ಅನುವಾದ ಸಂಗಾತಿ
ಅವರು ಬಂದಿದ್ದಾರೆ ಮೂಲ: ಅಲ್ಫಾನ್ಸಿನಾ ಸ್ಟಾರ್ನಿ (ಅರ್ಜೆಂಟೈನಾ) ಕನ್ನಡಕ್ಕೆ: ಕಮಲಾಕರ ಕಡವೆ ಅವರು ಬಂದಿದ್ದಾರೆ ಇಂದು ನನ್ನ ಅಮ್ಮ ಮತ್ತು ಅಕ್ಕನನ್ನ ನೋಡಲು ಬಂದಿದ್ದಾರೆ ಬಹಳ ಕಾಲ ಒಬ್ಬಂಟಿ ಇದ್ದೆ ನಾನುನನ್ನ ಕವಿತೆಯ ಜತೆ, ಗರ್ವದ ಜತೆ…ಮತ್ತೇನೂ ಇರಲಿಲ್ಲ ನನ್ನ ಹಿರಿಯಕ್ಕ, ದೊಡ್ಡವಳಾಗಿದ್ದಾಳೆ, ಕೆಂಚು ಕೂದಲವಳುಅವಳ ಕಣ್ಣ ತುಳುಕಿದೆ ಮೂಲಭೂತ ಕನಸುನಾನೆಂದೆ ಕಿರಿಯಳಿಗೆ: “ಬದುಕು ಬಲು ಸಿಹಿ.ಕೆಟ್ಟದ್ದೆಲ್ಲ ಕೊನೆಯಾಗುತ್ತದೆ. ಅಮ್ಮ ನಕ್ಕಳು, ಎಲ್ಲರ ಆಂತರ್ಯ ಅರಿತವರು ನಗುವಂತೆ;ನನ್ನ ಭುಜಗಳ ಮೇಲೆ ತನ್ನೆರಡೂ ಕೈಗಳ ಇಟ್ಟಳುನನ್ನನ್ನೇ ಕಣ್ಣುನೆಟ್ಟು ನೋಡಿದಳುನನಗೆ ಕಣ್ಣಲ್ಲಿ ನೀರು ಬಂತು. ಮನೆಯಲ್ಲೇ ಬೆಚ್ಚಗಿನ ಕೋಣೆಯಲ್ಲಿಕೂತು ಉಂಡೆವುವಸಂತದ ಮುಗಿಲು….ಅದನ್ನು ಕಾಣಲು, ಕಿಟಕಿ ತೆರೆದೆವು. ನಾವು ಸುಮ್ಮನೆ ಹಳೆಯದನೆಲ್ಲ ಮೆಲುಕುತ್ತಕೂತಿದ್ದಾಗನನ್ನ ತಂಗಿ – ಕಿರಿಯವಳು – ನಡುವೆ ಮಾತು ತೆಗೆಯುತ್ತಾಳೆ: *******
ಅನುವಾದ ಸಂಗಾತಿ
“ನಾನು ದಣಿದಿದ್ದೇನೆ” ಮೂಲ: ಟಿನ್ಜಿನ್ ತ್ಸುನದು(ಟಿಬೇಟಿಯನ್ ಕವಿ) ಕನ್ನಡಕ್ಕೆ: ಕಮಲಾಕರ ಕಡವೆ “ನಾನು ದಣಿದಿದ್ದೇನೆ” ನಾನು ದಣಿದಿದ್ದೇನೆ,ನಾನು ದಣಿದಿದ್ದೇನೆ ಮಾರ್ಚ ಹತ್ತರ ಆಚರಣೆ ಮಾಡುತ್ತಧರ್ಮಶಾಲಾದ ಗುಡ್ಡಗಳಿಂದ ಚೀರುತ್ತ. ನಾನು ದಣಿದಿದ್ದೇನೆ,ನಾನು ದಣಿದಿದ್ದೇನೆ ಹಾದಿಬದಿ ಸ್ವೇಟರುಗಳನ್ನ ಮಾರಾಟ ಮಾಡುತ್ತನಲ್ವತ್ತು ವರ್ಷಗಳ ಕಾಲಧೂಳು, ಎಂಜಲುಗಳ ನಡುವೆ ಕುಳಿತುಕೊಳ್ಳುತ್ತ. ನಾನು ದಣಿದಿದ್ದೇನೆಅನ್ನ, ದಾಲ್ ತಿನ್ನುತ್ತಾಕರ್ನಾಟಕದ ಜಂಗಲ್ಲುಗಳಲ್ಲಿ ದನ ಕಾಯುತ್ತ. ನಾನು ದಣಿದಿದ್ದೇನೆಮಂಜು-ತಿಲಾದ ಕೊಳಚೆಯಲ್ಲಿನನ್ನ ಧೋತಿಯ ಎಳೆದಾಡುತ್ತ. ನಾನು ದಣಿದಿದ್ದೇನೆ, ನಾನು ನೋಡೇ ಇಲ್ಲದನನ್ನ ನಾಡಿಗಾಗಿ ಹೋರಾಡುತ್ತ.*************ಮಾರ್ಚ್ ಹತ್ತು: ಟಿಬೆಟಿಯನ್ ಕ್ರಾಂತಿ ದಿನ*ಧರ್ಮಶಾಲಾ: ವಲಸೆಯಲ್ಲಿರುವ ಟಿಬೆಟಿಯನ್ ಸರಕಾರದ ಕೇಂದ್ರ*ಮಂಜು-ತಿಲಾ : ದೆಹಲಿಯ ಟಿಬೆಟಿಯನ್ ಕಾಲನಿ. ======= “I am Tired” I am tired,I am tired doing that 10th March ritual,screaming from the hills of Dharamsala. I am tired,I am tired selling sweaters on the roadside,40 years of sittingin dust and spit. I am tired,eating rice ‘n daland grazing cows in the jungles of Karnataka. I am tired dragging my dhotiin the dirt of Manju Tila. I am tired fighting for the countryI have never seen. Dhoti – sarong-like garment worn by men in IndiaManju Tila – Tibetan colony in Delhi called Majnu-ka-Tilla **********
ಅನುವಾದ ಸಂಗಾತಿ
“ನೂರರವರೆಗೆ ಎಣಿಸಿ ಕವಯಿತ್ರಿ ತಲೆಬಾಗಿ ಹೊರ ಬೀಳುತ್ತಾಳೆ” ಮೂಲ: ಆನಾ ಎನ್ರಿಕೇಟಾ ತೇರಾನ್ (ವೆನಿಜುವೆಲಾ) ಕನ್ನಡಕ್ಕೆ: ಕಮಲಾಕರ ಕಡವೆ “ನೂರರವರೆಗೆ ಎಣಿಸಿ ಕವಯಿತ್ರಿ ತಲೆಬಾಗಿ ಹೊರ ಬೀಳುತ್ತಾಳೆ” ಕವಯಿತ್ರಿ ತಾತ್ಕಾಲಿಕ ಗಿಡಮೂಲಿಕೆಗಳ ಒಟ್ಟುಮಾಡಿಕೊಳ್ಳುತ್ತಾಳೆಹಳತಾದ ಬ್ರೆಡ್ಡು, ಚೂರಿಗೆ ಸರಿಯಾದ ಬೂದಿ,ಫಲಿತಾಂಶಕ್ಕೆ ಮತ್ತು ಮೊದಲ ಆಚರಣೆಗಳಿಗೆ ಬೇಕಾದ ನಾರುಬೇರು.ಬಹುಶಃ ಅವಳಿಗೆ ಬಲಾಢ್ಯರು ತಮ್ಮದೆನುವ ಪರಂಪರೆ ಇಷ್ಟಅಧ್ಯಯನಶೀಲ ತಂಡ, ಕೈ ಖಾಲಿ, ಮುಚ್ಚಿದ ಎದೆ.ಯಾರು, ಅವನೋ, ಅವಳೋ? ಪ್ರಮಾಣಕ್ಕೆ ಬದ್ಧ, ಭವಿಷ್ಯಮುಖಿ:ಶಬ್ದಕ್ಕೆಂದು ಕಾದಿರುವ ನಾಯಿಯ ಕುಡಿ, ಸಂತನೆಡೆತಲುಪುವುದು ಹೇಗೆಂದು ಯಾಚಿಸುತ್ತ, ಅವಳ ಮಂಜಿನಂತ ನಾಲಿಗೆಯಿಂದ,ನಿನ್ನೆ ರಾತ್ರಿ ದೇಶದ ಬೆನ್ನ ಮೇಲೆ ಕಲ್ಲುಗಳಿದ್ದವುಹಳ್ಳಿ ಗಲ್ಲಗಳಿಗೆಲ್ಲ ಮಶಿ ಬಳಿದಿತ್ತು.ಬಳಿಕ ಅವರು ಧನ್ಯವಾದಗಳನು ಅರ್ಪಿಸಿದರು, ಕೈಕುಲುಕಿದರು, ಕೊಂಚ ಸುಳ್ಳಾಡಿದರುಜೂನ್ ಮತ್ತು ಜುಲೈ ಹಸಿವಿನಿಂದ ತಡೆಹಿಡಿದರು, ಹಸಿವು ಆದೀತು ಎಂದು.ನೂರರವರೆಗೆ ಎಣಿಸಿ ಒಳ್ಳೆಯ ಹುಡುಗಿ ತಲೆಬಾಗಿ ಹೊರ ಬೀಳುತ್ತಾಳೆನೂರರವರೆಗೆ ಎಣಿಸಿ ಕೆಟ್ಟ ಹುಡುಗಿ ತಲೆಬಾಗಿ ಹೊರ ಬೀಳುತ್ತಾಳೆನೂರರವರೆಗೆ ಎಣಿಸಿ ಕವಯಿತ್ರಿ ತಲೆಬಾಗಿ ಹೊರ ಬೀಳುತ್ತಾಳೆ. “The Poetess Counts to 100 and Bows Out” The poetess gathers interim herbage,aged bread, ash right for the knife,herbs for the outcome and the first rites.Maybe she likes the legacy the strong ones claim,the studious group, hands free, hearts shut.Who, he or she? oathbound, bound for the future:Scions of a bitch baying so sweetly for the word, begging howto get to the saint, her mistful tongue.Last night there were stones on a nation’s back,much coal smeared on far village cheeks.But then they gave thanks, shook hands, told some lies,pulled back June and July for hunger. That there might be hunger.The good girl counts to 100 and bows out.The bad girl counts to 100 and bows out.The poetess counts to 100 and bows out.
ಅನುವಾದ ಸಂಗಾತಿ
“ದುಃಖ” ಮೂಲ ಸುಮನಾ ರಾಯ್(ಇಂಗ್ಲೀಷ್) ಕನ್ನಡಕ್ಕೆ:ಕಮಲಾಕರ ಕಡವೆ “ದುಃಖ” ದುಃಖ ಒಂದು ಬಿಳಿ ಆಕಳ ಮೇಲೆ ಕೂತ ಬಿಳಿ ಕೊಕ್ಕರೆಒಂದು ಮಾತ್ರ ಇನ್ನೊಂದರ ತೂಕ ಸಹಿಸ ಬಲ್ಲದು ದುಃಖ ನದಿತೀರದ ಬಿಳಿ ಮರಳುಅದು ಒದ್ದೆಯಾಗಿದ್ದಾಗಲೂ ಬಿಳಿಯೇ. ದುಃಖ ಬೇಲಿ ಮೇಲಣ ಬಿಳಿ ದಾಸವಾಳಅದಕ್ಕೆ ಬಿಳಿ ಮೊಗ್ಗು, ಬಿಳಿ ಹೆಣ. ದುಃಖ ಮಂಜು-ಮುಸುಕಿದ ಮರ, ಬಿಳಿ ರೆಪ್ಪೆಗೂದಲುಅದರ ಹೆಣೆಗಳು ತಮ್ಮದೇ ತೂಕದಿಂದ ಜೋಲುತ್ತವೆ. ದುಃಖ ಕಾಡಾನೆಯ ದಂತ, ಚೂಪು, ವರ್ಷಾನುವರ್ಷಗಳ ಶೇಖರಣೆಅದರ ಸೌಂದರ್ಯ, ಶೋಭೆ ದೂರದಿಂದ ಮಾತ್ರ. ದುಃಖ ಕಣ್ಣ ಬಿಳಿಪಾಪೆ, ನೋವು ತೊಟ್ಟಿಕ್ಕುವ ಪರದೆಅದು ತನ್ನ ತಾ ತೊಳೆದು, ಕೆಂಪಾಗಿ, ಮತ್ತೆ ಬಿಳಿಗೆ ತಿರುಗುತ್ತದೆ ದುಃಖ ಒಂದು ಸಂಗ್ರಹಾಲಯ, ಬಿಳಿ ಗೋಡೆ ಮೇಲಿನ ಚಿತ್ರಗಳುನಾವದನು ಬಿಟ್ಟರೂ, ಅದು ಬಿಡದು ನಮ್ಮನು ************ Sadness Sadness is a white crane on a white cow.Only one can bear the weight of another. Sadness is white sand on a river bank.It is white even when wet. Sadness is white hibiscus resting on a fence.It has a white bud and a white corpse. Sadness is a snow-covered tree, eyelashes of white.Its branches droop with its own weight. Sadness is a wild elephant’s tusk, sharp, a deposition of years.It has beauty and grace only from a distance. Sadness is the sclera, the screen from which hurt drips.It washes itself, tinges red and becomes white again. Sadness is a museum, pictures on white walls.You leave it but it never leaves you. ***********
ಅನುವಾದ ಸಂಗಾತಿ
ಅಂಥ ಹೆಣ್ಣಲ್ಲ ನಾನು… ಮೂಲ: ಕಿಶ್ವರ್ ನಾಹಿದ್ ಕನ್ನಡಕ್ಕೆಚಂದದ್ರಪ್ರಭ .ಬಿ. ಅಂಥ ಹೆಣ್ಣಲ್ಲ ನಾನು… ಸಂತೆಯಲ್ಲಿ ನಿಂತು ನೀವು ಬಯಸುವುದನ್ನೇ ನಿಮಗೆ ಮಾರಾಟ ಮಾಡುವ ಅಂಥವಳು ನಾನಲ್ಲ ನೆನಪಿಟ್ಟುಕೊಳ್ಳಿ, ನೀವು ನಿಮ್ಮ ಕೈಯಾರೆ ನಿರ್ಮಿಸಿದ ಕಲ್ಲಿನ ಕೋಟೆಯ ನಡುವೆ ಸುಭದ್ರವಾಗಿ ಬಂಧಿಸಿಟ್ಟ ಅವಳು, ನಾನು ಕಲ್ಲ ಗೋಡೆಗಳು ನನ್ನ ಧ್ವನಿಯನ್ನು ಬಂಧಿಸಲಾರವು ಎಂಬ ಸತ್ಯವನು ನೀವು ಅರಿಯದೆ ಹೋದಿರಿ ರೂಢಿ ಸಂಪ್ರದಾಯದ ಹೆಸರಲ್ಲಿ ಏನೆಲ್ಲವನು ನೀವು ನುಚ್ಚು ನೂರು ಮಾಡಿದಿರೊ ಆ ಅವಳೇ ನಾನು ನೀವು ಅರಿಯಲು ವಿಫಲರಾದಿರಿ ಕತ್ತಲೆಯ ಗರ್ಭದಲ್ಲಿ ಬೆಳಕನ್ನು ಬಂಧಿಸಲಾಗದು ನೆನಪಿಟ್ಟುಕೊಳ್ಳಿ ಯಾರ ಮಡಿಲಿನ ನವಿರಾದ ಹೂ ದಳಗಳನ್ನು ಕಿತ್ತೆಸೆದು ಅಲ್ಲಿ ಮುಳ್ಳುಗಳನ್ನು ಪ್ರತಿಷ್ಠಾಪಿಸಿದಿರೊ ಆ ಅವಳೇ ನಾನು ನಿಮಗೆ ತಿಳಿದಿಲ್ಲದಿರಬಹುದು… ಆದರೆ ಸಂಕೋಲೆಗಳು ಪರಿಮಳವನ್ನು ಉಸಿರುಗಟ್ಟಿಸಿ ಹೊಸಕಲಾರವು ಶೀಲ ಚಾರಿತ್ರ್ಯಗಳ ಹೆಸರಿನಲ್ಲಿ ಮಾರಾಟದ ಸರಕಾಗಿಸಿದ ಆ ಅವಳು ನಾನಲ್ಲ ಅರಿಯಲು ಸೋತಿರಿ ನೀವು ಮಡುವಿನಲ್ಲಿ ಮುಳು ಮುಳುಗಿಸಿ ಉಸಿರುಗಟ್ಟಿಸಿ ನನ್ನ ಹೊಸಕಿದೆನೆಂದು ನೀವು ಬೀಗುವಾಗಲೂ ನೀರ ಮೇಲೆ ನಾ ನಡೆಯಬಲ್ಲೆ ಎಂಬುದನು ನನ್ನನ್ನು ಒಂದು ಹೊರೆಯೆಂದು ಬಗೆದು ಪೀಡೆ ತೊಲಗಿ ಹೋಗಲೆಂದು ಅವಸರಿಸಿ ಯಾರಿಗೊ ಕೊಟ್ಟು ಕೈ ತೊಳೆದುಕೊಂಡ ಆ ಅವಳು ನಾನು ಇನ್ನಾದರೂ ಅರಿಯಿರಿ ಬುದ್ದಿಗೂ ಭಾವಕೂ ಸಂಕೋಲೆ ತೊಡಿಸಿದ ದೇಶಕ್ಕೆ ಸ್ವಾತಂತ್ರ್ಯವೆಲ್ಲಿ? ಪ್ರಗತಿಯೆಲ್ಲಿ? ಯಾರ ಚೈತನ್ಯ ತಾಯ್ತನ ನಿಷ್ಠೆಗಳನ್ನು ಮಾರಾಟದ ಸರಕಾಗಿಸಿದಿರೊ ಆ ಅವಳು ನಾನು ನನಗೀಗ ಅರಳುವ ಸಮಯ ಜಾಹೀರಾತಿನ ಗೋಡೆಯ ಮೇಲೆ ಅರೆ ಬೆತ್ತಲೆ ಅರೆ ಪ್ರಜ್ಞಾವಸ್ಥೆಯಲ್ಲಿ ಮಾರಾಟಕ್ಕೆ ನಿಂತ ಆ ಅವಳೇ? ಅಲ್ಲ, ಅಲ್ಲಲ್ಲ.. ನಾನು ಅವಳಲ್ಲವೇ ಅಲ್ಲ ***** I Am Not That Woman I am not that woman Selling you socks and shoes! Remember me, I am the one you hid In your walls of stone, not knowing That my voice cannot be smothered by stones I am the one you crushed With the weight of custom and tradition Not knowing That light cannot be hidden in darkness. Remember me, I am the one whose lap You picked flowers And planted thorns and embers Not knowing That chains cannot smother my fragrance I’m not that woman Whom you bought and sold In the name of chastity Not knowing That I can walk on water When I am drowning I am the one you married off To get rid of a burden Not knowing That a nation of captive minds Cannot be free I am the commodity you traded in My chastity, my motherhood, my loyalty Now it is time for me to flower free. The woman on the post, half naked selling socks and shoes — No, no, I am not that woman.
ಅನುವಾದ ಸಂಗಾತಿ
ವೇದಗಳಿಗೂ ಮುನ್ನ ನೀನಿದ್ದೆ ಮೂಲ:ಬಾಬುರಾವ್ ಬಾಗುಲ್(ಮರಾಠಿ) ಕನ್ನಡಕ್ಕೆ: ಕಮಲಾಕರ ಕಡವೆ “ವೇದಗಳಿಗೂ ಮುನ್ನ ನೀನಿದ್ದೆ” ವೇದಗಳಿಗೂ ಮುನ್ನ ನೀನಿದ್ದೆದೈವಗಳ ಹುಟ್ಟಿಗೂ ಮುನ್ನ;ಕಂಡು ಪಂಚಭೂತಗಳ, ಅವುಗಳ ವಿರಾಟ, ವಿಕಾರ ಸ್ವರೂಪವ್ಯಥಿತನಾಗಿ, ವ್ಯಾಕುಲಗೊಂಡುಕೈಯೆತ್ತಿ ಪ್ರಾರ್ಥಿಸುತ್ತಿದ್ದೆ ನೀನುಆ ಪ್ರಾರ್ಥನೆಗಳೇ ಧರ್ಮಗ್ರಂಥಗಳಾದವುಎಲ್ಲ ದೈವಗಳ ಜನ್ಮವ ಆಚರಿಸಿದವ ನೀನುಎಲ್ಲ ದೇವದೂತರ ಹೆಸರಿಟ್ಟು ಆನಂದಿಸಿದವ ನೀನೇಓ ಮಾನವನೇ, ಸೂರ್ಯನಿಗೆ ಸೂರ್ಯನೆಂದವ ನೀನುಆಗಲೇ ಸೂರ್ಯ ಸೂರ್ಯನಾದದ್ದುಚಂದ್ರನಿಗೆ ನೀನು ಚಂದ್ರನೆಂದಾಗಲೇಚಂದ್ರ ಚಂದ್ರನಾದದ್ದುನೀನೇ ಇಡೀ ವಿಶ್ವದ ನಾಮಕರಣ ಮಾಡಿರುವೆಎಲ್ಲ ಬಲ್ಲರು, ಓ ಪ್ರತಿಭಾಶಾಲಿ ಮಾನವನೇ,ನೀನೇ ಕಾರಣೀಭೂತನಿನ್ನಿಂದಲೇ ಈ ಜಗವು ಸುಂದರ, ನಿನ್ನಿಂದಲೇ ಜೀವಂತ*********
ಅನುವಾದ ಸಂಗಾತಿ
ಪ್ರೀತಿ..ಪ್ರೇಮ..ಶೇಕ್ಸ್‌ಪಿಯರ್.. ಇಂಗ್ಲಿಷ್ ಮೂಲ : ವಿಲಿಯಂ ಶೇಕ್ಸ್‌ಪಿಯರ್ ಅನುವಾದ : ಚಂದ್ರಪ್ರಭಾ ಪ್ರೀತಿ..ಪ್ರೇಮ..ಶೇಕ್ಸ್‌ಪಿಯರ್… ಕೆಲವು ಸಂಗತಿಗಳೇ ಹಾಗೆ. ಭಾವಕ್ಕೆ ನಿಲುಕಿದಂತೆ ಭಾಷೆಗೆ ನಿಲುಕುವುದೇ ಇಲ್ಲ. ಅದನೆಲ್ಲ ನೀವು ಆಸ್ವಾದಿಸಬಲ್ಲಿರಿ ಆದರೆ ಬಣ್ಣಿಸಲಾರಿರಿ. ಅಂಥ ಒಂದು ಸಂಗತಿ ಪ್ರೀತಿ. ಈ ಸೃಷ್ಟಿಯ ಸಕಲವನ್ನೂ ಒಂದೆಳೆಯಲ್ಲಿ ಬಂಧಿಸಿಟ್ಟಿರುವುದು ಪ್ರೀತಿಯೊಂದೇ. ಬಳ್ಳಿಗೆ ಆಸರೆಯಾದ ಮರ.. ದುಂಬಿಗೆ ಮಕರಂದವನೀವ ಹೂವು.. ಎದೆಯಮೃತ ಉಣಿಸಿ ಜೀವನವನ್ನೇ ಧಾರೆಯೆರೆವ ತಾಯಿ.. ಬೆರಳು ಹಿಡಿದು ನಡೆಯಿಸಿ ನಡಿಗೆ ಕಲಿಸುವ ಅಪ್ಪ.. ದಣಿವಿಗೆ ಆಸರೆಯಾಗುವ ಇರುಳು.. ದುಡಿಮೆಗೆ ಮುನ್ನುಡಿ ಬರೆವ ಹಗಲು.. ಓಡೋಡಿ ಬಂದ ನದಿಗೆ ಒಡಲಾಗುವ ಕಡಲು.. ಕಾರ್ಮುಗಿಲ ಅಂಚಿನಲ್ಲೂ ಹೊಳೆವ ಬೆಳ್ಳಿ ಗೆರೆ.. ಗಗನ,ತಾರೆ,ಚಂದ್ರ,ಚಂದ್ರಿಕೆ.. ಅಳು, ನಗು, ಒಲವು,ಚೆಲುವು, ರಾಗ ದ್ವೇಷ… ಎಲ್ಲದರಾಚೆ ನಿಂತು ಮುಗುಳ್ನಗುವ ಅನಂತ ಒರತೆ ಪ್ರೀತಿ. ಪ್ರೀತಿ ಬೀಜ.. ದ್ವೇಷ ಕಳೆ ಕಸ. ಬೆಳೆಯುವಾಗ ಬಿರಬಿರನೆ ಬೆಳೆದು ಬಿಡುವಾಗಲೂ ಹಸಿವೆಗೆ ಅನ್ನವಾಗುವುದು ಬೀಜ ಮಾತ್ರ. ಈ ಪ್ರೀತಿಯ ಕುರಿತು ವ್ಯಾಖ್ಯಾನ ಬರೆದವರು ಅದೆಷ್ಟೋ ಜನ. ಆದರೆ ಇಂಗ್ಲಿಷ್ ಸಾಹಿತ್ಯದ ಮೇರು ಎನಿಸಿದ ಶೇಕ್ಸ್‌ಪಿಯರ್ ತನ್ನ ಸಾನೆಟ್ಟುಗಳಲ್ಲಿ ಪ್ರೀತಿಯ ಕುರಿತು ಹೇಳುವ ಖಚಿತ ಮಾತು ಎಲ್ಲ ಕಾಲದಲ್ಲೂ ಎಲ್ಲರಿಗೂ ಆಪ್ಯಾಯಮಾನವೆನಿಸಿವೆ. ತನ್ನ ಬಹುತೇಕ ಸಾನೆಟ್ಟುಗಳಲ್ಲಿ ಆತ ಪ್ರೀತಿಯ ಚಿರಂತನತೆ, ಘನತೆ, ಹಿರಿಮೆಯನ್ನು ಕುರಿತು ಬಣ್ಣಿಸುವನಾದರೂ ೧೧೬, ೧೩೦, ೧೪೭ ನೇ ಸಾನೆಟ್ಟುಗಳಲ್ಲಿ ಈ ಭಾವ ಹರಳುಗಟ್ಟಿ ನಿಂತಂತೆ ತೋರುತ್ತದೆ. ಕಾಲವನ್ನೂ ಮೀರಿದ ಅಮರತ್ವದ ಅಸ್ಮಿತೆಯನ್ನು ಕವಿ ಇಲ್ಲಿ ಪ್ರೀತಿಗೆ ಕೊಡುವುದನ್ನು ಓದಿ ಅನುಭವಿಸಿ ಆನಂದಿಸುವುದೇ ಸೊಗಸು. ಕಾಲವನ್ನು ಮೀರುವುದು ಮಾತ್ರವಲ್ಲ ಕಾಲದ ಪರಿಣಾಮಕ್ಕೆ ಅಧೀನವಾಗುವ ಚೆಲುವು, ತಾರುಣ್ಯಗಳಂಥ ಕ್ಷಣಿಕತೆಯನ್ನು ಮೀರಿದ ಅಂತರಂಗದ ನೈಜ ಪ್ರಭೆಯನ್ನಾಗಿ ಕವಿ ಪ್ರೀತಿಯನ್ನು ನಿರೂಪಿಸುವುದು ಆ ಕುರಿತು ಆತನಿನನ್ನ ವ ವಿಶಾಲ, ಸುಸ್ಪಷ್ಟ, ನಿಖರ ನಿಲುವಿನ ದ್ಯೋತಕವಾಗಿ ಕಂಡು ಬರುತ್ತದೆ. ತೆರೆದ ಮನಸ್ಸಿನ ಇಂಥ ವಸ್ತುನಿಷ್ಠ ನಿರೀಕ್ಷಣೆಗಳೇ ಆತನನ್ನು ಆರಾಧಿಸುವಂತೆ ಪ್ರೇರೇಪಿಸುತ್ತವೆ. ೧೧೬ ನೇ ಸಾನೆಟ್ಟಿನ ಕೆಲ ಸಾಲುಗಳಂತೂ ಗಾದೆ ಮಾತಿನಂತೆ ಬಳಕೆಯಾಗುವುದಿದೆ. ಶೇಕ್ಸ್‌ಪಿಯರ್ ನನ್ನು ಅನುವಾದಿಸಲು ತೊಡಗುವುದು ಹುಡುಗಾಟವಲ್ಲ.. ಆದರೂ ಒಂದು ಪ್ರಯತ್ನವಾಗಿ ಈ ನನ್ನ ಅನುವಾದ.. ಸುನೀತ-116 ನಿಜವಾದ ಹೃದಯಗಳ ಮಿಲನದಲ್ಲಿ ಅಡೆತಡೆ ನುಸುಳುವುದನ್ನು ನಾನು ನಿರಾಕರಿಸುತ್ತೇನೆ ಹೊರಳುವ ಹೊತ್ತಿನೊಂದಿಗೆ ಬಣ್ಣ ಬದಲಿಸುತ್ತ ಸಾಗಿದ್ದು ಉಳಿ ತಾಕಿದೊಡನೆ ಬಾಗಿದ್ದು ಪ್ರೀತಿಯೇ ಅಲ್ಲ; ಹೌದು, ಅದೊಂದು ಶಾಶ್ವತ ಗುರುತು ಮತ್ತದು ಅಚಲವಾಗಿ ನಿಂತು ಬಿರುಗಾಳಿಯನ್ನೂ ದಿಟ್ಟಿಸುವುದು ದಿಕ್ಕೆಟ್ಟ ದೋಣಿಗಳಿಗೆ ದಿಕ್ಕು ತೋರಿದುವ ದೀಪಸ್ತಂಭವದು ಅದರ ಮೌಲ್ಯವನ್ನು ಅಳೆಯಲಾಗದು ನಿಜ ಆದರೆ, ಖಂಡಿತ ಸಾಧ್ಯವಿದೆ ಆ ಎತ್ತರವನ್ನು ತಲುಪುವುದು ಗುಲಾಬಿ ಕೆನ್ನೆ ಹವಳದ ತುಟಿ ಕಾಲನ ಕುಡುಗೋಲ ಪರಿಧಿಗೆ ಸಿಲುಕುವುದು ನಿಶ್ಚಿತ ಆದರೆ ಕಾಲ ಹೊಸಕಬಹುದಾದ ಹೂವಲ್ಲ ಪ್ರೀತಿ ನನ್ನ ಈ ನಿಲುವು ನಿಮಗೆ ಮಿಥ್ಯೆ ಎಂದು ತೋರಿದರೆ ಈ ಸಾಲುಗಳ ನಾ ಬರೆಯುತ್ತಲೂ ಇರಲಿಲ್ಲ, ಮನುಷ್ಯನೆಂದೂ ಪ್ರೀತಿ ಮಾಡುವ ಸಾಹಸಕ್ಕೆ ಇಳಿಯುತ್ತಲೂ ಇರಲಿಲ್ಲ *************
ಅನುವಾದ ಸಂಗಾತಿ
ಅಂಚು ಮೂಲ: ಸಿಲ್ವಿಯಾ ಪ್ಲಾತ್(ಅಮೇರಿಕಾ) ಕನ್ನಡಕ್ಕೆ: ಕಮಲಾಕರ ಕಡವೆ “ಅಂಚು” ಪರಿಪೂರ್ಣಗೊಂಡಿರುವ ಹೆಣ್ಣು.ಅವಳ ಸತ್ತ ದೇಹ ಧರಿಸಿದೆ ಸಾಧನೆಯ ನಸುನಗುವ,ಗ್ರೀಕರ ಭ್ರಮೆಯೊಂದು ಹರಿದಿದೆ ಅವಳ ಮೇಲುಡಿಪಿನ ಪದರುಗಳಲ್ಲಿ.ಅವಳ ನಗ್ನ ಪಾದಗಳು ಹೇಳುವಂತಿದೆನಾವು ಇಷ್ಟು ದೂರ ಬಂದಿದ್ದೇವೆ, ಇನ್ನು ಮುಗಿಯಿತು. ಸತ್ತ ಪ್ರತಿ ಮಗುವನ್ನೂ ಸುತ್ತಿಟ್ಟುಕೊಂಡು, ಬಿಳಿ ಸರ್ಪದಂತೆ,ಒಂದೊಂದೂ ಈಗ ಖಾಲಿಯಾದ ಚಿಕ್ಕ ಹಾಲಿನ ಕೊಡಕ್ಕೆ ತಾಗಿ,ಅವಳು ಮಡಿಚಿ ಕೊಂಡಿದ್ದಾಳೆ ಅವರನ್ನು ತನ್ನ ದೇಹದೊಳಕ್ಕೆ, ಮುಚ್ಚಿಕೊಂಡ ಗುಲಾಬಿಯಪಕಳೆಗಳಂತೆ, ಸೆಟೆದುಕೊಂಡ ಹೂದೋಟದಲ್ಲಿ, ರಾತ್ರಿ ಹೂವಿನಆಳ ಗಂಟಲಿನಿಂದ ಸಿಹಿ ಕಂಪು ಸ್ರಾವಿಸಿದೆ. ತನ್ನ ಎಲುಬಿನ ಹೆಡೆಯಡಿಯಿಂದ ಬಿರುನೋಟ ಬೀರುತ್ತಚಂದ್ರನಿಗೆ ಇದರಲ್ಲಿ ದುಃಖ ಪಡುವಂತದೇನೂ ಕಾಣುತ್ತಿಲ್ಲ ಅವನಿಗೆ ಇವುಗಳೆಲ್ಲ ಗೊತ್ತಿದ್ದದ್ದೇಅವನ ಕಲೆಗಳು ಕಟಕಟಿಸಿ ಸೆಳೆಯುತ್ತವೆ. “EDGE” The woman is perfected.Her deadBody wears the smile of accomplishment,The illusion of a Greek necessityFlows in the scrolls of her toga,Her bareFeet seem to be saying:We have come so far, it is over.Each dead child coiled, a white serpent,One at each littlePitcher of milk, now empty.She has foldedThem back into her body as petalsOf a rose close when the gardenStiffens and odors bleedFrom the sweet, deep throats of the night flower.The moon has nothing to be sad about,Staring from her hood of bone.She is used to this sort of thing.Her blacks crackle and drag. *********
ಅನುವಾದ ಸಂಗಾತಿ
ಮೂಲ: ಮೇರಿ ಆಲಿವರ್(ಅಮೇರಿಕನ್) ಕನ್ನಡಕ್ಕೆ: ಕಮಲಾಕರ ಕಡವೆ ಪ್ರಾರ್ಥನೆ ಏನೆಂದು ಅರಿಯೆ ನಾನು” ಪ್ರಾರ್ಥನೆ ಏನೆಂದು ಸರಿಯಾಗಿ ತಿಳಿಯದು ನನಗೆನನಗೆ ತಿಳಿದಿದ್ದೆಂದರೆ, ಹೇಗೆ ಲಕ್ಷ್ಯವಿಟ್ಟು ಕೇಳುವದು, ಹೇಗೆ ಬೀಳುವದುಹುಲ್ಲಿನ ಮೇಲೆ, ಹೇಗೆ ಮಂಡಿಯೂರಿ ಹುಲ್ಲ ಮೇಲೆ ಕೂರುವದುಹೇಗೆ ಸೋಮಾರಿಯಾಗಿದ್ದು ಖುಷಿಯಾಗಿರುವದುಹೇಗೆ ಹೊಲದ ಉದ್ದ ನಡೆಯುವದು, ಇವುಗಳೇ ನಾನು ದಿನವಿಡೀ ಮಾಡುತ್ತಲಿರುವದು.ಹೇಳಿ, ಮತ್ತೇನ ಮಾಡ ಬೇಕಿತ್ತು?ಎಲ್ಲವೂ ಕೊನೆಗೆ ಕೊನೆಯಾಗುತ್ತಾವಲ್ಲವೇ, ಸ್ವಲ್ಪ ಬೇಗನೆ?ಹೇಳಿ, ನೀವೇನ ಮಾಡುವಿರಿ ನಿಮ್ಮ ಇರುವ ಒಂದು ಅಮೂಲ್ಯ ಅಪಕ್ವ ಬಾಳಿನಲ್ಲಿ? “I Don’t Know What prayer Is“ I don’t know exactly what a prayer is.I do know how to pay attention, how to fall downinto the grass, how to kneel down in the grass,how to be idle and blessed, how to stroll through the fields,which is what I have been doing all day.Tell me, what else should I have done?Doesn’t everything die at last, and too soon?Tell me, what is it you plan to doWith your one wild and precious life ********************************
ಅನುವಾದ ಸಂಗಾತಿ
ಚೆ ಗುವೆರಾನ ಮುಖ ಇದ್ದ ಮನುಷ್ಯ ಮೂಲ:ವಾಷಿಂಗ್ಟನ್ ಕುಕುರ್ಟೋ ಕನ್ನಡಕ್ಕೆ:ಕಮಲಾಕರ ಕಡವೆ ಚೆ ಗುವೆರಾನ ಮುಖ ಇದ್ದ ಮನುಷ್ಯ ಅವನು ಚೆ ಯ ಟ್ಯಾಟೂವ ತನ್ನ ತೋಳುಗಳ ಮೇಲೆ ಹೊಂದಿದ್ದಆ ಕಾಲದಲ್ಲಿ ಯಾರೂ ಟ್ಯಾಟೂ ಹಾಕಿ ಕೊಳ್ಳುತ್ತಿರಲಿಲ್ಲಆ ಕಾಲದಲ್ಲಿ ಯಾರಿಗೂ ಚೆ ಗೊತ್ತೂ ಇರಲಿಲ್ಲಹಾಗಿದ್ದಾಗ ಅವನು ಟ್ಯಾಟೂ ಹಾಕಿಸಿ ಕೊಂಡಿದ್ದ “ಯಾಕಪ್ಪಾ ಹಾಗೆ ಟ್ಯಾಟೂ ಹಾಕಿಸ್ ಕೊಂಡಿದ್ದಿ”ನನ್ನ ಅಜ್ಜಿ ಕೇಳಿದಳು, “ಒಳ್ಳೇ ಜೈಲಿಂದ್ ಹೊರ ಬಂದೋರುಹಾಕಿಸ್ಕೊತಾರಲ್ಲ ಹಾಂಗೆ”.“ಅಮ್ಮ, ಇನ್ನೇನು ನಮ್ ಲೈಫು ಅಂದ್ರೆ,ದೊಡ್ಡದೊಂದು ಜೈಲು ಅಲ್ದಿದ್ರೆ?”ಚೆ ಇನ್ನೂ ಚೆ ಆಗೋಕೆ ಶತಮಾನ ಇರೋವಾಗ್ಲೇಅವನು ತೋಳುಗಳ ಮೇಲೆ ಟ್ಯಾಟೂ ಹಾಕಿಸಿ ಕೊಂಡಿದ್ದಯಾರೂ ಟ್ಯಾಟೂ ಹಾಕಿಸ್ಕೊಳ್ಳೋ ಇರ್ತಾ ಇರದ ಕಾಲದಲ್ಲಿ.ಇಂದು, ಕ್ರಿಸ್ಮಸ್ ನ ಒಂದು ದಿನದ ಮೊದಲುನಾನು ಅವನಿಗೆ ಫೋನು ಮಾಡಿದ್ದೆ, ಹ್ಯಾಪಿ ಹೋಲಿಡೇಸ್ ಹೇಳಲು.ಅವನು ಫೋನು ಉತ್ತರಿಸಿದಾಗ ಪೂರಾ ಕುಡಿದಿದ್ದನನ್ನ ದನಿ ಕೇಳಿ ಅವನಿಗೆ ಖುಷಿ ಆಗಿತ್ತುಆದರೂ ಅವನು ಅದೇನೋ ಹಿಮದ ಕುರಿತು ಮಾತಾಡಿದ್ದ“ಹಿಮದಲ್ಲಿ ಸಿಮ್ಯುಲೇಷನ್ ಮಾಡಿದಂಗೆ ನೀನು ಕಣೋ”ನನ್ನ ಅಪ್ಪ ಸಾರಾಯಿ ಸಾಹೇಬಾಳ ಬಳಿ ಮರಳಿ ಹೋಗಿದ್ದಅವನು ಅವಳಿಗೆ ವಾಪಸಾಗಿದ್ದ“ನಿನ್ನ ಮಕ್ಳು ಎಷ್ಟು ಚಂದ ಇದಾರೋ, ಅಣ್ಣ”ಅಪ್ಪ ನನ್ನ ಅಣ್ಣ ಅಂತ ಕರೆಯೋದು“ಅಪ್ಪಾ, ನಾಳೆ ಕ್ರಿಸ್ಮಸ್”.“ಚೆ ಟ್ಯಾಟೂ ಯಾಕಪ್ಪಾ ಹಾಕಿಸಕೊಂಡೆ ಅಂತ ಬೇಸರ ಆಗ್ತಾ ಇದೆ.ನನಗೆ ಎಲ್ಲದರ ಬಗ್ಗೂ ಬೇಸರಾನೇ, ಚೆ ಕುರಿತೂ”.ಅವನ ಚೆ! ನಮ್ಮ ಬಾಲ್ಯದ ಹೀರೊ ಚೆ!“ನನ್ನ ತೋಳಿನ ಮೇಲೆ ಚೆಗೆನನಗಿಂತಾ ಹೆಚ್ಚು ವಯಸ್ಸಾಗಿ ಬಿಟ್ಟಿದೆ” ನನಗಂದ ಅವನುನನ್ನ ಅಪ್ಪ ಸಾರಾಯಿ ಸಾಹೇಬಾಳ ಬಳಿ ಮರಳಿ ಹೋಗಿದ್ದನನ್ನಪ್ಪ ಅವನ ತೋಳಿನ ಮೇಲೆ ಒರಗಿದ“ಮರೀ ಬೇಡಪ್ಪ ನನ್ನ, ಅಣ್ಣ” ಹೇಳಿದ ಅಪ್ಪ.ಎಂದಿಗೂ ಇಲ್ಲ. ನಾನೆಂದೆ. ಮತ್ತು ಫೋನು ಕೆಳಗಿಟ್ಟೆ. **************************
