Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಮತ್ತೆ ನೀನು ಔಷಧಿಯಾಗು ಮೂಗಪ್ಪ ಗಾಳೇರ ಮತ್ತೆ ನೀನು ಔಷಧಿಯಾಗು ನನ್ನ ಬಿಟ್ಟು ಹೋದ ಮೇಲೆ ಒಳ್ಳೆಯ ದಿನಗಳು ಬರಬಹುದೆಂದಿನಿಸಿರಬಹುದು ನಿನಗೆ ಸತ್ಯಶೋಧನೆಯ ಹಾದಿಯಲ್ಲಿ ಪ್ರೀತಿಯ ಅದೆಷ್ಟೋ ಕನಸುಗಳು ಸತ್ತು ಸ್ವರ್ಗಕ್ಕೂ ಸೇರದೆ ನರಕಕ್ಕೂ ನಿಲುಕದೆ ಬೇತಾಳ ಗಳಂತೆ ನಿನ್ನ ನೆನಪಿನ ಹಿಂದೆ ಸುತ್ತ ಬಹುದೆಂಬ ಒಂದಿಷ್ಟು ಅರಿವಿರಬಾರದೆ……. ಪ್ರೀತಿಯನ್ನು ಹುಡುಕುತ್ತಾ ಹೋಗುತ್ತೇನೆ ಎಂಬುವುದು ಹುಡುಗಾಟದ ವಿಚಾರವಲ್ಲ……… ಯಾಕಾದರೂ ನೀನು ನನ್ನ ಅರ್ಧ ದಾರಿಯಲ್ಲಿ ಕೈ ಬಿಟ್ಟು ಹೋದೆನೆಂದು ಮರುಗುವ ದಿನಗಳು ಬರಲು ದೂರವಿಲ್ಲ…… ಹೃದಯದ ಒಳ ಕೋಣೆಯಲ್ಲಿ ಜಡಿದ ಸರಳುಗಳಿಗೆ ಬರೀ ನಿನ್ನ ಪ್ರೀತಿಯದ್ದೆ ಚಿಂತೆ………. ನಾನೆಂದು ತುಟಿಗಳಿಗೆ ವಿಷ ಮೆತ್ತಿಕೊಂಡು ಮಾತನಾಡಿದವನಲ್ಲ…….. ನಿನ್ನ ಮುಡಿಗೆ ನಕ್ಷತ್ರಗಳನ್ನು ಮುಡಿಸುವೆನೆಂದೇಳಿದ ಮೂರ್ಖನಲ್ಲ…..! ಒಂದಂತೂ ನಿಜ ಚಂದಿರನಿಲ್ಲದ ಅಮಾವಾಸ್ಯೆ ಕತ್ತಲಲ್ಲಿ ನನ್ನ ಪ್ರೀತಿ ನಿನಗೆ ಹೇಳುವಾಗ ಸೂರ್ಯ ಚಂದ್ರ ಅಷ್ಟೇ ಏಕೆ ನಕ್ಷತ್ರಗಳು ನಾಚಿ ರಜೆ ಯಾಕೆ ಕುಳಿತಿದ್ದ ನೆನಪುಗಳಷ್ಟೆ ನನಗೀಗಾ……. ಮರಳಿ ಬಾ ಗೆಳತಿ ಲೆಕ್ಕಕ್ಕೆ ಸಿಗದ ಕನಸುಗಳಿಗೆ ಹುಚ್ಚು ಹರೆಯದ ದಿನಗಳಿಗೆ ಮೈಚಾಚಿ ಮಲಗಿಕೊಂಡಿದ್ದ ಮೌನಕ್ಕೆ ಮತ್ತೆ ನೀನು ಔಷಧಿಯಾಗು…….. *********

ಕಾವ್ಯಯಾನ

ಹನಿಮೂನ್ ಗಿರೀಶ ಜಕಾಪುರೆ, ಮೈಂದರ್ಗಿ ಹನಿಮೂನ್ ಈ ಬಿಕನಾಶಿ ಚಂದ್ರನಿಗೆ ಬುದ್ಧಿಯಿಲ್ಲ ಸುರಿಯುತ್ತಾನೆ ವಿರಹದ ಅಗ್ನಿಗೆ ತುಪ್ಪ..! ಲಾಲ್‌ಬಾಗ್‌ಗೆ ಹೊರಟಿದ್ದವು  ಎರಡು ಹಕ್ಕಿಗಳು ಹನಿಮೂನ್‌ಗೆಂದು  ಸಮುದ್ರತೀರದ ಕಾಂಕ್ರೀಟ್ ಕಾಡಿನಿಂದ, ಒಂದೇಸಮನೆ ಧಾವಿಸುತ್ತಿತ್ತು ಎದೆಯಲ್ಲಿ ನಿಗಿನಿಗಿ ಕೆಂಡವಿರಿಸಿಕೊಂಡು ಉಸಿರಿನಿಂದ ಬಿಸಿಹೊಗೆ ಚಿಮ್ಮುವ ಉಗಿಬಂಡಿ.., ನಾನೋ ಅಲೆಮಾರಿ, ಹತ್ತಿದೆ ರೈಲು ಅವಳು ನನ್ನ ತೊರೆದುಹೋದ ನಿಲ್ದಾಣದಲಿ ಕಾಲಿಡಲೂ ಅವಕಾಶವಿರದಷ್ಟು ರಶ್ಶು ಆದರೂ ನನಗೆ ರೈಲಿನ ಮೇಲೆ ಏನೋ ಕ್ರಶ್ಶು ಅವರು ಇಬ್ಬರು, ಎರಡು ಬರ್ಥಗಳು ನಾನು ಎಂದಿನಂತೆಯೇ ವೇಟಿಂಗ್ ಲಿಸ್ಟು..! ಗಮನಿಸಿದೆ.. ಅವಳ ಅಂಗೈ ಮದರಂಗಿ ಚೂರೂ ಮಾಸಿಲ್ಲ ಅವನ ಕಣ್ಣಲಿ ಮಿಲನದ ಉಮೇದು.. ಆದರೂ ಯಾವುದೋ ಸಣ್ಣ ವಿಷಯ, ಪುಟ್ಟ ತಕರಾರು ಹುಸಿ ಹುಸಿ ಮುನಿಸು, ಏನೋ ಸ-ವಿರಸ..! ಈ ಕೊರೆಯುವ ಚಳಿಯ ಎದುರಿಗೆ  ಎಷ್ಟು ಹೊತ್ತು ನಿಲ್ಲುತ್ತದೆ ವಿರಹ?..? ಚುಕ್ಕೆಗಳು ಢಾಳಾಗುವ ಹೊತ್ತಿಗೆ ಆತ : ‘ಸರ್, ನೀವು ಮೇಲಿನ ಬರ್ಥಲಿ ಮಲಗಿ ನಾವಿಬ್ಬರೂ ಒಂದರಲ್ಲಿ ಅಡಜೆಸ್ಟ್ ಆಗ್ತೀವಿ’ ಎಂದ ನನಗೂ ಅದೇ ಬೇಕಿತ್ತು ಕಾಲು ಚಾಚಿದರೆ ಸಾಕಿತ್ತು ಇಡೀರಾತ್ರಿ ಆ ಹಕ್ಕಿಗಳು ತಬ್ಬಿ ಮಲಗಿದ್ದವು ಕೆಳಗಿನ ಬರ್ಥನಿಂದ ಹೊಮ್ಮುತ್ತಿತ್ತು  ಹಿತವಾದ ಶಾಖ..! ಅಗ್ಗಿಷ್ಟಿಕೆಯ ಝಳ..! ಹೌದು, ನನ್ನ ಕನಸಲ್ಲೂ ಬಂದಿದ್ದಳು ಅವಳು ನಾನು ಮುನಿದು, ಮರೆತು ಬಂದಿದ್ದ ಕಶ್ಮೀರಿ ಶಾಲು ಕೊಟ್ಟು ಹೋದಳು ಇಡೀ ರಾತ್ರಿಗಾಗಿ ಮುತ್ತು ಬಿಟ್ಟುಹೋದಳು ಬೆಳಗೆದ್ದು ಕಣ್ಣುಜ್ಜುತ್ತ ನಾನು ಆ ಹಕ್ಕಿಗಳಿಗೆ ಹೇಳುವುದಕ್ಕೂ ಮುನ್ನವೇ ಅವೇ ಒಕ್ಕೊರಲಿನಿಂದ ಮಧುವಾಗಿ ಉಲಿದವು ‘ಥ್ಯಾಂಕ್ಸ್’ ಈಗ ಗೊಂದಲದಲ್ಲಿದ್ದೇನೆ ನಾನು ಹೇಳಬೇಕು ಎಂದಿದ್ದ ಥ್ಯಾಂಕ್ಸ್ ಈಗ ಯಾರಿಗೆ ಹೇಳಲಿ? ಮುಗಿಲಲಿ ನೋಡಿದರೆ ಚಂದ್ರನೂ ಇಲ್ಲ..! ಥೂ.. ಈ ಬಿಕನಾಶಿ ಚಂದ್ರನಿಗೆ ಬುದ್ಧಿಯೇ ಇಲ್ಲ ಸುರಿಯುತ್ತಾನೆ ವಿರಹದ ಅಗ್ನಿಗೆ ಜೇನು-ತುಪ್ಪ..!..! **********

ಕಾವ್ಯಯಾನ

ಮೌನ ಮತ್ತು ಕವಿ ಕೊಟ್ರೇಶ್ ಅರಸಿಕೆರೆ ಅದು ಹಾರಾಡುವ ರೀತಿಗೆ, ರೆಕ್ಕೆಗಳಿವೆ ಎಂಬ ಖುಷಿಗೆ , ಮನ ಸೋತಿದ್ದೆ ಆ ಚಿಟ್ಟೆಗೆ! ಇತ್ತೀಚೆಗೆ….. ಯಾಕೋ ಕಿರಿಕಿರಿ ಎನಿಸಿತು ಭಾರೀ ಶಬ್ದ ಎಂದೆನಿಸಿತು; ಮೌನ ನಾಶಮಾಡುತ್ತಿದೆ ಅನಿಸಿತು ಈಗ ಸರಿಯಾಗಿ ನೋಡಲೆತ್ನಿಸಿದೆ ಚಮಕ್ ಬೆಳಕಿಗೆ ಅದು ಆಕರ್ಷಿತ ಆಗುತ್ತಿತ್ತು! ನೋಡಿದೆ…ಪರಿಶೀಲಿಸಿದೆ…ಅಯ್ಯೋ ಅದು ಏರೋಪ್ಲೇನ್ ಚಿಟ್ಟೆ!! ಮೌನ ಅರಿಯದ ಕವಿಯೊಬ್ಬ ಕವಿಯೇ? ವರ್ತಮಾನಕ್ಕೆ ಸ್ಪಂದಿಸುವ ನೆಪ ಎಷ್ಟೆಲ್ಲಾ ಕೂಳತನ! ಹಡೆದವ್ವನ ಝಾಡಿಸಿ ಒದೆಯುವ ದುಷ್ಟತನ!! ಆಗ…. ಕವಿಯೊಬ್ಬ ಹಾಡಿದನೆಂದರೆ ದೇಶವೇ ರೋಮಾಂಚನ; ರೋಮ ರೋಮಗಳಲ್ಲಿ ದೇಶ ಪ್ರೇಮ! ದಾಂಪತ್ಯ, ಸಹಜೀವನ ಪವಿತ್ರ ಪ್ರೇಮ! ಈಗ…. ವಂಚನೆ,ಕೂಳತ್ವ…. ರೋಮ ರೋಮಗಳಲ್ಲಿ ಅಪವಿತ್ರ ಪ್ರೇಮ,ಅನೈತಿಕತೆ ಮೌನವೆಲ್ಲಾ ಮಲಗಿ ಬಿಟ್ಟಿದೆ; ತಣ್ಣನೆಯ ಶವದ ಹಾಗೆ! ಕವಿ ಅರಚುತ್ತಿದ್ದಾನೆ…. ರಾಕ್,ಪಾಪ್… ನಾಚಿಕೆ ಬಿಟ್ಟಂತೆ ದೇಹವನ್ನೆಲ್ಲಾ ಹರಾಜಿಗಿಟ್ಟಿದ್ದಾನೆ ತನ್ನ ತಾ ಮಾರಿ ಕೊಳ್ಳುತ್ತಾ……! ಸದ್ದಿಗೆ ಇಲ್ಲಿ ಯಾರೂ ಬೆಲೆ ಕೊಡರು ಎಂಬುದ ಮರೆತು! ಇಥದನೆಲ್ಲಾ ಧಿಕ್ಕರಿಸಿಯೂ ಅಲ್ಲಲ್ಲಿ…. ಮೌನ,ಕಾಯಕ ಅರಿತ ಚಿಟ್ಟೆಗಳು ಹೂವಿನಿಂದ ಹೂವಿಗೆ ಹಾರಿ ಮಕರಂದ ಹೀರುತ್ತಾ,ಕೊಡುತ್ತಾ ತೆಗೆದು ಕೊಳ್ಳುತ್ತಾ ಪವಿತ್ರ ಪ್ರೇಮ ಬಂಧನ ನಿರ್ಮಿಸುತ್ತಿವೆ ಸದ್ದಿಲ್ಲದೆ! ********

ಕಾವ್ಯಯಾನ

ಹೆರಳನ್ನೊಮ್ಮೆ ಬಿಚ್ಚಿಬಿಡು ವಿಜಯಶ್ರೀ ಹಾಲಾಡಿ ಆ ಬೆಚ್ಚನೆ ರಾತ್ರಿಗಳಲ್ಲಿಈ ತಣ್ಣನೆ ಹಗಲುಗಳಲ್ಲಿನಿನ್ನ ಪಾದಕ್ಕೆ ತಲೆಯೂರಿಮಲಗಿದ ಬೆಕ್ಕನ್ನೊಮ್ಮೆನೋಡು …. ಕರುಣೆಯ ಕತ್ತಲುಹಣ್ಣುತುಂಬಿದ ಮರಹಗುರ ತುಂಬೆ ಹೂ..ಹೆರಳನ್ನೊಮ್ಮೆ ಬಿಚ್ಚಿಬಿಡು ಸುತ್ತುವ ಭೂಮಿಯನ್ನುನಿಲ್ಲಿಸು ಅಥವಾಮತ್ತಷ್ಟು ವೇಗವಾಗಿಸುತ್ತಿಸುಹೊಸ ಹೆಜ್ಜೆಕಚ್ಚಿಕೊಳ್ಳಬೇಕಿದೆ ನಿಹಾರಿಕೆ ಉಲ್ಕೆಗಳುಸಾಗರ ಸುನಾಮಿಗಳುಅಪ್ಪಳಿಸಲಿಇಲ್ಲವೇಬ್ರಹ್ಮಾಂಡದಾಚೆಕರೆದೊಯ್ಯಲಿ …. ಮಧುಶಾಲೆಗೂ ನನಗೂಸಂಬಂಧವಿಲ್ಲನೋವನ್ನೇ ಬಟ್ಟಲಿಗಿಳಿಸಿಗಟಗಟನ ಕುಡಿಯುತ್ತಿದ್ದೇನೆ ………! *******************

ಕಾವ್ಯಯಾನ

ಕೊಂದು ಕೊಳ್ಳುವೆ ವಿಜಯಶ್ರೀ ಹಾಲಾಡಿ ಕಣ್ಣೀರು ಕೆನ್ನೆಗಿಳಿವಾಗಲೇನಗುತ್ತೇನೆ ಮಣ್ಣ ಘಮಕ್ಕೆ ಸೋತಾಗಅರಳುವುದೇ .. ಕಡಲು ಸೋಕಬೇಕೆಂದಿಲ್ಲಜೀವಕೋಶದೊಳಗಿದೆ ಅಪರಿಚಿತನೆಂದು ಬೀಗಬೇಡಮಾತು ಸುಮ್ಮನೇ ಗೋರಿ ಮೇಲೆ ಹೂ ಅರಳಿದ್ದುಲೋಕರೂಢಿ ಸಾಯುವೆನೆಂದು ಗೋಳಿಡಬೇಡಬೇಕಾದರೆ ಕೊಂದುಕೊಳ್ಳುವೆ  **************************

ಕಾವ್ಯಯಾನ

ಕರಿನೆರಳು ಪ್ಯಾರಿಸುತ ಕರಿನೆರಳು ಕರಿಯ ನೆರಳು ಕಾಡುತಿತ್ತು ರಾತ್ರಿ ಹಗಲಿನಲ್ಲಿ ಹಗಲಿನಲ್ಲಿ ಸುಡು ನೆಲದ ಮೇಲೆ ರಾತ್ರಿಯಲ್ಲಿ ಕಪ್ಪು ನೆಲದಮೇಲೆ ಹೆಜ್ಜೆಗೊಂದು ಹಜ್ಜೆ ಹಾಕಿ ಅಷ್ಟು ಬೈದರೂ ಲಜ್ಜೆ ಹೊಸಕಿ ಇಣುಕುತಿತ್ತು,ಕೆಣಕುತಿತ್ತು ಬೆನ್ನ ಹಿಂದೆ ದೂಡಿದಷ್ಟು ಕಾಡುತ್ತಿತ್ತು ,ಬಾಗಿದಷ್ಟು ಬಳಕುತಿತ್ತು ಎತ್ತ ಹೋದರು ಭೂತದಂತೆ..! ದೇಗುಲಕೂ, ಆಶ್ರಮಕೂ ಬರುತಲಿತ್ತು ಕೇಳುತ್ತಿತ್ತು ಹೇಳುತ್ತಿತ್ತು ದೇವರೆದರು ನಾನು ಏಕೆ ಇವರಿಗೆ ಅಂಟು…? ನನಗೂ ಇವರಿಗೂ ಯಾವ ನಂಟು…? ಜೀವ ಇರುವ ನೀನು ಭಾವ ಮೆರೆವ ನಾನು ಜೀವಕೊಂದು ಜೀವವಿರಲು ನನಗೂ ನಿನಗೂ ಯಾಕೆ ಈ ಮಾಯದ ಗಂಟು ಊರುಕೇರಿ ಓಡುತ್ತಿತ್ತು,ನಿಲ್ಲುತ್ತಿತ್ತು ಕೇಳುತ್ತಿತ್ತು ಹೇಳುತ್ತಿತ್ತು ಜನರೆದುರು ಯಾರು ಇವನ ಗೆಳೆಯರು…? ಯಾರು ಇವನ ಬೆನ್ನು ಬಿದ್ದವರು..? ಯಾಕೆ ಇಲ್ಲ, ಇವನ ಸಲುಗೆ..? ಯಾರು ಹಾಕಿದರು ನನ್ನ ಇವನ ಬೆನ್ನಿಗೆ ಅದಕೂ ಸಾಕಾಯಿತು ಅನಿಸಿತು ನನ್ನ ಒಲುಮೆ -*******

ಕಾವ್ಯಯಾನ

ಬಂದು ಹೋಗು ಡಾ.ಗೋವಿಂದ ಹೆಗಡೆ ಬಾ ಶಂಭು, ಬಾ ಕುಳಿತುಕೋ ಕ್ಷಣ ಸಾವರಿಸಿಕೋ ಹುಷಾರು! ನಿನ್ನ ಆ ಹಳೆಯ ಹುಲಿಯದೋ ಆನೆಯದೋ ಚರ್ಮ ಹರಿದುಹೋದೀತು! ಹೊಸದು ಸಿಗುವುದು ಸುಲಭವಲ್ಲ ಮಾರಾಯ! ನಮ್ಮ ಮಂಗಮಾಯ ಕಲೆ ನಿನಗೂ ತಿಳಿಯದೇನೋ ಮತ್ತೆ ಅರಣ್ಯ ಇಲಾಖೆಯವರ ಕೈಯಲ್ಲಿ ಸಿಕ್ಕೆಯೋ ನಿನ್ನ ಕತೆ -ಅಷ್ಟೇ! ಆ ಕೊರಳ ಹಾವು ಆ ಜಟೆ ಅದಕ್ಕೊಂದು ಚಂದ್ರ ಸಾಲದ್ದಕ್ಕೆ ಗೌರಿ! ಕೈಯ ಭಿಕ್ಷಾಪಾತ್ರೆ ತ್ರಿಶೂಲ ಕಪಾಲ ಮಾಲೆ ಯಾಕಯ್ಯ ನಿನಗೆ ಈ ಯುಗದಲ್ಲೂ ಅದೆಲ್ಲ?! ನರಮನುಷ್ಯರಂತೆ ಎಲ್ಲ ಬಿಟ್ಟು ಆರಾಮಾಗಿ ಇರಬಾರದೇ? ಮನೆಯಲ್ಲಿ ಎಲ್ಲ ಕ್ಷೇಮವೇ ನಿನ್ನ ಸತಿ ಗಿರಿಜೆ ಮುನಿದು ಚಂಡಿಯಾಗಿಲ್ಲ ತಾನೆ ? ಕರಿಮುಖ ಷಣ್ಮುಖರು ಕುಶಲವೇನಯ್ಯ ಭಸ್ಮಾಸುರನಿಗೆ ನೀನೇ ವರ ಕೊಟ್ಟೆ ಮತ್ತೆ ಪಾಡೂ ಪಟ್ಟೆ ಮೋಹಿನಿ ಕಾಪಾಡಿದಳಂತೆ ನಿನ್ನ ಈಗಿನ ಕತೆ ಬೇರೆ ಭಸ್ಮಾಸುರನ ಚಹರೆ ಬದಲಾಗಿದೆ ಕೊಬ್ಬಿ ಕಾಡುತ್ತಿದ್ದಾನೆ ಕಾಪಾಡುತ್ತೀಯಾ ನೀನು ಕರೆತರುವೆಯಾ ಮೋಹಿನಿಯನ್ನು ದೇವ ದಾನವರ- ಯಾಕೆ ಸಕಲ ಲೋಕಗಳ ಉಳಿಸಲು ವಿಷ ಕುಡಿದವ ನೀನು ಈ ಮನುಷ್ಯರ ಈ ಅವನಿಯ ಉಳಿಸಲು ಏನಾದರೂ ಮಾಡಯ್ಯ ಇಂದೇನೋ ಶಿವರಾತ್ರಿಯಂತೆ ಅಭಿಷೇಕ ಅರ್ಚನೆ ಉಪವಾಸ ಜಾಗರಣೆ ಎಂದೆಲ್ಲ ಗಡಿಬಿಡಿಯಲ್ಲಿ ಮುಳುಗಿದ್ದಾರೆ ಜನ ಬಾ, ಆರಾಮಾಗಿ ಕೂತು ಹರಟು ಹೇಳು, ಕುಡಿಯಲು ಏನು ಕೊಡಲಿ ಅನಾದಿ ಅನಂತನಂತೆ ನೀನು ನಮ್ಮ ಆದ್ಯಂತವೂ ಲಕ್ಷಲಕ್ಷ ತಾಪಗಳ ತುಂಬಿಕೊಂಡಿದ್ದೇವೆ ಹಾಸಿ ಹೊದೆವಷ್ಟು ಉಸಿರು ಕಟ್ಟುವಂತೆ ಇಂದು ಬಂದಂತೆ ಆಗೀಗ ಬಾ, ಮುಖ ತೋರಿಸು ನಮ್ಮ ಆಚೆಗೂ ಇದೆ ಬದುಕು ನೆನಪಿಸಲು ಬಂದು ಹೋಗು ಸಾಧ್ಯವಾದರೆ ಮನುಕುಲವೆಂಬ ಈ ಭಸ್ಮಾಸುರನ ಅವನಿಂದಲೇ ಉಳಿಸಿ ಹೋಗು. *********

ಕಾವ್ಯಯಾನ

ನಿರೀಕ್ಷೆ ಅಪೇಕ್ಷೆ ರೇಖಾ ವಿ.ಕಂಪ್ಲಿ ಗೇಣಗಲ ಗಭ೯ದಲ್ಲಿ ಅದೆಷ್ಟು ಸುರಕ್ಷಿತ… ಅಮ್ಮ ನಿನ್ನಿಂದ ಬೇಪ೯ಟ್ಟು ನಾನೆಷ್ಟು ಅರಕ್ಷಿತ…. ಬರುತಲಿವೇ ಕಷ್ಟಗಳು ಅನಿರೀಕ್ಷಿತ… ಆದರೂ ಕಾದಿರುವೆ ಒಳಿತನು ನಿರೀಕ್ಷಸುತ…. ಯಾರಿಗೂ ಆಗಲು ಬಯಸುವುದಿಲ್ಲ ಆಕಷಿ೯ತ…. ಆದರೂ ಏಕೆ ನಾನು ಎಲ್ಲರಿಂದಲೂ ಅಲಕ್ಷಿತ…. ದೈವವು ನಿಂತಿದೆ ನನ್ನ ಸದಾ ಪರೀಕ್ಷಿಸುತ ಆದರೂ ಅಮ್ಮ ಸದಾ ನಿನ್ನ ಪ್ರೇಮ ಅಪೇಕ್ಷಿಸುತ.. *******

ಕಾವ್ಯಯಾನ

ಕೊಡುವುದಾದರೂ ಯಾರಿಗೆ? ವಿಜಯಶ್ರೀ ಹಾಲಾಡಿ ಹೌದು ಈ ಪ್ರೀತಿಯನ್ನು ಮೊಗೆಮೊಗೆದು ಕೊಡುವುದಾದರೂ ಯಾರಿಗೆ ? ನೇರಳೆಮರಕ್ಕೆ ಅಳಿಲಿಗೆ ಬೆಚ್ಚನೆ ಗೂಡಿನ ಹಕ್ಕಿಗೆ ? ಹೆಣ್ತನದ ಪರಿಧಿಗೆ ಎಂದೂ ದಕ್ಕದ ಮುಖ –ಮುಖವಾಡಗಳು … ರಾತ್ರಿ -ಹಗಲುಗಳನ್ನು ಗೆಜ್ಜೆಕಾಲಿನಲ್ಲಿ ನೋಯಿಸಲೆ … ಯಾತನೆಯನ್ನು ನುಂಗುತ್ತಿರುವೆ ಸಂಜೆಯ ಏಕಾಂತಗಳಲ್ಲಿ ಹೆಪ್ಪುಗಟ್ಟಿದ ಇರುಳುಗಳಲ್ಲಿ .. ಬೊಗಸೆಯೊಡ್ಡಿದ್ದೇನೆ ಮಂಡಿಯೂರಿದ್ದೇನೆ ಹಟಮಾರಿ ಕಡಲಾಗಿದ್ದೇನೆ.. ತರ್ಕಕ್ಕೆ ನಿಲುಕದ ಗಳಿಗೆ -ಗಳಲ್ಲಿ ಒಂಟಿಹೂವಂತೆ ನಿಂತುಬಿಟ್ಟಿದ್ದೇನೆ .. ಲೆಕ್ಕವಿಟ್ಟಿಲ್ಲ ಕೋಗಿಲೆ ಹಾಡಿದ ಹಾಡುಗಳನ್ನು… ಉದುರಿಬಿದ್ದ ಗರಿಗಳನ್ನು ಮತ್ತೆ ಹುಟ್ಟಿಸಿಕೊಳ್ಳಲು ಸಾಧ್ಯವಾಗುವುದಾದರೆ ಪ್ರೀತಿಯಿಂದ ಆರ್ತಳಾಗಿದ್ದೇನೆ. (ಚಿತ್ರಕೃಪೆ-ವಿಜಯಶ್ರೀ ಹಾಲಾಡಿ)

ಕಾವ್ಯಯಾನ

ತುಮುಲ ಬಿ.ಎಸ್.ಶ್ರೀನಿವಾಸ್ ಬಿಟ್ಟು ಬಿಡಬೇಕು ಬಗ್ಗಡದ ನೀರನ್ನು ತನ್ನಷ್ಟಕ್ಕೆ ತಾನೇ ತಿಳಿಯಾಗಿ ಪ್ರತಿಬಿಂಬ ತೋರಿಸುವವರೆಗೂ ಹರಿಯಬಿಡಬೇಕು  ಯೋಚನೆಗಳ ಕಡಿವಾಣವಿಲ್ಲದ ಕುದುರೆಯನ್ನು ಓಡಲಾಗದೆ ತಾನೇ ನಿಲ್ಲುವವರೆಗೂ ಸುರಿಸಿಬಿಡಬೇಕು ಕಂಬನಿ ಮನದ ಬೇಗುದಿಯೆಲ್ಲ ಕರಗಿ ಶಾಂತಿ ನೆಲೆಸುವವರೆಗೂ ನಡೆದು ಹೋಗಲಿ ಪ್ರಳಯ ಪರಶಿವನ ತಾಂಡವ ನೃತ್ಯ ಭ್ರಮೆಗಳೆಲ್ಲ ಭಸ್ಮವಾಗುವವರೆಗೂ ಕರಗಿದಾ ಕತ್ತಲಲಿ ಬಸವಳಿದ ಮೈಮನಕೆ ಗಾಢನಿದ್ರೆಯು ಆವರಿಸಬೇಕು ಮುಂಜಾನೆ ಹಕ್ಕಿ ಚಿಲಿಪಿಲಿ ಅರುಣೋದಯ ರಾಗದಲಿ ಹೊಸಬೆಳಕು ಮೂಡಬೇಕು ********

Back To Top