ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಕವಿತೆ ಹುಟ್ಟುವುದಿಲ್ಲ ಸ್ಮಿತಾ ರಾಘವೇಂದ್ರ ಆತ್ಮವೆಂಬ ಅನೂಹ್ಯ ಭಾವಗರ್ಭಗುಡಿಯ ಹೊಕ್ಕು ಹಲವು ಕವಿತೆಗಳು ತಣ್ಣಗೆ ಹೊರ ನಡೆಯುತ್ತವೆ ಕವಿತೆಯ ಹಡೆದ ಮೌನದಂತೆ! ನಭೋಮಂಡಲವ ತಿರು ತಿರುಗಿ ವಿರಮಿಸಿ ಉಸುರಿದಾಗೊಂದು- ನಿಟ್ಟುಸಿರು: ಆತ್ಮಕ್ಕೆ ದಕ್ಕಿದ್ದು ಕಾಯಕ್ಕೆ ದಕ್ಕುವದಿಲ್ಲ! ಅಣು ರೇಣುವಿನಲಿ ಪಲ್ಲವಿಸಿ ತಲೆದೂಗಿ ರಿಂಗಣಿಸಿ ಒಳಗೊಳಗೇ ಭೋರ್ಗರೆದು ಮಂಜುಗಟ್ಟಿದ ಕಣ್ಣ ತೊರೆದು ಅರಿಯದೇ ಉದುರಿದ ಕವಿತೆಯ ಕರುಣೆ- ತೊರೆದ ನಿರಾಳ ಬದುಕಿನ ಕೊನೆಯ ಕವಿತೆಗೆ ಮಾತೂ ಇರುವುದಿಲ್ಲ ಮೂಕ ಮರ್ಮರವೊಂದರ ಅಂತರಾತ್ಮ: ಸೋತ ಕಣ್ಣುಗಳಿಂದ ಸರಿದ ಸುಂದರ ನೋಟ. ಸಾವಿನ ಆಲಿಂಗನ, ಆಲಿಂದ ದಾಟಿ ತಿರುಗಿಯೂ ನೋಡದೇ ನಡೆದ ಕರುಳ ಹಿಂಡಿದ ಕವಿತೆ, ಆತ್ಮ ಸಂಗಾತ ಬಿಂದುವೊಂದಕೆ ಬಂದು ಸೇರಿದ ಭಾವ- ಬೃಹದಾಕಾರ ಚದುರಿ- ವಿವಿಧ ರೂಪಕ ಸೇರಿ ಜಗದ ತುಂಬಾ ಪುಟ್ಟ ಪುಟ್ಟ ಕವಿತೆಯ ಧಾರಣ! ಹುಟ್ಟೂ ಇಲ್ಲದ ಸಾವೂ ಇಲ್ಲದ ನಿರಂತರ ಚಲನೆ ಜಗದ ಏಕೈಕ ಕವಿತೆ ಸಕಲವನೂ ಸಹಿಸುತ್ತದೆ! ಕವಿತೆ ಹುಟ್ಟುವುದಿಲ್ಲ ಸ್ವಯಂ ಹೆರುತ್ತದೆ!! *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ದಕ್ಕಿತೆಷ್ಟು ಪ್ರೀತಿ ವಿನುತಾ ಹಂಚಿನಮನಿ (ವೆಲೆಂಟಾಯಿನ್ ಡೇ’ದ ಸಂಭ್ರಮ ಮುಗಿದಾಯ್ತು ಅದರ ಉತ್ತರಾರ್ಧ ಹೀಗೂ ಇರಬಹುದೇ …….) ಲಕ್ಷ್ಮಣ ರೇಖೆ ದಾಟಿದ ಒಂದು ತಪ್ಪಿಗೆ ದಕ್ಷಿಣೆ ತೆರಬೇಕಾಯ್ತು ನೂರೊಂದು ತೆಪ್ಪಗೆ ರಕ್ಷಣೆ ಇಲ್ಲದಾಯ್ತು ಕಾಡಿನಲಿ ತಾಯ್ತನಕೆ ದಕ್ಷ ಸಹನೆ ತ್ಯಾಗದ ಮೂರುತಿ ಸೀತೆಗೆ ಅಕ್ಷಯವಾದ ವನವಾಸ ಪತಿಯ ದೇಣಿಗೆ ಶ್ರೇಷ್ಠ ರಾಧೆಯ ಪ್ರೀತಿಗೆ ಹಂಬಲಿಸಿದವ ಅಷ್ಟ ಮಹಿಷಿಯರಿಗೆ ವಲ್ಲಭನಾದ ಗೋಕುಲದ ಕೃಷ್ಣ ಗೋಪಿಲೋಲನೀತ ದ್ವಾರಕಾಧೀಶನಾಗಿ ಬಾಲ್ಯದ ಗೆಳತಿಯ ಮರೆತ ಪದ್ಮಪತ್ರದ ಜಲಬಿಂದುವಾಗಿ ರಾಧೆಗೆ ದೊರೆತ ಐವರು ಶೂರ ಪತಿಗಳ ಧರ್ಮದ ಹಠಕೆ ದ್ರೌಪದಿಯ ಎದೆಯಾಯ್ತು ಪಗಡೆಯ ಪಠ ಅವಮಾನ ವನವಾಸಗಳೇ ಕೊಡುಗೆ ಸೂರ್ಯ ಚಂದ್ರರೆ ಸಾಕ್ಷಿ ಶೋಷಣೆಗೆ ಅಗ್ನಿಪುತ್ರಿಯ ಜೀವ ಉರಿದ ಬವಣೆಗೆ ಸಲೀಮನ ಪ್ರೇಮದ ಪುತ್ಥಳಿ ಅನಾರ್ಕಲಿ ಅಕಬರನ ಅಂತಸ್ತಿಗಾದಳು ನರಬಲಿ ಜೀವಂತ ಹುಗಿಸಿದ ಅವಳ ಮಹಾಬಲಿ ಜಹಾಂಗೀರನಿಗೆ ಚಕ್ರವರ್ತಿಯ ಪಟ್ಟ ಪ್ರೀತಿಯ ಸಮಾಧಿಯ ಮೇಲೆ ಕಟ್ಟಿ ಶಹಾಜಾನನ ಪ್ರೇಮದಫಲದ ಸೊತ್ತು ಹದಿಮೂರು ಬಾರಿ ಗರ್ಭ ಹೊತ್ತು ಕೊನೆಗೆ ಮಣ್ಣಾದಳು ಹೆತ್ತು ಹೆತ್ತು ತಾಜಮಹಲ ಅವನ ಪ್ರೀತಿಯ ಕುರುಹು ಮುಮ್ತಾಜಳ ಬಲಿದಾನದ ಗುರುತು ಆದಿಲಶಾಹಿಯ ಪಿಸುಮಾತಿನ ಬಲೆಗೆ ಮೊದಲು ಮರುಳಾದ ರಂಭ ಒಲಿದು ಜೀವತೆತ್ತು ಮಲಗಿದಳು ಗೋಲಗುಮ್ಮಜದಿ ಕಾದಿಹಳು ಶತಶತಮಾನ ಗುಮ್ಮಟದಿ ಬಾದಶಹನ ಪ್ರೇಮ ನಿವೇದನೆಗೆ ಒಲವಿನ ನಾಟಕದ ಅಂಕದ ಪರದೆ ಜಾರಿ ನಲುಗಿತು ನಾರಿಯ ಸಮ್ಮಾನ ಬಾರಿಬಾರಿ ತಿಳಿಯದಾದೆಯಾ ನೀ ಜಗದ ನೀತಿ ನಿನ್ನ ಪ್ರೇಮ ತ್ಯಾಗಗಳ ಅಳೆದ ರೀತಿ ನಿನಗೆ ಇದರಲಿ ದಕ್ಕಿತೆಷ್ಟು ಪ್ರೀತಿ? *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ರಾತ್ರಿ ಮೆರವಣಿಗೆ ಪ್ಯಾರಿಸುತ ಹಗಲು ಸರಿದು ಇರುಳು ಕವಿದು ಕಣ್ಣು ಕನಸುಬೇಡಿದೆ ಹೃದಯ ಕಥೆ ಕೇಳಲು ತಣಿವರೆಸಿದೆ ಬೆಚ್ಚಗೆ ಹೊದಿಕೆ ಮೈಗೆ ಮುಡಿಯಲಿನ್ನು ರಾತ್ರಿ ಜೊತೆ ಮೆರವಣಿಗೆ…. ಚುಕ್ಕಿ ಚಂದ್ರನನ್ನು ಓಲೈಸುವಂತೆ ಚಂದ್ರಕಾಂತಿ ಸೂರ್ಯಪ್ರಭೆಯನ್ನು ನಂಬಿರುವಂತೆ ನಾನು ನಿನ್ನನ್ನು ಮಾತ್ರ ನಂಬಿದ್ದೇನೆ ಇಲ್ಲಿ ನನ್ನ ನಿನ್ನ ನಂಬಿಕೆ ಮುಖ್ಯವಲ್ಲ ಪ್ರೀತಿ ಜೀವಂತಿಕೆ ಅಷ್ಟೇ ಮುಖ್ಯವಾಗುವದು…! ಬಿಕೋ ಅನ್ನುತ್ತಿರುವ ರೋಡಿನಲ್ಲಿ ಬೀದಿದೀಪಗಳ ಅಲಂಕಾರ ದಟ್ಟ ವಾಹನಗಳ ವಾದ್ಯಮೇಳ ಅಕ್ಷತೆ ಹಾಕುವಂತೆ ರಪ ರಪ ಮಳೆಯ ಹನಿ ದೀಪದೂಳುಗಳ ಗುಯ್ಯಗುಟ್ಟುವ ಮಂತ್ರಘೋಷ ಅಪ್ಪಟ ಮದುವೆ ಮನೆಯಂತೆ ನೋಟಕ್ಕೆ ಸಿಗುವ ಈ ರಾತ್ರಿ ಅಧ್ಭುತ ಸೃಷ್ಟಿಸಿದೆ…! ಹೀಗೆ ಬಂದು ಹಾಗೆ ಹೋಗುವ ಕನಸುಗಳ ಮೇಲೆ ಅದೇನು ಕವಿತೆ ಬರೆಯಲಿ ಅದೇನೇ ಬರೆದರೂ ಅವಳ ಹಾಜರಾತಿ ಇರುವದು ಅಲ್ಲೊಮ್ಮೆ ಇಲ್ಲೊಮ್ಮೆ ಬರುವ ಸುಳಿವು ಕೊಡುವನೀನು , ಅದೆಂತಹ ಮಾಯಗಾತಿ…! ನನ್ನೆಲ್ಲ ರಾತ್ರಿಯನು ಧಾರೆಯರೆದರೂ ಇನ್ನೂ ಮೀನಾಮೇಷ ಮಾಡುತ್ತಿರುವೆ ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಘನಿತ ಡಾ.ಗೋವಿಂದ ಹೆಗಡೆ ಘನಿತ ಇಬ್ಬನಿಯಲ್ಲಿ ತೊಯ್ದ ಪುಲಕದಲ್ಲಿ ಹೂವು ಇನ್ನೇನು ಆರಿಹೋಗುವ ಆತಂಕದಲ್ಲಿ ಇಬ್ಬನಿ ಬಿಂದು ನೋಡುತ್ತ ನಿಂತ ನಾನು-ನೀನು ಇನ್ನೇನು ಇದೇ ಇಬ್ಬನಿ ನಿನ್ನ ಕಂಗಳ ತೋಯಿಸುತ್ತದೆ ನಿನ್ನ ಮಡಿಲಿಗೆ ನನ್ನ ತಲೆಗೆ ಅವಿನಾ ಸಂಬಂಧ ಅದಕ್ಕೆ ಗೊತ್ತೇ ಈಗ ನೀನು ಸೆಳೆಯುವೆ ಮಡಿಲಿಗೆ ತಬ್ಬಿ ಮುದ್ದಿಸುವೆ ಅದುರುವ ತುಟಿಗಳಲ್ಲಿ “ನಾನಿದೀನಿ ಕಣೋ” ಹೇಳುವ ಹೇಳದಿರುವ ಸಂಭವದಲ್ಲಿ ತಾರೆಗಳು ಕಂಪಿಸಿವೆ ಅಲೆಗಳು ಮರ್ಮರ ನಿಲ್ಲಿಸಿವೆ ಎಷ್ಟೊಂದು ದೇಶಕಾಲಗಳು ಈ ಒಂದು ಕ್ಷಣಕ್ಕಾಗಿ ಮಿಡಿದಿವೆ ತುದಿಗಾಲಲ್ಲಿ, ಮೊರೆದಿವೆ ಇದೇ ಒಂದು ಚಣ ಅದೇ ಇಬ್ಬನಿಯ ಒಂದೇ ಒಂದು ಬಿಂದು ಜಾರಿ ಹನಿಯಲು ನಿನ್ನ ರೆಪ್ಪೆಯ ಅಂಚಿನಿಂದ ನನ್ನ ಎದೆಗೆ ಘನೀಭವಿಸುತ್ತದೆ ಆಗ ಕಾಲದ ಈ ಬಿಂದು ಅನಂತಕ್ಕೆ ಸಲ್ಲುವ ಚಿತ್ರವಾಗಿ ಹಾಗಲ್ಲದೆ ಮುಕ್ತಿಯೆಲ್ಲಿ ಹೂವಿಗೆ ಇಬ್ಬನಿಗೆ ನನಗೆ-ನಿನಗೆ. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ವಸಂತನಾಗಮನ ವಿಜಯ ನಿರ್ಮಲ ವಸಂತನಾಗಮನ ವನರಾಣಿ ನವಕನ್ಯೆಯಾಗಿಹಳು ಹರೆಯದಿ ಮೈದುಂಬಿ ನಗುತಿಹಳು ಭೂದೇವಿ ಸಂಭ್ರಮದಿ ನಲಿದಿಹಳು ವನಬನಗಳೆಲ್ಲ ಹೊಸ ಚಿಗುರು ತುಂಬಿ ಗಿಡಮರಗಳೆಲ್ಲ ಬಣ್ಣ ಬಣ್ಣದ ಹೂ ಗುಚ್ಛದಲಿ ತುಂಬಿ ತುಳುಕುತಿವೆ ಮಾವು ಬೇವು ಜೊತೆಯಾಗಿ ತೋರಣ ಕಟ್ಟಿ ವನವನೆಲ್ಲ ಸಿಂಗರಿಸುತಿದೆ ಮಾಮರದಂದಕೆ ಮನಸೋತ ಕೋಗಿಲೆ ಮಧುರವಾಗಿ ಕುಹೂ ಕುಹೂ ಎನುತಿದೆ ಕಾನನವೆಲ್ಲ ಹಚ್ಚ ಹಸುರಾಗಿ ಸೌಂದರ್ಯ ತುಂಬಿಕೊಂಡು ಹೊಸ ಗಾನಕೆ ತಲೆದೂಗಿವೆ ಹಕ್ಕಿ ಪಕ್ಷಿಗಳು ಇಂಪಾದ ದನಿಯಲಿ ಕೂಗಾಡುತ ತಮ್ಮ ಗೂಡುಗಳಲಿ ಸಂತಸದಿ ಮೆರೆಯುತ ಹಬ್ಬಕೆ ಸಜ್ಜಾಗುತಿವೆ ತಮ್ಮದೇ ಶೈಲಿಯಲಿ ಶಿಶಿರದಲಿ ಸೋತು ಹಣ್ಣೆಲೆಗಳೆಲ್ಲ ಉದುರಿ ಮರಗಳೆಲ್ಲ ಬೋಳಾಗಿ ತುಂತುರು ಹನಿಗಳ ಸಿಂಚನದಲಿ ಮತ್ತೆ ಹೊಸ ಹಸಿರು ಚಿಗುರಲು ಬಂದ ನೋಡಿ ಋತುಗಳ ರಾಜ ವಸಂತ ಹೊತ್ತು ತಂದ ಮತ್ತೆ ಚೈತ್ರ ವನು ಧರೆಗೆಲ್ಲ ನೀಡಿ ಚೈತನ್ಯವನು ವನ ಬನವೆಲ್ಲ ಚಿಗುರಿ ಸಿಂಗಾರದಲಿ ಸೆಳೆಯುತಿದೆ ನೋಡಲಿ ಪ್ರಕೃತಿಯ ಮಡಿಲು ಪ್ರತಿ ಜೀವದಲ್ಲೂ ಆರಾಧನೆ ತುಂಬುತ ರಸಿಕ ಮನಗಳಲಿ ಹೊಸ ಬಯಕೆಗಳ ಸ್ಪುರಿಸುತಿದೆ ನೋಡಲ್ಲಿ ಸೃಷ್ಟಿ ಪಾಲಕನ ಆಗಮನವೇ ವಸಂತ ನಳನಳಿಸುತಿದೆ ವನವೆಲ್ಲ ತುಂಬಿ ಹೂಗಳಿಂದ ಮಲ್ಲಿಗೆ ಸಂಪಿಗೆ ಹೂಗಳರಲಿ ಚೆಲ್ಲಿದೆ ಕಂಪನು ಹರಡುತಿದೆ ವನದ ತುಂಬೆಲ್ಲ ಜನಮನದಲಿ ತುಂಬುತ ಹೊಸ ನವೋಲ್ಲಾಸವನು ಆಸ್ವಾದಿಸುತ್ತಾ ತೊಡಗಲು ಪ್ರೇರೇಪಿಸುವಂತಿದೆ ಪ್ರೇಮೋಲ್ಲಾಸದಲಿ ಪ್ರೇಮಿಗಳನು ಮೂಡುತಿದೆ ಹೊಸ ಚಿಗುರಿನಂದದಿ ಕವಿ ಮನದಲಿ ಹೊಸ ಬಗೆಯ ನವ ಕಾವ್ಯದ ಸೃಷ್ಟಿಗೆ ಹಾಕಿ ಮುನ್ನುಡಿಯನು ವರ್ಣಿಸಿ ಪದಗಳಲಿ ವಸಂತನಾಗಮನವನು ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕಾಮದಹನ ಗೌರಿ. ಚಂದ್ರಕೇಸರಿ ಕಾಮ ದಹನ ಒಡಲು ಬರಿದು ಮಾಡಿಕೊಂಡ ಕಣ್ಣೀರ ಕಡಲು ಬತ್ತಿಸಿಕೊಂಡ ನಿಟ್ಟುಸಿರಲ್ಲೇ ನೋವ ನುಂಗಿಕೊಂಡವಳ ಜೋಳಿಗೆಗೆ ನ್ಯಾಯ ಬಂದು ಬಿದ್ದಿದೆ ಅಂತೂ ಕಾಮ ದಹನವಾಯಿತು. ಏಳು ವರುಷಗಳ ಹೋರಾಟ, ಗೋಳಾಟ ಸುತ್ತಿ, ಸವೆಸಿದ ಮೆಟ್ಟುಗಳೆಷ್ಟೋ ಹತ್ತಿ ಇಳಿದ ಮೆಟ್ಟಿಲುಗಳೆಷ್ಟೋ ಕರುಣೆ ಬದುಕಿದೆ ಇನ್ನೂ ಕಪ್ಪು ಪಟ್ಟಿಯ ಹಿಂದಿರುವ ಕಣ್ಣುಗಳಲಿ                   ಅಂತೂ ಕಾಮ ದಹನವಾಯಿತು. ಬಾಯ ಪಸೆ ಇಂಗುವವರೆಗೂ ಎದೆಯ ಗೂಡ ಗಾಳಿ ಇರುವವರೆಗೂ ನ್ಯಾಯಕ್ಕಾಗಿ ಅಂಗಲಾಚಬೇಕು ದಶಕಗಳವರೆಗೆ ಕಾಯಬೇಕು ಅಂತೂ ಕಾಮ ದಹನವಾಯಿತು ತಮ್ಮ ತಾವು ದಹಿಸಿಕೊಳ್ಳಬೇಕು ಸೀತೆಯರು ವನವಾಸ ಪಡಬೇಕು ದ್ರೌಪದಿಯರು ಸಾಬೀತು ಪಡಿಸಲು ಅತ್ಯಾಚಾರಗಳನ್ನು ದೇಹದ ಮೇಲಾದ ಹಲ್ಲಿನ ರುಜುಗಳ ಕಾಪಿಟ್ಟುಕೊಳ್ಳಬೇಕು ಸಾಕ್ಷಿಗಾಗಿ ಅಂತೂ ಇಂತೂ ಕಾಮ ದಹನವಾಯಿತು *******                    

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕವಿತೆಯದಿನಕ್ಕೊಂದು ಕವಿತೆ ರೇಖಾ ವಿ.ಕಂಪ್ಲಿ ಕವಿತೆ ನಿನಗೊಂದು ಖಲಾಮು ಇದ್ದರೆ ಸಾಕೆ ಇಲ್ಲ ಕವಿ ಬೇಕೇ? ಬರಿ ಕವಿ ಇದ್ದರೆ ಸಾಕೆ ಇಲ್ಲ ಭಾವನೆ ಬೇಕೇ? ಭಾವನೆಯೊಂದಿದ್ದರೆ ಸಾಕೆ ಇಲ್ಲ ಭಾಷೆ ಬೇಕೇ? ಭಾಷೆ ಒಂದು ಇದ್ದರೆ ಸಾಕೆ ಬರವಣಿಗೆ ಬೇಕೇ? ಬರಿ ಬರವಣಿಗೆ ನಿನಗೆ ಸಾಕೆ ಇಲ್ಲ ಓದುಗನೊಬ್ಬ ಬೇಕೇ? ಓದುಗನೊಬ್ಬ ಇದ್ದರೆ ಸಾಕೆ? ಕವಿತೆ ಕೊನೆಯಲಿ ಹಾಡಿ ಹೇಳಿತು ಮೆಲ್ಲಗೆ ಎಲ್ಲವು ಬೇಕು ಎನಗೆ..

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ವೈರಸ್ ಅಶ್ವಥ್ ಏನೋ ಬಲ್‌ಶಾಲಿ ಅನ್ಕೊಂಡ್‌ಬುಟ್ಟು ಬೇಕಾದ್ದೆಲ್ಲ ಮಾಡ್ಕೊಂಡ್‌ಬುಟ್ಟು ಭೂತಾಯ್‌ ಮುಂದ್‌ ಗತ್ತು ಗಮ್ಮತ್ತು ವೈರಸ್‌ ಬಂತು ಮಂಡಿಯೂರು ಅಂತು ನವರಂಗೀ ಮಾಧ್ಯಮ್‌ಗಳಾಗೆ ಪಟತೆಕ್ಕಂಡ್‌ ವಾಲಾಡುವಾಗೇ ಕಣ್ಣಿಗ್‌ ಕಾಣ್ದಿರ್ ಅಣುವೊಂದ್‌ ಬಂತು ಕೈಕಾಲ್‌ ಕಟ್ಕಂಡ್‌ ಮನೆಲ್ಕೂರ್‌ ಅಂತು ಜಗತ್ತೆಲ್ಲಾ ಚಿಂದಿ ಚೂರಾದ್ರೂನೇ ಕಣ್ಣಾಗ್‌ ಕಣ್ಣಿಟ್‌ ನೋಡೋದಾಗ್ದೇನೆ ಕಿಂಚಿತ್‌ ಅನ್ನೋ ವೈರಸ್ಸೇ ಬರ್‌ಬೇಕಾತು ನಮ್‌ ಸಂಬಂಧ್‌ಗೋಳ್‌ ಏನಂತ ತಿಳ್‌ಸ್ತು ನಮ್‌ ಕೈತೊಳ್ಕೊಂಡ್ರಷ್ಟ್‌ ಸಾಕಾಗಲ್ಲ ಮನ್ಸ್‌ ಉಜ್ಜುಜ್ಜಿ ತೊಳ್ಕೊಬೇಕೆಲ್ಲ ವದ್ದ್‌ ವೋಡ್ಸೋಕ್‌ ಮುಂಚೆ ವೈರಸ್ಸನ್ನ ಎತ್ತ್‌ ಹಿಡೀಬೇಕಾಗೈತೆ ಮನ್ಸತ್ವಾನಾ ********************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕವಿತೆಯ ದಿನಕ್ಕೊಂದು ಕವಿತೆ ನನ್ನೊಳಗೊಂದು ನಾನು ಅಂಜನಾ ಹೆಗಡೆ ನಾ ಹುಟ್ಟುವಾಗಲೇ ನನ್ನೊಂದಿಗೆ ಹುಟ್ಟಿದ ಕವಿತೆಯೊಂದು ಇದ್ದಕ್ಕಿದ್ದಂತೆ ಎದುರಿಗೆ ಬಂದು ನಿಂತಿತು ಥೇಟು ನನ್ನಂತೆಯೇ ಕಾಣುವ ಅದಕ್ಕೊಂದು ಉದ್ದನೆಯ ಬಾಲ…. ನಾ ಹೋದಲ್ಲೆಲ್ಲ ನನ್ನದೇ ವೇಗದಲ್ಲಿ ಹಿಂದೆಮುಂದೆ ಸುತ್ತುತ್ತಿತ್ತು ಬಾಲದ ಸಮೇತ ಉದ್ದಜಡೆಯ ಹೆಣ್ಣೊಂದು ಹೆಗಲೇರಿದ ಭಾರ ಅಯ್ಯೋ!! ಹೆಣ್ಣುಕವಿತೆಯೇ ಹೌದು…. ಸುಲಿದ ಬೆಳ್ಳುಳ್ಳಿಗಳನ್ನೆಲ್ಲ ಪ್ಲಾಸ್ಟಿಕ್ಕಿನ ಮೇಲಿಟ್ಟು ಜೋರಾಗಿ ಜಜ್ಜಿದೆ ಬಾಲವೂ ಅಲ್ಲಾಡಿತು ಯಾವ ಕೋಪಕ್ಕೆ ಬೆಳ್ಳುಳ್ಳಿ ಬಲಿ!! ಬಾಲ ನಕ್ಕಂತೆ ಭಾಸವಾಗಿ ಸಣ್ಣದೊಂದು ಅವಮಾನ ಈರುಳ್ಳಿಗೆ ಕರಗಿದ ಕಣ್ಣೀರು ಬಾಲದ ತುದಿಗೆ ಅಂಟಿಕೊಂಡಿತು ಅಲ್ಲಾಡುತ್ತಿಲ್ಲ…. ಕೊಂಚ ಕರಗಿದೆ ಯಾವ ತಾಪ ಯಾರ ಎದೆಯ ಮೇಲೋ ಒಗ್ಗರಣೆಯ ಬಿಸಿ ಕುಕ್ಕರಿನ ಕೂಗು ಯಾವುದಕ್ಕೂ ಜಗ್ಗದ ಗಟ್ಟಿ ಬಾಲವಿದು…. ಈಗ ಸಣ್ಣದೊಂದು ಬಾಂಧವ್ಯ ಬಾಲದೊಂದಿಗೆ…. ತುಳಿಯದಂತೆ ನಿಭಾಯಿಸಬೇಕು!! ನನ್ನದಲ್ಲದ ಚಲನೆಯೊಂದು ಬೆನ್ನಿಗಂಟಿ ಜೀವಂತ ಸದಾ ಅಂಟಿಕೊಂಡಿರಲಿ ಹೆಣ್ಣಾಗಿ ಕವಿತೆ ಚಲನೆಯಾಗಿ…. ನಾನಾಗಿ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕವಿತೆಯ ದಿನಕ್ಕೊಂದು ಕವಿತೆ ಸಜೀವ ಡಾ.ಗೋವಿಂದ ಹೆಗಡೆ ಕವಿತೆ ನನ್ನ ಲೋಕಕ್ಕೆ ಬಂದಾಗಿನಿಂದ ಜೊತೆಗಿದೆ ಕಿಸೆಯ ಕನ್ನಡಕ ಪೆನ್ನು ಪರ್ಸುಗಳಂತೆ ನನ್ನದಾಗಿ ಅಷ್ಟೇ ಅಲ್ಲ ಎದೆಯ ಲಬ್ ಡಬ್ ಗಳಗುಂಟ ನಾಡಿಗಳಲ್ಲಿ ಹರಿದಿದೆ ಉಸಿರ ತಿದಿಯಲ್ಲಿ ಯಾತಾಯಾತ ಆಡಿದೆ ಕಣ್ಣಾಗಿ ಕಂಡು ಕಿವಿಯಾಗಿ ಕೇಳಿ ನರಮಂಡಲದಲ್ಲಿ ಗ್ರಹಿಸಿ ಸ್ಪಂದಿಸಿ ನನ್ನ ಭಾಗವೇ ಬೇಲಿಸಾಲಿನ ಹೂಗಳಿಗೆ ಕೈ ಆಡಿಸಿ ನಕ್ಕು ಹಕ್ಕಿಗಳ ಪಕ್ಕ ಹಾರಿ ತಾರೆಗಳಿಗೆ ಕಣ್ಮಿಟುಕಿಸಿ ಅಲೆ-ದಂಡೆಗಳಗುಂಟ ಅಲೆದು ಮರುಳು ಮನೆ ಕಟ್ಟಿ ಕುಣಿದು ಮೈಪಡೆದ ಕವಿತೆ ಹಾಗಲ್ಲದೆ ಕವಿತೆ ಕವಿತೆ ಹೇಗೆ ನಾನು ಜೀವಂತ ಹೇಗೆ **********

ಕಾವ್ಯಯಾನ Read Post »

You cannot copy content of this page

Scroll to Top