Category: ಕಾವ್ಯಯಾನ

ಕಾವ್ಯಯಾನ

ಮೊಬೈಲಾಯಣ

ಕವಿತೆ ಮೊಬೈಲಾಯಣ ಪೂರ್ಣಿಮಾ ಸುರೇಶ್ ಹಳೆಯದು,ಉಪಯೋಗಕ್ಕೆ ಬಾರದು ಎಂದು ಸರಿಸಿಟ್ಟಮೂಲೆ ಸೇರಿದ ಮೊಬೈಲ್ಇಂದು ಅಚಾನಕ್ ಸಿಕ್ಕಿದೆ ಗಾತ್ರದಲ್ಲಿ ಚಿಕ್ಕದುಅಡ್ಡಡ್ಡ ತರಚಿದ ಕವಚಪರದೆ ದೃಷ್ಟಿ ಮಂದಇದರ ಮಿದುಳಲ್ಲಿ ನಾನು ಎಷ್ಟೊಂದು ಭಾವರಸ, ಚಿತ್ರಪಟಕಸವನ್ನೂ ತುಂಬಿಟ್ಟಿದ್ದೆಬೇಕಾದಾಗ ನೆರವಾಗುವುದೆಂದು ನಂಬಿದ್ದೆ ಕುತೂಹಲ ಆಶ್ಚರ್ಯಕರಹಿಡಿಯಲ್ಲಿ ಬ್ರಹ್ಮಾಂಡಧರ ಅಳಿಸದ ಮಾತು ತಳದಲ್ಲಿ ಉಳಿದಿರಬಹುದೇನನ್ನೊಡನೆ ಅನುಸಂಧಾನ ನಡೆಸಬಹುದೇಬಿಚ್ಚದೆ ರೆಕ್ಕೆ ತೆಪ್ಪಗಿದೆಚಾರ್ಜರ್ ಗೆ ಸಿಕ್ಕಿಸಿದೆಧ್ಯಾನಬಿಂದು ಮಿನುಗುವಂತೆಆಹಾ! ಕೆಂಪು ಚುಕ್ಕಿ ಅತ್ತ ಸರಿದು ದಿಟ್ಟಿಸಿದೆಈಡಾಗಿ ಸೂಕ್ಷ್ಮ ಸೆಳೆತಕ್ಕೆ ಈಗ ತನ್ನನ್ನು ತಾನೇತೆರೆದುಕೊಂಡಿತು ಕ್ಷಣಾರ್ಧದಲ್ಲಿನನ್ನ ಮೊಗದಲ್ಲಿ ಮುಗುಳ್ನಗೆಯ ಚೆಲ್ಲಿ- ಜಾತ್ರೆಯಲ್ಲಿ […]

ನೋವಮೌನ-ಅನಾಥನಲಿವು

ಕವಿತೆ ನೋವಮೌನ-ಅನಾಥನಲಿವು ಮಮತ ಅರಸೀಕೆರೆ ಸುಡುವ ಆಲೋಚನೆಗಳ ಹೊರೆಭಾರದಲ್ಲಿ ಮಗ್ಗುಲು ಬದಲಾಯಿಸಿದ ಅವಳ ನಿಟ್ಟುಸಿರು ಅತ್ಯಾಚಾರದ ಕನಸು ಕಂಡು ದಡಕ್ಕನೆ ಎಚ್ಚರಗೊಂಡ ಬೆಲೆವೆಣ್ಣ ಸಾಂದ್ರಗೊಂಡ ನಿರಾಳತೆ ಗದರಿಕೆಗೆ ಬೆದರಿ ಕೈಮುಷ್ಟಿ ಹಿಡಿದು ಸ್ಥಂಭೀಭೂತವಾಗಿ ನಿಂತ ಅಬೋಧ ಬಾಲನ ಬೆರಗು ಕಣ್ಣುಮೊಲೆಹಾಲು ಕುಡಿದು ಕಟುವಾಯಿಯಲ್ಲಿ ಇಳಿಯುವಾಗಲೇ ಅಂಗಾತವಾದ ನಿದ್ದೆಗಣ್ಣ ಬೊಮ್ಮಟೆ ನಗು ಬವಣೆಗಳನ್ನೆಲ್ಲ ಬರಹವಾಗಿಸಿದ ಅಪೂರ್ಣ ಡೈರಿಯ ಇನ್ನರ್ಧ ಖಾಲಿಪುಟಗಳ ಚಡಪಡಿಕೆಬರೆಯುತ್ತಲೇ ಅತ್ಯುತ್ಸಾಹಕ್ಕೆ ಸ್ತಬ್ಧವಾದ ಸಾಲುಗಳ ನಡುವಿನ ರೂಪಣಾತ್ಮಕ ಧ್ವನ್ಯಾರ್ಥ ಪ್ರಯಾಣದ ನಡುವೆಯೇ ತಿರುವು ರಸ್ತೆಯಲ್ಲಿ ತಟಕ್ಕನೆ ಕೆಟ್ಟು […]

ಕಾಡುವ ಕವಿತೆಗೆ

ಕವಿತೆ ಕಾಡುವ ಕವಿತೆಗೆ ಅಬ್ಳಿ,ಹೆಗಡೆ ಹೊತ್ತಿಲ್ಲ ಗೊತ್ತಿಲ್ಲಕಾಡುವಾ ಕವಿತೆ.ಬೇಕೆಂದು ಕರೆದಾಗನೀನೆಲ್ಲಿ ಅವಿತೆ..?ಬಂದಿಲ್ಲಿ ಅಕ್ಕರೆಯಸಕ್ಕರೆಯ ನೀಡು.ನನ್ನೆದೆಯ ಅಕ್ಕರದಿನೀ…ನಾಟ್ಯವಾಡು.ಕಂಕುಳಲಿ ಕೈಯ್ಯಿಟ್ಟುಗಿಲಗಿಚ್ಚಿಯಾಡಿ.ನೋವಲ್ಲು ನಗಿಸುತ್ತಮಾಡುವೆಯೆ ಮೋಡಿ.ತುಂಟಾಟವಾಡುತಲಿಕಳೆದೆನ್ನ ‘ಹಮ್ಮು’.ತಂಟೆಮಾಡದೆ ಒಳಗೆಉಳಿಯೆ ‘ಖಾಯಮ್ಮು’.! ****************************************

ಪ್ರಾರ್ಥನೆ

ಕವಿತೆ ಪ್ರಾರ್ಥನೆ ಬಾಪು ಖಾಡೆ ಹಸಿರು ಬೆಟ್ಟಗಳ ಕಾಡು-ಕಣಿವೆಗಳರುದ್ರ ರಮಣೀಯತೆಯಲಿ ಉಗಮಿಸಿಝರಿಯಾಗಿ ತೊರೆಯಾಗಿ ಜಲಪಾತವಾಗಿಬಳುಕುತ್ತ ಬಾಗುತ್ತ ನಿನಾದಗೈಯುತ್ತವೈಯಾರದಿ ಸಾಗುವ ನದಿಮಾತೆಯೆಹೀಗೆ ಪ್ರಸನ್ನವದನೆಯಾಗಿ ಸಾಗುತ್ತೀರು ಕಾಡು ಕಡಿ-ಕಡಿದು ಬಯಲಾಗಿಸಿನಿನ್ನೊಡಲ ಬಗೆಬಗೆದು ಬರಿದಾಗಿಸಿಮಾಲಿನ್ಯ ಸುರಿಸುರಿದು ಕಪ್ಪಾಗಿಸಿತಿಳಿನೀರ ಹೊಳೆಯನ್ನುಕೊಳೆಯಾಗಿಸಿಜಲಚರ ಜೀವಕ್ಕೆ ವಿಷ ಉಣ್ಣಿಸಿದಕಟುಕ ಹೃದಯದ ನಿನ್ನ ಮಕ್ಕಳನು‌ಒಮ್ಮೆ ಕ್ಷಮಿಸಿ ಬೀಡು ತಾಯೆ ಬಿಟ್ಟ ಬಿಸಿಯುಸಿರು ಕಪ್ಪುಮೋಡಗಳಾಗಿಆಕ್ರೋಶದ ಬೆಂಕಿ ಚಂಡಮಾರುತವಾಗಿಕಡಲೆಲ್ಲ ಉಪ್ಪಾಗಿ ಸುನಾಮಿಯಾಗಿಕುಂಭದ್ರೋಣದ ಬಿರುಮಳೆಯಾಗಿಭೀಕರ ಪ್ರವಾಹವಾಗಿ ಉಕ್ಕೇರದಿರುಪಾತ್ರದಂಚನು ಮೀರಿ ಹರಿಯದಿರುತಪ್ಪೆಸಗಿದ ನಿನ್ನ ಮಕ್ಕಳನು ಮತ್ತೊಮ್ಮೆ ಮನ್ನಿಸಿ ಬೀಡು ಭೂತಾಯಿಯಂತೆ ಕ್ಷಮಯಾದರಿತ್ರಿಯಾಗಿರು ***********************************

ಇರಲಿ ಬಿಡು

ಕವಿತೆ ಇರಲಿ ಬಿಡು ಸ್ಮಿತಾ ರಾಘವೆಂದ್ರ ಸಂಬಂಧಗಳು ಸವಿಯೆಂದು ಬೀಗುತಿದ್ದೆಕಳಚಿ ಬಿದ್ದಾಗಲೇ ಗೊತ್ತಾಗಿದ್ದು ಕಹಿಯೆಂದುಚಿಗುರು ಚಿವುಟಿದಮೇಲೆ ಫಲ ನೀಡುವ ಖಾತರಿ ಇಲ್ಲಸುಮ್ಮನೇ ಬೆಳೆಯಲು ಬುಡವಾದರೂಇರಲಿ ಬಿಡು. ಕಳೆದ ಕಾಲವ ತಿರುಗಿ ನೋಡುತಲಿದ್ದೆ.ಎಷ್ಟೊಂದು ನಲಿವುಗಳು ಉಸಿರ ನಿಲ್ಲಿಸಿವೆನೋವುಗಳೂ ಬಸವಳಿದು ಸುಮ್ಮನಾಗಿವೆ,ಬೇಡ ಬಾಚಿಕೊಳ್ಳುವದು ಏನನ್ನೂಹಾಗೇ ಬದುಕಲು ಭಾವಗಳಾದರೂ ಇರಲಿ ಬಿಡು. ಜೊತೆಯಿದ್ದ ನಂಬಿಕೆಯ ಜೀವಗಳ ಜತನದಲಿ ಸಲಹಿದ್ದೆಜಾಡು ಮರೆತು ಮೇಲೇರಿ ಅಣಕಿಸುತಲಿವೆಈಗ ಹಕ್ಕಿ ಗೂಡಿಗೆ ಮಾತ್ರ ಸೀಮಿತರೆಕ್ಕೆಯನೇ ಮರೆಯುವದು ಅನಿವಾರ್ಯಸೋತ ಕಾಲುಗಳಾದರೂ ಇರಲಿ ಬಿಡು. ದಟ್ಟವಾಗಿದ್ದ ಕಣ್ಣ ಕನಸಿನ ಗರಿಗಳುಒಂದೊಂದೇ […]

ಬೆಳಗು

ಕವಿತೆ ಬೆಳಗು ವೀಣಾ ನಿರಂಜನ ಈಗಷ್ಟೇ ಏಳುತ್ತಿದ್ದೇನೆಒಂದು ಸುದೀರ್ಘ ನಿದ್ರೆಯಿಂದಇನ್ನೇನು ಬೆಳಕು ಹರಿಯಲಿದೆತನ್ನದೇ ತಯಾರಿಯೊಡನೆ ಪ್ರತಿ ದಿನ ಸೂರ್ಯ ಹುಟ್ಟುತ್ತಾನೆಸೂರ್ಯನೊಂದು ಕಿರಣಕತ್ತಲೆಯ ಎದೆಯ ಹಾದುಬಗೆಯುತ್ತದೆ ಬೆಳಕು ಮೂಡುತ್ತದೆ ಬರೀ ಸೂರ್ಯ ಹುಟ್ಟಿದ್ದುಕೋಳಿ ಕೂಗಿದ್ದುಹಕ್ಕಿ ಕಲರವ ಕೇಳಿದ್ದೇ –ಬೆಳಗಾಯಿತೀಗ ಎಂಬರು ಕಾನು ಕತ್ತಲೆಯ ಸರಿಸಿಭೂಮಿ ಬೆಳಗಿದರಷ್ಟೆ ಸಾಕೇಎದೆಯ ಕತ್ತಲು ಬಗೆಯದೆಬೆಳಗಾಗುವುದೆಂತು ಸಹಸ್ರ ಬೆಳಗುಗಳ ಸೂರ್ಯಹೊತ್ತು ತರುವ ಬೆಳಕಿನ ಕಿರಣಗಳಲ್ಲಿಒಂದು ಕಿರಣ ದಕ್ಕಿದರೂ ಸಾಕುನಡು ನೆತ್ತಿಯ ಸುಟ್ಟು ಕೊಂಡುಸಾರ್ಥಕ ಈ ಬದುಕು.     **************************

ಹಕ್ಕಿಯ ದುರಂತ

ಅನುವಾದಿತ ಕವಿತೆ ಹಕ್ಕಿಯ ದುರಂತ ವಿ.ಗಣೇಶ್ ಸಗ್ಗದ ಚೆಲುವಿನ ಹಕ್ಕಿಯು ಒಂದುಭಾನಂಗಳದಿಂದ ಧರೆಗಿಳಿದುಊರಿನ ಮನೆ ಮಂದಿರಗಳ ಮೇಲ್ಗಡೆಹಾರುತಲಿದ್ದಿತು ನಲಿನಲಿದು. ಚಿನ್ನದ ವರ್ಣದ ರನ್ನದ ರೆಕ್ಕೆಯನೀಲಿಯ ಕಂಗಳ ಆ ಹಕ್ಕಿಹಾರುತ ಬರುವುದ ನೋಡಿದ ಮಕ್ಕಳಎದೆಯಲಿ ಆನಂವೆ ಉಕ್ಕಿ ಹಕ್ಕಿಯು ಹಾರುತ ಸಾಗುವ ಜಾಡಲಿತಾವೂ ಓಡುತ ಕೆಳಗಿಂದಕೇಕೆಯ ಹಾಕುತ ನಲಿಯುತಲಿರಲುಜನ ಸೇರಿತು ಅಚ್ಚರಿಯಿಂದ ಎಂಥ ಚೆಂದದ ಚೆಲುವಿನ ಹಕ್ಕಿಏನದು ಚೆಂದ ಆ ಮೈ ಬಣ್ಣ!ಕೈಗದು ಸಿಕ್ಕರೆ ಮಾರಲು ಆಗಕೈತುಂಬ ಹಣ ಝಣ ಝಣ ಮಾರುವುದೇತಕೆ ನಾವೇ ಹಿಡಿದುಕೊಂದೇ ತಿಂದರೆ ಬಹಳ […]

ತಮಂಧದೆಡೆಗೆ

ಕವಿತೆ ತಮಂಧದೆಡೆಗೆ ನೂತನ ದೋಶೆಟ್ಟಿ ತುತ್ತಿಡುತ್ತ ತೋರಿದ ಚಂದಮಾಮಬೆದರಿ ಅಡಗಿದ ಮೊಲಕಣ್ಣ ಕ್ಯಾನ್ವಾಸಿನಲ್ಲಿ ಕಳೆದು ಹೋದ ಕೌತುಕ ಆಕೆಯೊಂದಿಗಿನ ಬೆಳದಿಂಗಳ ರಾತ್ರಿಕ್ಯಾಂಡಲ್ ಡಿನ್ನರ್ಭ್ರಮೆಯಲ್ಲಿ ಕರಗಿದ ಕಲ್ಪನಾ ಲೋಕ ಚಂದ್ರನ ಮೇಲೀಗ ಸೈಟ್ ಬುಕ್ಕಿಂಗ್!ನೀರಿಲ್ಲದ ಚದರಡಿಯ ಬೆಲೆ ಕೊಂಚ ಕಮ್ಮಿಪಸೆಯ ನೆಲ ಚಿನ್ನಕ್ಕೂ ಮಿಗಿಲುಲೋಡ್ ಶೆಡ್ಡಿಂಗ್ ನ ಹೋಗಲು ರಾತ್ರಿಗಳಲೂಮನೆಯ ಸ್ಕೆಚ್ಚು ತಯಾರು ಓಡುವ ಚಂದಿರನ ಹಿಡಿಯಲುಆಕಾಶಕ್ಕೆ ಇಟ್ಟು ಏಣಿಯ ಮೇಲೆವಾಮನನ ಎರಡು ಪಾದಗಳುಇನ್ನೊಂದಕ್ಕೆ ಮಂಗಳನ ಆಹ್ವಾನ ನೀರು ಗುರುತಿದ್ದರೆ ಹೇಳಿಗಾಳಿ,ಮಳೆ, ಬೆಳಕೆಲ್ಲಹುಟ್ಟುವವು ಲ್ಯಾಬಿನಲ್ಲಿನಾಳೆಗಳು ಕರೆದೊಯ್ಯಲುಬೆಳಕಿನಿಂದ ಕತ್ತಲೆಡೆಗೆ. *********************************

ಶ್…. ! ನಿಶ್ಯಬ್ದವಾಗಿರಿ ನೀವು

ಕವಿತೆ ಶ್…. ! ನಿಶ್ಯಬ್ದವಾಗಿರಿ ನೀವು ತೇಜಾವತಿಹೆಚ್.ಡಿ. ಅದೇ ದಾರಿಯಲ್ಲಿನಿತ್ಯ ಪ್ರಯಾಣಿಸುತ್ತಿದ್ದೆನನ್ನದೇ ಲಹರಿಯಲ್ಲಿಐಹಿಕದ ಜಂಜಾಟದಲ್ಲಿಮನಸ್ಸಿನ ಹೊಯ್ದಾಟದಲ್ಲಿ ನಿಗೂಢ ಬದುಕ ಬಯಲಿನಲ್ಲಿಎಲ್ಲವೂ ಬೆತ್ತಲೆನಮ್ಮದೇನಿದೆ ಇಲ್ಲಿ,? ಆಗೋ.. ಅಲ್ಲಿ ಗೋಚರಿಸುತ್ತಿದೆಪ್ರಶಾಂತ ನೀರವ ತಾಣ…ಇಲ್ಲೇ ಹಿತವೆನಿಸುತ್ತದೆ ನನಗೆ ಶ್……! ನಿಶ್ಯಬ್ದವಾಗಿರಿ ನೀವುಎಚ್ಚರಗೊಂಡಾರು ಮತ್ತೆ ಇದ್ದಾಗಹಾಸಿಗೆ ಹೊದಿಕೆಯಿಲ್ಲದೆ ನಲುಗಿದ ಜನರುಬೆಚ್ಚಗೆ ಮಲಗಿಹರಿಲ್ಲಿಮಣ್ಣಿನ ಪದರಗಲಾಗಿ! ಅಹಮ್ಮಿನ ಕೋಟೆಯೊಳಗೆಅಹಂಕಾರದಿಂದ ಮೆರೆದವರೆಲ್ಲಾಮಣ್ಣುಸೇರಿ ಗೆದ್ದಲಿಡಿದಿಹರಿಲ್ಲಿ.. ! ತಾನು ತಾನೆಂದು ತನ್ನವರ ಸ್ವಾರ್ಥಕ್ಕಾಗಿಕಚ್ಚಾಡಿದವರೆಲ್ಲಾಏಕಾಂಗಿಯಾಗಿ ಕೊಳೆಯುತಿಹರಿಲ್ಲಿ.. ! ಕ್ಷಣಿಕ ಬಾಳಲಿ ವಿಶ್ವ ಗೆಲ್ಲುವಶಾಶ್ವತ ಕನಸು ಕಂಡುನನಸಾಗದೇ ಉಳಿದುಕನವರಿಸಿ ನರಳಿವಸ್ತಿ ಮಾಡಿಹರಿಲ್ಲಿ.. ! […]

Back To Top