸುವಬಗೆತಿಳಿಯುವುದಿಲ್ಲ. ‘ಅರವತ್ತಕ್ಕೆಅರಳುಮರಳು’ಎನ್ನುವುದುಒಂದುರೂಢಿ.ವಯಸ್ಸುದಾಟಿದಂತೆ,ಸ್ಮೃತಿಕಳೆದುಕೊಳ್ಳುವುದುʼವಯೋಸಹಜಕಾಯಿಲೆʼಎನ್ನುವವೈದ್ಯವಿಜ್ಞಾನಈಗೀಗಹರೆಯದವರಲ್ಲಿಯೂನೆನಪಿನಶಕ್ತಿಕ್ಷೀಣಿಸುತ್ತಿರುವಬಗ್ಗೆಕಳವಳವ್ಯಕ್ತಪಡಿಸುತ್ತದೆ..ಆದರೆ, ಅಧಿಕಒತ್ತಡ, ಅಸಮತೋಲನದಆಹಾರ, ಯಂತ್ರೋಪಕರಣಗಳಮೇಲಿನಅತಿಯಾದಅವಲಂಬನೆ,ಪದೇಪದೇಬದಲಾಗುವದೈನಂದಿನರೂಢಿಗಳು, ನಿದ್ರಾಹೀನತೆಮೊದಲಾದವುಯುವಜನಾಂಗದಚುರುಕುನೆನಪನ್ನೂಮಾಸಲುಮಾಡುತ್ತವೆಏಕೆಎಂದುಸಂಶೋಧನೆಗಳುಚರ್ಚಿಸುತ್ತವೆ.ಅಲ್ಜೈಮರ್ಎನ್ನುವಮರೆವಿನ ಈ ಕಾಯಿಲೆಯುಯಾವರೀತಿಆಘಾತಗಳನ್ನುತರುತ್ತವೆನ್ನುವುದನ್ನೂಅಷ್ಟುಸುಲಭವಾಗಿಮರೆಯುವಂತಿಲ್ಲ. ಕೆಲವುಬಾರಿಕಹಿನೆನಪನ್ನುಕಳೆದುಕೊಳ್ಳುವುದುತುಂಬಾಸಹಕಾರಿ.ʼಸವಿನೆನಪುಗಳುಬೇಕು, ಸವೆಯಲೀಬದುಕು..ʼ, ಮರೆವುಅಥವಾಕಳೆದುಕೊಳ್ಳುವುದುಕೆಲವೊಮ್ಮೆವರದಾನವೂಹೌದು.ತೀರಾಬುದ್ಧಿವಂತರುಜಾಣಮರೆವಿನಮೊರೆಹೊಕ್ಕುಹಲವುಬಾಧೆಗಳನ್ನುಸುಲಭವಾಗಿಕಳೆದುಕೊಳ್ಳುತ್ತಾರೆ. ಬಾಲ್ಯದಲ್ಲಿಕಳೆದುಕೊಳ್ಳುವುದುಒಂದುರೀತಿಅಭ್ಯಾಸವೇಆಗಿಬಿಟ್ಟರುತ್ತದೆ.‘ಸ್ಲೇಟುಬಳಪಪಿಡಿದೊಂದ್ದಗ್ಗಳಿಕೆ’ (ಕುಮಾರವ್ಯಾಸನದ್ದುಹಲಗೆಬಳಪವಪಿಡಿಯದೊಂದ್ದಗಳಿಕೆ)ಯಕಾಲಮಾನದವರಾದನಾವುಮನೆಪಾಠಬರೆಯಲಾಗದೆ, ಉರುಹೊಡೆದುಪಾಠ/ಪದ್ಯಒಪ್ಪಿಸಲಾರದೆ, ಮೇಷ್ಟ್ರುಕೈಯಿಂದಬೀಳುವಏಟುತಪ್ಪಿಸಿಕೊಳ್ಳಲುಬೇಕಂತಲೇಬಳಪ, ಸ್ಲೇಟು, ಪುಸ್ತಕಗಳನ್ನುಕಳೆದುಕೊಳ್ಳುತ್ತಿದ್ದಅತೀಬುದ್ಧಿವಂತರು!ಸದಾಆಟದಮೇಲೆಗಮನಇಟ್ಟುಎಲ್ಲಿಬಿಟ್ಟಿದ್ದೆವೆಂಬುದನ್ನೇಮರೆತುಆಗಾಗ್ಗೆಹೊಚ್ಚಾನಹೊಸಚಪ್ಪಲಿಕಳೆದುಕೊಳ್ಳುವುದು, ಅಂಗಡಿಯಿಂದಪದಾರ್ಥತರಲುಕೊಟ್ಟಕಾಸನ್ನುಕಳೆದುಕೊಳ್ಳುವುದು,  ಅಮ್ಮ, ಅಪ್ಪ, ಅಕ್ಕ, ಅಣ್ಣಹೀಗೆಯಾರೋಹೇಳಿಕಳಿಸಿದ್ದಸಂದೇಶವನ್ನುಯಥಾಪ್ರಕಾರಆಟದನೆಪದಲ್ಲಿಮರೆತುನೆನಪುಕಳೆದುಕೊಂಡದ್ದು… ಹೀಗೆ, ಒಂದೇಎರಡೇ!? ಆದರೆ, ಆನ್‌ಲೈನ್‌ ಪಾಠಕಲಿಯುವಈಗಿನಮಕ್ಕಳು, ಈಮೇಲ್‌ ನೋಟ್ಕಳೆದುಹೋಯ್ತೆಂದುನಾಟಕಆಡುವಂತಿಲ್ಲ. ಏಕೆಂದರೆ,ಕಳೆದುದುರೀಸೈಕಲ್‌ ಬಿನ್ನಲ್ಲಿಕುಳಿತುಕಣ್ಣುಮಿಟುಕಿಸುತ್ತಿರುತ್ತದೆ. ವರ್ಷಂಪ್ರತಿಸಾವಿರಾರುಮೈಲುದೂರದಿಂದಹಾರಿಬರುವಆಲ್‌ ಬಟ್ರಾಸ್ಎಂಬಕಡಲಹಕ್ಕಿಗಳುತಮ್ಮಹಾದಿಜಾಡನ್ನೆಂದೂಕಳೆದುಕೊಳ್ಳುವುದಿಲ್ಲ. ನಿಖರಗುರಿನಿರ್ದಿಷ್ಟಉದ್ದೇಶಇದ್ದಾಗಯಾರೇಆಗಲಿ, ಯಾವುದನ್ನೇಆಗಲಿಕಳೆದುಕೊಳ್ಳುವುದುಅಷ್ಟುಸುಲಭವಲ್ಲ.ಕೆಲವೊಮ್ಮೆವಸ್ತುಗಳನ್ನುಮಾತ್ರವಲ್ಲ, ಸಂಬಂಧವನ್ನೂಕಳೆದುಕೊಂಡುಬಿಡುತ್ತೇವೆ. ಹಾಗೆಕಳೆದುಕೊಂಡಸಂಬಂಧಪುನಃಸಿಗುವುದುಒಂದುಸುಕೃತ. ದಕ್ಕಿದಸಂಬಂಧ,ಹಿಂದಿನಬಿಸುಪನ್ನುಹಾಗೆೇಉಳಿಸಿಕೊಂಡು, ಎದೆಯಲ್ಲಿಆರ್ದ್ರತೆತಂದುಕೊಟ್ಟರೆ, ಅದುನಿಜವಾದಬಾಂಧವ್ಯಎನಿಸುತ್ತದೆ.ಆತ್ಮಬಂಧುವನ್ನುಮರಳಿಪಡೆದನೆಮ್ಮದಿದಕ್ಕಿಸಿಕೊಂಡವರದ್ದಾಗುತ್ತದೆ. ಕೃಷ್ಣನನ್ನುಬೆಣ್ಣೆಕಳ್ಳಎನ್ನುವಮೂಲಕನಾವುಆತನಕಳ್ಳತನವನ್ನುಸಂಭ್ರಮಿಸುತ್ತೇವೆ! ಆದರೆ,ಈಸಂಭ್ರಮವನ್ನುಇತರೆ  ಕಳ್ಳರವಿಚಾರದಲ್ಲೂತೋರುತ್ತೇವೆಯಾ?ಕಳವಿನವಿಚಾರದಲ್ಲಿನಾವೇಏನನ್ನಾದರೂಕಳೆದುಕೊಳ್ಳುವುದಕ್ಕೂಬೇರೆಯವರುಕಳುವುಮಾಡುವುದಕ್ಕೂತುಂಬಾವ್ಯತ್ಯಾಸವಿದೆ.ಮೊದಲಸಂದರ್ಭದಲ್ಲಿನಮ್ಮಬೇಜವಾಬ್ದಾರಿತನಇದ್ದರೆ, ಎರಡನೆಯದರಲ್ಲಿಎದುರಿನವರಕೈಚಳಕ, ಚಾಣಾಕ್ಷತೆಮಿಗಿಲಾಗಿರುತ್ತದೆ.ಕಳವುಗೊಂಡಮಾಲುಸಮೇತಸಿಕ್ಕಿಬಿದ್ದರೆಕದ್ದಮಾಲುಹಿಂದಿರುಗಿಸುವಜೊತೆಗೆಅಗತ್ಯಶಿಕ್ಷೆಯನ್ನೂಅನುಭವಿಸಬೇಕಾದುದುಕಳ್ಳರಹಣೆಬರಹ. ಸಾಮಾನ್ಯವಾಗಿಮಕ್ಕಳನ್ನುಮುದ್ದಿನಿಂದ, ಲಿಂಗಬೇಧಮಾಡದೆ, ‘ಛೀಕಳ್ಳಾ.., ಛೀಕಳ್ಳೀ…’ಎನ್ನುವುದುರೂಢಿ.ಪಾಪ, ಆಮುಗ್ಧಶಿಶುಏನುಕದ್ದಿರುತ್ತದೆ! ಅದಕ್ಕೇನುತಿಳಿಯುತ್ತದೆ?ಎಂಬವಾದಕ್ಕೆಇಲ್ಲಿಎಡೆಯೇಇಲ್ಲ. ಅದುತನ್ನಅಪಾರಮುಗ್ಧಆಟಪಾಟಗಳಿಂದನೋಡುಗರನೋಟ, ಚಿತ್ತ, ಸಮಯವನ್ನುಸದ್ದುಗದ್ದಲವಿಲ್ಲದೇಕದ್ದು, ಮುದ್ದುಮಾಡಿಸಿಕೊಂಡು, ಪ್ರೀತಿಯಿಂದಕಳ್ಳಎಂಬಪಟ್ಟವನ್ನುಹೊತ್ತಿರುತ್ತದೆ. ಗುಂಪಿನಸಂಪರ್ಕಕಳೆದುಕೊಂಡುಹಿಂಡನಗಲಿದ್ದಆಕಳಿನಕೂಗಿನರೂಪದಲ್ಲಿ ಮಾರ್ದನಿಸಿದʼಕಳುವುʼಎಂಬವಿಚಾರನನ್ನೆದೆಯಲ್ಲಿಹಲವುವಿಚಾರಗಳನ್ನುಹೀಗೆಸಂಕಲಿಸಿತು.ಓಡಿಬಂದುಕೊರಳುತಬ್ಬುತ್ತಿದ್ದಮಕ್ಕಳುಬಹಳದಿನ ಆ ಕರುವನ್ನುನೆನಪಿಗೆತರುತ್ತಿದ್ದರು.ಅಚಾನಕ್ ಸಂಪರ್ಕಕಳೆದುಕೊಂಡಆಕಳಿನಅಸಹಾಯಕಬಂಧುಗಳುಬೇರೆಹಾದಿಯಲ್ಲೆಲ್ಲೋಪರಿತಪಿಸಿ, “ತಬ್ಬಲಿಯುನೀನಾದೆಯಾ…”ಎಂದುಚಡಪಡಿಸುವುದುನೆನಪುಕಳವಳಹುಟ್ಟಿಸುತ್ತಿತ್ತು.ಗಣಿತದಮೂಲಭೂತಪಾಠಗಳಾದಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರಗಳಲ್ಲಿವ್ಯವಕಲನಎಂದರೆ, ಕಳೆಯುವಲೆಕ್ಕವುಮುಂದೆಬದುಕಿನಲೆಕ್ಕಾಚಾರಗಳಲ್ಲಿಎಷ್ಟುಬಗೆಗಳಲ್ಲಿಕಾಡಬಹುದುಎಂಬುದುಬಾಲ್ಯದಲ್ಲಿಎಳ್ಳಷ್ಟೂಅರ್ಥವಾಗಿರಲಿಲ್ಲ. ಒಂದೆರಡುವಾರಕಳೆದಿತ್ತು, ಮನೆಯಮುಂದೆಗುಂಪಿನಲ್ಲಿಸಾಗುತ್ತಿರುವಹತ್ತಾರುಹಸುಗಳನಡುವಲ್ಲಿಮಕ್ಕಳುಅಂದಿನಕರುವನ್ನುಗುರುತಿಸಿತೋರಿದಾಗ, ನಾನೊಮ್ಮೆಹಗುರಾದೆ. ಅಂದುನಿಜವಾದಶುಭಸಂಜೆ.ವ್ಯಾಕುಲತೆತುಂಬಿದ್ದವ್ಯವಕಲನಹರ್ಷದಸಂಕಲನವಾಗಿತ್ತು. – ವಸುಂಧರಾಕದಲೂರು. ೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ

ಕನ್ನಡದ ಕವಿಗಳು ಸಾಹಿತ್ಯ ರಚನೆಗೆ ಬಹುಮೂಲಗಳಿಂದ ಪ್ರೇರಣೆ ಪಡೆವಾಗ ತೋರುವ ಭಾಷಾತೀತ ಧರ್ಮಾತೀತ ದೇಶಾತೀತ ಮುಕ್ತತೆಯನ್ನು, ದೇಶಕಟ್ಟುವ ತತ್ವವನ್ನಾಗಿಯೂ ರೂಪಿಸುತ್ತಾರೆ.

ಅಂಕಣ ಬರಹ

‘ ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ‌.
ಈ ವಾರ-
ಸ್ವಾತಂತ್ರ್ಯ ಹೋರಾಟಗಾರ್ತಿ ಜಾನಕಿ ದೇವಿ ಬಜಾಜ್ (1893-1979

“ನಾನು ದೇವರನ್ನು ಪ್ರೀತಿಸುವಾಕೆ,
ನನಗಿನಿತೂ ಸಮಯವಿಲ್ಲ
ಸೈತಾನನ ದ್ವೇಷಿಸಲು”
-ರಾಬಿಯಾ

. ಇಂದಿನ, ಯುವಜನಾಂಗ ಗಾಂಧೀ ಮಾದರಿಯ ಹೋರಾಟಕ್ಕೆ ಪ್ರತಿಕ್ರಿಯಿಸುತ್ತಿರುವುದು ಆಶಾದಾಯಕವಾಗಿದೆ. ಇದಕ್ಕೆ ಪ್ರಸ್ತುತ ಭ್ರಷ್ಟಾಚಾರ ವಿರೋಧಿ ಹೋರಾಟ ಒಂದು ಜ್ವಲಂತ ಉದಾಹರಣೆಯಾಗಿದೆ

Back To Top