Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ನನ್ನ ದನಿ ವೀಣಾ ನಿರಂಜನ ‘ನಿನ್ನನ್ನು ಬಂಧಿಸಲು ಆಜ್ಞೆಯಾಗಿದೆ. ನೀನು ಯಾರು?’ ಕೇಳಿದರವರು ‘ನಾನು ಕವಿತೆ’ ಎಂದೆ. ಅವರೆಂದರು – ‘ಹಾಗಾದರೆ ನಿನ್ನ ನಾಲಿಗೆ ಸೀಳಬೇಕು.’ ನಾನು ತಣ್ಣಗೆ ‘ಉಸಿರು’ ಎಂದೆ. ಅವರು ಮತ್ತೆ ನಿನ್ನ ಕತ್ತು ಹಿಸುಕಬೇಕು’ ಎಂದರು ನನ್ನುಸಿರು ಗಾಳಿಯಲ್ಲಿ ಬೆರೆತು ಹೋಗಿದೆ’ ಎಂದೆ! ಅವರೀಗ ಗಾಳಿಯ ಜೊತೆ ಗುದ್ದಾಡುತ್ತಿದ್ದಾರೆ !! ಎಲ್ಲೋ ದೂರದಲ್ಲಿ ಯಾರೋ ಅಳುವ ದನಿ ನಾನು ತಟ್ಟಿ ಮಲಗಿಸುತ್ತಿದ್ದೇನೆ ನನ್ನ ಮಗುವನ್ನು ಎದೆಯ ಬೇಗುದಿಗೆ ಸಾಂತ್ವನ ಹೇಳಬೇಕಿತ್ತಲ್ಲ! ** ನಾನು ಮೌನಿಯಾಗಿದ್ದೆ. ಅವರು ನನ್ನನ್ನು ಹೇಡಿ ಎಂದರು ! ನಾನು ಮಾತಾಡ ತೊಡಗಿದೆ ಈಗ ಅವರು ನನ್ನನ್ನು ದ್ರೋಹಿ ಎನ್ನುತ್ತಿದ್ದಾರೆ !! ವೀಣಾ ನಿರಂಜನ

ಕಾವ್ಯಯಾನ

ಶಬರಿ ಡಾ.ಗೋವಿಂದ ಹೆಗಡೆ ಯಾವುದೋ ಬೇಡರ ಹುಡುಗಿ ಹೆಸರಿಲ್ಲದೇ ಮರೆಗೆ ಸಲ್ಲುವ ಬದಲು ‘ಶಬರಿ’ ಎನಿಸಿ ತಪಕೆ ಹೆಸರಾಗಿ ನಿಂತಿದ್ದು ರಾಮನ ಮಹಿಮೆಯೇ ಶಬರಿಯದೇ ಕನಸ ಕಂಡಿರಬಹುದೇ ಹುಡುಗಿ ಕುದುರೆಯೇರಿ ಬರುವ ಯಾವುದೋ ಉತ್ತರದ ರಾಜಕುವರನದು ಹುಡುಗಿ ಹೆಣ್ಣಾಗಿ ಹಣ್ಣಾಗಿ ಹಪ್ಪು ಮುದುಕಿಯಾಗುವವರೆಗೂ ಕಾದು ಕಾದು ಪಾತ್ರ ಬದಲಿಸಿ ಹರಿದಿರಬೇಕು ನದಿ ಕಾದ ಕಾಯುವ ಕಾವಿನಲ್ಲಿ ಕಾಮನೆಗಳು ಕರಗಿ ನೋಡುವ ಊಡುವ ಬಯಲ ಬಯಕೆ ಉಳಿದು ಕಣ್ಣು ಮುಚ್ಚುವ ಮೊದಲು ಕಂಡೇನೇ ಎಂದು ಕಣ್ಣ ಕೊನೆಯಲ್ಲೆ ಜೀವವನಿರಿಸಿ ಕಾದಿದ್ದಕ್ಕೆ ಬಂದ ಉತ್ತರವಾಗಿ ಅರಸುಮಗನಾಗಲ್ಲ ತಾಪಸಿಯ ವೇಷದಲ್ಲಿ ಕೊನೆಗೂ ಬಂದ ಘನಿತ ಮೋಡ ಎಂಥ ಮಳೆ ಬಂದಿರಬೇಕು ಆಗ! ಯಾವ ಹಣ್ಣನ್ನು ಯಾರು ತಿಂದಿರಬೇಕು ಕಳಿತ ನೇರಳೆಯಂಥವನಿಗೆ ನೇರಳೆಯ ಕೊಟ್ಟಳೇ ಮುದುಕಿ ಕಚ್ಚಿದ್ದಳಂತೆ, ಎಂಜಲು ಹಣ್ಣು ಹಿಡಿದು ಕಾದಿದ್ದಳಂತೆ -ಆಹಾ! (ರಾಮಫಲವನ್ನು ಸವಿದಳೇ ಕಣ್ಣಲ್ಲೇ) ನಡುಗು ಕೈ ಮೈಗಳಲ್ಲಿ ಏನು ಕೊಟ್ಟಳೋ ಪಡೆದಳೋ ಯಾರಿಗೆ ಗೊತ್ತು ವಿರಹ ತಪ್ತ ರಾಮ ; ರಾಮ ತಪಿತೆ ಶಬರಿ ಇದ್ದೀತು ಅವನಿಗದು ಎಂದಿನಂಥದೇ ಇನ್ನೊಂದು ಹಗಲು ಶಬರಿಗೋ ಸಂಜೆಯರಳಿ ಹಗಲು ಸಂಜೆಯಿರದ ಹಗಲು *******

ಕಾವ್ಯಯಾನ

ಉರಿಪಾದವ ಊರಿನಿಂತ ಹೆಜ್ಜೆಗೆ ಎಸ್.ಕೆ.ಮಂಜುನಾಥ್ ಇಟ್ಟಿಗೆ ಕಲ್ಲು ಹೊತ್ತು ಕಟ್ಟಿದ ಯಾವ ಮಹಲು ನಮ್ಮದಲ್ಲ ನೆರಳನು ನೀಡುತ್ತಿಲ್ಲ ಕೈಬೀಸಿ ಕರೆದ ನಗರ ಕತ್ತು ಹಿಡಿದು ನೂಕಿತ್ತಲ್ಲ ಹಸಿವೆಂದು ಬಂದೆವು ಹಸಿವಿಗಾಗಿ ದುಡಿದೆವು ಮತ್ತೆ ಮತ್ತೆ ಹಸಿವ ಹೊಟ್ಟೆ ಬೆನ್ನ ಮೇಲೆ ಹೊರೆಯ ಕಟ್ಟೆ ಹಸಿವಿನಿಂದ ಅಳುವ ಮಗು ಬೀದಿಬದಿಯ ಅನ್ನದೊಡೆಯ ಕಾಣದಾದನು ಎಲ್ಲಿಗೋದನು ಕರೆತಂದು ಬಿಟ್ಟ ಯಾವ ಬಸ್ಸು ರೈಲು ಕಾಣುತ್ತಿಲ್ಲ ಈ ಹೆಜ್ಜೆಗೂ ಈ ದಾರಿಗೂ ನಂಟು ಇನ್ನು ಮುಗಿದಿಲ್ಲ ಹಸಿವ ಗಂಟುಮೂಟೆ ಕಟ್ಟಿಕೊಂಡು ತಲೆಯ ಮೇಲೆ ಹೊತ್ತುಕೊಂಡು ತಾವೇ ಮಾಡಿದ ಹೆದ್ದಾರಿಯ ಮೇಲೆ ಮೈಲುಗಲ್ಲು ಎಣಿಸುತ್ತ ಹೆಜ್ಜೆ ಇಟ್ಟುಕೊಂಡು ಭಾರತ ಬರಿಗಾಲಲಿ ನಡೆಯುತ್ತಿದೆ ಬಿಟ್ಟುಬಂದ ಹುಟ್ಟಿದೂರ ದಾರಿ ಹಿಡಿದು ಹೊರಟರು ಯಾರಾದರು ಅಪ್ಪತಪ್ಪಿ ಅಲ್ಲಿ ಕೇಳದಿರಲಿ ಇವರ ಹೆಸರು (ಅಲೆಮಾರಿ ಪಾದಗಳಿಗೆ ಅರ್ಪಿತ) **********

ಕಾವ್ಯಯಾನ

ಗಝಲ್ ವಿನಿ (ಬೆಂಗಳೂರು) ಮಾಮರದಲಿ ಕುಳಿತ ಕೋಗಿಲೆಯ ದನಿ ಮಧುರವಂತೆ ಗೆಳೆಯಾ ಭೃಂಗವದು ಗೂಯ್ ಎನುವ ಝೇಕಾರ ಸೆಳೆದಂತೆ ಗೆಳೆಯಾ ಭೋರೆನುವ ಜಲಪಾತದ ರಮಣೀಯ ದೃಶ್ಯವದು ಮನಮೋಹಕವಂತೆ ಕಾನನದ ರೌದ್ರ ಮೌನವದು ಎದೆನಡುಗಿಸಿದಂತೆ ಗೆಳೆಯಾ ಬೇಲೂರ ಹಳೇಬೀಡಿನ ಶಿಲ್ಪವದು ಶಿಲ್ಪಿಯ ಅದ್ಭುತ ಕೈಚಳಕವಂತೆ ಒಂದೊಂದು ಮದನಿಕೆಯರು ಸೌಂದರ್ಯದ ಪ್ರತೀಕದಂತೆ ಗೆಳೆಯಾ ಪ್ರಕೃತಿಯ ಮಡಿಲಲಿ ಮೈಮರೆತು ಸಂತಸವನು ಆಸ್ವಾದಿಸಿದಂತೆ ಹುಣ್ಣಿಮೆಯ ಪೂರ್ಣಚಂದಮನು ಸೊಗಸಾಗಿ ಕಣ್ಮನ ಸೆಳೆದಂತೆ ಗೆಳೆಯಾ ಸಪ್ತಸ್ವರಗಳ ನಾದದಲಿ ವಿಜಯಳು ದನಿಗೂಡಿಸಿದಂತೆ ಬಾಳ ಪಲ್ಲವಿಗೆ ನಿನ್ನೊಲವಿನ ಸಾಲುಗಳೆ ಭಾವಗೀತೆಯಂತೆ ಗೆಳೆಯಾ ******************

ಕಾವ್ಯಯಾನ

ಹಾರು ಗರಿ ಬಿಚ್ಚಿ ಡಾ.ಗೋವಿಂದ ಹೆಗಡೆ ಏನಾದರೂ ಆಗಬೇಕು ಬಾಂಬಿನಂತಹ ಏನೋ ಒಂದು ಸ್ಫೋಟಿಸಿ ಹೊಗೆಯಲ್ಲಿ ಅಥವಾ ಅಗ್ನಿಗೋಲದಲ್ಲಿ ಮರೆಯಾಗಿ ಬೇಡ, ಚಾಚಿದ ಕಾಲಿಗೆ ಅಲ್ಲೆಲ್ಲೋ ಮರಳಲ್ಲಿ ಓಡುವ ಇರುವೆ ಕಚ್ಚಿ ‘ಹ್ಹಾ’ ಎಂದು ಏನಾದರೂ ನಡೆಯಲಿ ಇಲ್ಲಿ ಈ ನಿಷ್ಕ್ರಿಯತೆಯನ್ನು ಹೇಗೆ ಸಹಿಸುವುದು +++ ನಿಷ್ಕ್ರಿಯತೆ ನಿರಾಕರಣೆಯೇ ಅನುಭವವೇ ಆಭಾಸವೇ ಅಲ್ಲೆಲ್ಲೋ ಕೋಗಿಲೆ ಕೂಗಿದೆ ಹಕ್ಕಿ ಜೋಡಿ ಸಂಜೆ ಆಗಸವ ಸೀಳಿ ಹಾರಿವೆ ಎಲೆಯೊಂದು ಟಕ್ಕೆಂದು ತೊಟ್ಟು ಕಳಚಿದೆ ತುಸು ಆಲಿಸಿದರೆ ಕೊಂಬೆಯೊಳಗೆ ಹರಿವ ಜೀವರಸದ ಸದ್ದೂ ಕೇಳಬಹುದು ಆದರೂ ಐಸಿಯು ನಲ್ಲಿರುವ ಬಾಲೆಯ ಸ್ತಬ್ಧ ಕಣ್ಣುಗಳ ಶೂನ್ಯ ನೋಟ ಮಾತ್ರ… +++ ಸೂರ್ಯ ಎಂದಿನಂತೆ ಬೆಳಗುತ್ತ ಈ ಗಿಡ ಮರ ಎಲ್ಲ ಹಸಿರುಟ್ಟು ಬೀಗುತ್ತ ಹೊಂಗೆ ಮತ್ತಾವುದೋ ಗಿಡ ಹೂತೇರು ಕಟ್ಟಿ ನಾನು ನಾಲ್ಕು ಗೋಡೆಗಳ ಒಳಗೆ ಹರಿವ ನೀರಿಗೆ ಬಿಚ್ಚಿ ಹಾರಲಾರೆ ಗುಡ್ಡ ಹತ್ತಲಾರೆ ಮರ ಏರಲಾರೆ ಬಯಲಲ್ಲಿ ಕುಣಿಯಲಾರೆ ಆಜೀವ ಶಿಕ್ಷೆಗೆ ಪಕ್ಕಾದ ಕೈದಿಯಂತೆ ಗೋಡೆ ಬಾಗಿಲುಗಳ ನಿರುಕಿಸುತ್ತ.. +++ ಬೋಳು ರಸ್ತೆಗಳು ಹೆಜ್ಜೆ ಸದ್ದಿಗೆ ತವಕಿಸಿರಬಹುದು ಪುಚ್ಚ ಕುಣಿಸಿ ಹಾರುವ ಹಕ್ಕಿ ಓಡುತ್ತ ಏರುವ ನಡುವೆ ಗಕ್ಕನೆ ನಿಂತ ಅಳಿಲಿಗೆ ಇರಬಹುದು ಅಗತ್ಯ ನನ್ನ ನೋಟವೊಂದರ ಸಾಂಗತ್ಯ ಮತ್ತೆ ಚಕ್ರ ತಿರುಗಿ ರಸ್ತೆ ಕಲಕಲ ಎನ್ನುವಾಗ ಮರೆಯದೆ ಐಸಿಯು ನ ಆ ಬಾಲೆಯ ಕೈಯಲ್ಲಿ ಕೈಯಿಡಬೇಕು ಹೂ ರೆಪ್ಪೆಗಳ ಮೇಲೆ ಹಗೂ‌♪ರ ಬೆರಳಾಡಿಸಿ ಪಿಸುಗುಡಬೇಕು “ಏಳು ಮಗೂ, ಸರಿದಿದೆ ಮೋಡ ಕಾದಿದೆ ಬಾನು ಹೋಗು ಹಾರು ಗರಿ ಬಿಚ್ಚಿ…” **********

ಕಾವ್ಯಯಾನ

ಕ್ವಾರಂಟೈನ್ ದಿನಗಳಿವು ಶಾಲಿನಿ ಆರ್. ಅಮ್ಮನ ಆ ಮೂರು ದಿನ ಕಾಗೆ ಮುಟ್ಟಿದೆ ಮುಟ್ಟ ಬೇಡ ಎಂದು ದೂರ ಕುಳಿತ ಮುಟ್ಟಿನ ಆ ದಿನ, ಇಂದು ನಾನೆ ಯಾರನ್ನು ಮುಟ್ಟಿಸಿಕೊಳದೆ ದೂರದಿ ನಿಂತು  ದಿನ ದೂಡುತಿರು ಕ್ವಾರಂಟೈನ್ ದಿನ, ತರಕಾರಿ ಕೊಳ್ಳುವಾಗ ಮಾರುವವನಿಗಿಂತ ಮಾರು ದೂರ ನಿಂತು ಕೊಳ್ಳುವ ಕ್ವಾರಂಟೈನ್ ದಿನ, ದಿನಸಿ ಸಾಮಾನಿನ ಖರೀದಿಗೂ ಬಂದಿದೆ ಕೊಡುವ ಕೊಳ್ಳುವವನ ಮಧ್ಯೆ ಲಕ್ಣ್ಮಣರೇಖೆಯ ಕ್ವಾರಂಟೈನ್ ದಿನ ಪ್ರತಿಯೊಬ್ಬರ ಮಧ್ಯೆದಲ್ಲೂ ಸಿಲುಕಿ ನಲುಗುತಿದೆ ಮುಗಿಯಲಾರದೆ ನರಳುತಿದೆ ಕ್ವಾರಂಟೈನ್ ದಿನ, ಹತ್ತಿರದವರನ್ನು ದೂರವಿರಿಸಿ ದೂರ ಇರುವವರನ್ನು ದೂರವೇ ಬಯಸಿ ಮರೆಯಿತಿರುವ ಕ್ವಾರಂಟೈನ್ ದಿನ., ಕಸ ಗುಡಿಸುವಾಗ ನೆಲ ಒರೆಸುವಾಗ ಪಾತ್ರೆಗಳ ತೋಳೆಯುವಾಗೆಲ್ಲ ಕೆಲಸದವಳ  ನೆನಪು ಇದು ಕ್ವಾರಂಟೈನ್ ದಿನ ಎಲ್ಲರ ಮನೆಯ ತಾರಸಿಯ ಮೇಲೆ ನಕ್ಕು ನಲಿಯುತಿದೆ ಮುಟ್ಟಿಯು ಮುಟ್ಟಲಾರದಂತಹ ಕ್ವಾರಂಟೈನ್ ದಿನ, ಮುಟ್ಟಿದ  ಪ್ರತಿ ತಪ್ಪಿಗೂ ಪದೇ ಪದೇ ಸ್ಯಾನಿಟೈಜರ್ ಉಪಯೋಗಿಸಿ ಮತ್ತೆ ಮತ್ತೆ ಕೈ ತೊಳೆವ ಕ್ವಾರಂಟೈನ್ ದಿನ ಮುಗಿಯದ ಮಕ್ಕಳ ಕಲರವ ಮುಳುಗಿದೆ ಮನೆಯು ಇವರ ಆಫೀಸಿನ ತರಹ ಅಡುಗೆ ಮನೆಗೆ ಬಿಡುವಿಲ್ಲವಂತೆ ಇದು ಕ್ವಾರಂಟೈನ್ ದಿನ, ಇದ್ದ ಅಲ್ಪ ಸ್ವಲ್ಪ ನನ್ನ ಗಳಿಗೆಗಳು ಇಲ್ಲವಾದ ದಿನ ಮಳೆಹನಿಗೆ ಕೈಒಡ್ಡದ ಹಸಿರ ಹವೆಗೆ ಮೈತಾಗದ ಇದು ಕ್ವಾರಂಟೈನ್ ದಿನ… ಆದರೂ ನನ್ನ ನಾ ಅರಿವ ನನ್ನವರೆಲ್ಲ ಹಗಲಿರುಳು ಒಂದಾಗಿ , ಒಂದೇ ಸೂರಿನಡಿಯಲಿ ನಕ್ಕು ನಲಿದು, ತುತ್ತು ಉಣಿಸಿ ಮೆರೆಯುತಿರುವ ಅಭಿಮಾನದ ಕ್ವಾರಂಟೈನ್ ದಿನ… ********** ಕಸ ಗುಡಿಸುವಾಗ ನೆಲ ಒರೆಸುವಾಗ ಪಾತ್ರೆಗಳ ತೋಳೆಯುವಾಗೆಲ್ಲ ಕೆಲಸದವಳ  ನೆನಪು ಇದು ಕ್ವಾರಂಟೈನ್ ದಿನ ಎಲ್ಲರ ಮನೆಯ ತಾರಸಿಯ ಮೇಲೆ ನಕ್ಕು ನಲಿಯುತಿದೆ ಮುಟ್ಟಿಯು ಮುಟ್ಟಲಾರದಂತಹ ಕ್ವಾರಂಟೈನ್ ದಿನ, ಮುಟ್ಟಿದ  ಪ್ರತಿ ತಪ್ಪಿಗೂ ಪದೇ ಪದೇ ಸ್ಯಾನಿಟೈಜರ್ ಉಪಯೋಗಿಸಿ ಮತ್ತೆ ಮತ್ತೆ ಕೈ ತೊಳೆವ ಕ್ವಾರಂಟೈನ್ ದಿನ ಮುಗಿಯದ ಮಕ್ಕಳ ಕಲರವ ಮುಳುಗಿದೆ ಮನೆಯು ಇವರ ಆಫೀಸಿನ ತರಹ ಅಡುಗೆ ಮನೆಗೆ ಬಿಡುವಿಲ್ಲವಂತೆ ಇದು ಕ್ವಾರಂಟೈನ್ ದಿನ, ಇದ್ದ ಅಲ್ಪ ಸ್ವಲ್ಪ ನನ್ನ ಗಳಿಗೆಗಳು ಇಲ್ಲವಾದ ದಿನ ಮಳೆಹನಿಗೆ ಕೈಒಡ್ಡದ ಹಸಿರ ಹವೆಗೆ ಮೈತಾಗದ ಇದು ಕ್ವಾರಂಟೈನ್ ದಿನ… ಆದರೂ ನನ್ನ ನಾ ಅರಿವ ನನ್ನವರೆಲ್ಲ ಹಗಲಿರುಳು ಒಂದಾಗಿ , ಒಂದೇ ಸೂರಿನಡಿಯಲಿ ನಕ್ಕು ನಲಿದು, ತುತ್ತು ಉಣಿಸಿ ಮೆರೆಯುತಿರುವ ಅಭಿಮಾನದ ಕ್ವಾರಂಟೈನ್ ದಿನ…

ಕಾವ್ಯಯಾನ

ಮುಗಿಯದ ಹಾಡು ಎನ್.ಶೈಲಜಾ ಹಾಸನ ಇಡುವ ಹೆಜ್ಜೆ ಜೊತೆ ಜೊತೆಹೆಜ್ಜೆ ಕೂಡಿದ ಪಲುಕುಪರಿ ಪರಿಯ ಕುಲುಕುನಾನೆಂತು ಬಣ್ಣಿಸಲಿನೀ ಒಲಿದೆ,ನನ್ನ ಒಲಿಸಿದೆಬೆಸೆದಿದೆ ಬಂಧನಮನವೀಗ ಹೂ ನಂದನ  ಒಲವ ಬಂಧನದಿ ಸುಖವಿದೆಸಿರಿಯಿದೆ,ಮಧುವಿದೆ,ಸವಿಯಿದೆನಡೆದ ಹಾದಿಯಲ್ಲಿಬಣ್ಣಗಳ ಚೆಲುವಿದೆ ಮೌನದ ಹಾಡಲಿನೂರು ಕವಿತೆಕಣ್ಣ ಬೆಳಕಲಿ ಪ್ರೇಮದಣತೆನೋಟದಂಚಿನಲಿಕೋರೈಸುವ ಮಿಂಚುನೋಟದಾಳದಲಿ ನಲ್ಮೆಯ ಜಲಪಾತತುಂಟ ನಗೆಯಲಿಸಾವಿರ ಪುಳಕ ಕನಸುಗಳ ಸಾಕಾರಎದೆಯ ಗೂಡಲಿನಿನ್ನೊಲುಮೆಯಹುಚ್ಚು ನದಿಯಲಿಕೊಚ್ಚಿ ಹೋದವಳುತೇಲಿ ತೇಲಿ ತೇಲುತಲಿಇರುವ ಹುಚ್ಚು ಖೋಡಿಮನಸ್ಸು ನನ್ನದು ಮುಟ್ಟಲಾಗದು,ತಟ್ಟಲಾಗದುಮೆಟ್ಟಲಾಗದುಮುಪ್ಪಾನು ಮುಪ್ಪಿಗೆಒಲುಮೆಯ ಮನಸಿಗೆಗೆಲುವಿನ ಸೊಗಸು ದಾಂಪತ್ಯ ಗೀತೆಗೆಅನುರಾಗದ ಪಲ್ಲವಿಶೃಂಗಾರದ   ಅನುಪಲ್ಲವಿಮುಗಿಯದ ಹಾಡು ಇದು *******

ಕಾವ್ಯಯಾನ

ಕನಸಿನೂರಿನ ಅಪ್ಪ ಐಶ್ವರ್ಯ ಎಲ್.. ಬೆಳಕ ಹೊತ್ತು ಬಂದ ಸೂರ್ಯನೂ ಹೋಗುವ ಹೊತ್ತಾಯಿತು ಹೊರಗೆ ಹೋದ ಅಪ್ಪನು ಬಂದಾನೂ, ಕೈ ತುಂಬ ಬೊಂಬೆ ತಿಂಡಿಗಳ ತಂದಾನೂ ಅವರಿವರ ಮನೆಯ ಅಪ್ಪಂದಿರಂತೆಯೇ ನನ್ನಪ್ಪನೆಂದು ಕಣ್ಣಳತೆಗೆ ಎಟುಕುವವರೆಗೂ ಮನೆಯ ಮುಂದಿನ ಕಂಬವನೇರಿ ಕಾದು ಕುಳಿತೆ, ಬೆಳೆದು ಬುದ್ದಿಬರುವವರೆಗೆ…… ಏರಿದ ಕಂಬಕ್ಕಾದರೂ ಅರಿವಾಗಿರಬಹುದು ಅಪ್ಪನೆಂಬ ಕನಸು ಬೇರೂರಿದ್ದು ನನ್ನೊಳಗೆ, ಅರಿವಾಗಲೇ ಇಲ್ಲ ದೇವರಿಗೆ, ಅಪ್ಪನ ಕರೆದೊಯ್ದೆಬಿಟ್ಟಿದ್ದನು ನಂಗೆ ಬುದ್ದಿಬರುವುದರೊಳಗೆ………. ಜಡಕು ಕೂದಲಿಗೆ ಜುಟ್ಟುಕಟ್ಟಿ, ಕಪ್ಪು ಕಾಡಿಗೆಯಲಿ ಕಾಸಗಲದ ಬೊಟ್ಟಿಟ್ಟು ನನ್ನಿಷ್ಟದ ಫ್ರಾಕನ್ನೆ ತೊಟ್ಟು, ಕುಣಿವಾಗ ಕೆನ್ನೆಯ ತುಂಬೆಲ್ಲಾ ಮುತ್ತಿಟ್ಟು ಅಮ್ಮನಿಗೂ ಕದ್ದು ಮುಚ್ಚಿ ಚಾಕಲೇಟ್ ಕೊಟ್ಟು, ಭುಜದ ಮೇಲೆ ನನ್ನ ಹೊತ್ತು ಎಲ್ಲರಂತೆ ನನ್ನನ್ನೂ ಶಾಲೆಗೆ ಹೊತ್ತೊಯ್ಯುವುದು ಬಾಕಿ ಇತ್ತು ಅಪ್ಪನಿಗೆ ಅದ್ಯಾವ ಕೆಲಸ ಬಾಕಿ ಇತ್ತೊ ನಾಕಾಣೆ ಅಪ್ಪನ ಕಾಯುವಿಕೆಯಲಿ ಏರಿದ ಕಂಬ, ಇಳಿದ ನನ್ನ ಕಣ್ಣೀರಿನಲಿ ಹಸಿರಾಯ್ತು ಇಂದಲ್ಲ ನಾಳೆ ಅಪ್ಪ ಬಂದೇ ಬರುವನೆಂಬ ನಂಬಿಕೆ ಮಾತ್ರ ಹುಸಿಯಾಯ್ತು…… ಪುಟ್ಟ ಹೆಜ್ಜೆ ಇಟ್ಟಾಗ ಅಂಗಾಲಿಗೆ ಮುತ್ತಿಕ್ಕಿ, ಬೊಗಸೆಯಲಿ ಪಾದ ಹಿಡಿದು, ಅಮ್ಮ ಗದರಿದಾಗ ಅಮ್ಮನಿಗೇನೆ ಗದರಿಸಿ ನಿನ್ನ ಎದೆಗಪ್ಪಿ ನಾ ಮಲಗಿದಾಗ ಸುರಿದ ಜೊಲ್ಲು ಒರೆಸಿ ಉಪ್ಪು ಮೂಟೆಯ ಮಾಡಿ, ಊರೆಲ್ಲ ತಿರುಗಿಸಿ, ಮುದ್ದಿಸಿ ಕೈಬೆರಳ ಹಿಡಿದು ನಡೆಸುವುದರಿಂದ ಹಿಡಿದು ಕಾಲಿಗೆ ಕಾಲುಂಗುರ ಹಾಕಿಸಿಕೊಳ್ಳುವವರೆಗೂ ನೀ ಜೊತೆಗಿರಬೇಕಿತ್ತೆಂಬ ಆಸೆ ಇಂದಿಗೂ ಬದುಕಿದೆ ಆದರೇನೂ ಮಾಡುವುದು ಬಯಕೆ ಇಡೆರಿಸಲು ನೀನೆ ಬದುಕಿಲ್ಲ ……… ನೀ ಪ್ರಪಂಚಕ್ಕೆ ತಂದ ಪುಟ್ಟ ಜೀವವೇ ನಿನಗೆ ಪ್ರಪಂಚವೆಂದು ಪ್ರತಿ ಹೆಜ್ಜೆಯಲು ಮಗಳ ಮುಂದಿನ ಭವಿಷ್ಯಕ್ಕೆಂದು ರಾಣಿಯಂತೆ ಬೆಳೆದ ಮಗಳಿಗೆ, ರಾಜಕುಮಾರನ ತಂದು ಮದುವೆ ಮಾಡುವ ಕನಸ ಕಂಡು, ಮಗಳು, ಅಳಿಯ ಮೊಮ್ಮಕ್ಕಳೆಂದು ಅಜ್ಜನಾಗುವವರೆಗೂ ನೀನಿರಬೇಕಿತ್ತು ಅಪ್ಪ…… ನಾನೂ ದೊಡ್ಡವಳಾಗಿದ್ದೇನೆ, ನಿನ್ನಷ್ಟೇ ಎತ್ತರಕ್ಕೆ ಬೆಳೆದು ನೀನಿರಬೇಕಿತ್ತೆಂಬ ಬಯಕೆಯು ನನ್ನಷ್ಟೆತ್ತರಕೆ ಬೆಳೆದಿದೆ ನನ್ನೊಟ್ಟಿಗೆ ಕಾದು ಆದರೂ….. ಅಪ್ಪ ನೀನಿರಬೇಕಿತ್ತು ನನ್ನೊಟ್ಟಿಗೆ…… ಅಜ್ಜನಾಗಿ ನನ್ನಂಥವಳನ್ನೆ ಹೆಗಲ ಮೇಲೆ ಹೊರುವವರೆಗೆ….. **********

ಕಾವ್ಯಯಾನ

ಜರೂರು ಬಂದೊದಗಿದೆ ಗೌರಿ.ಚಂದ್ರಕೇಸರಿ ದೇವ ಮಾನವರೆಲ್ಲ ಏನಾದರು? ತಪದಲ್ಲಿರುವರಾ ಇಲ್ಲಾ ಮೌನ ವ್ರತದಲ್ಲಿರುವರಾ? ಇಲ್ಲಾ ನಿದ್ರೆಯಲ್ಲಿ ಕಳೆದು ಹೋದರಾ? ಸೂರ್ಯ ಚಂದ್ರರುದಿಸುವುದು ತಮ್ಮಿಂದ ಎಂದವರು ಸ್ಪರ್ಷ ಮಾತ್ರದಿಂದಲೇ ಕಾಯಿಲೆಗಳ ಮಾಯ ಮಾಡುವೆ ಎಂದವರು ಅಂಗೈ ನೋಡಿ ತಾಳೆ ಹಾಕುವವರು ಪೂಜೆಗೈದು ಪಾಪವ ತೊಳೆಯುವವರು ಏನಾದರು? ಕೂಗು ಕೇಳುತ್ತಿಲ್ಲವೆ ಹಾಹಾಕಾರ ಕಾಣುತ್ತಿಲ್ಲವೆ? ಭೂ ಮಂಡಲವನ್ನೇ ಆವರಿಸಿದೆ ಅನಿಷ್ಠ ಎಲ್ಲೆಲ್ಲೂ ಹಿಡಿ ಅನ್ನಕ್ಕಾಗಿ ಚಾಚಿವೆ ಕೈಗಳು ಕುಣಿಕೆ ಹಿಡಿದು ಕಾದಿದೆ ಸಾವು ಬನ್ನಿ ನಿಮ್ಮ ಜರೂರು ಈಗ ಬಂದೊದಗಿದೆ ಹೊತ್ತಿರುವ ಬೆಂಕಿಗೆ ನಿಮ್ಮ ಪ್ರಭಾವಳಿಯ ತಂಪನೆರೆಯಿರಿ ವಿಶ್ವದ ವಿಷವನೆಲ್ಲ ಹೀರಿ ಬಿಡಲಿ ನಿಮ್ಮ ಮಂತ್ರ ದಂಡ ******

ಕಾವ್ಯಯಾನ

ಒಂದು ಕವಿತೆ ಅಮೃತಾ ಮೆಹಂದಳೆ ಈಗ ನಿನ್ನ ವಿರಾಮ ಸಮಯವಲ್ಲವೇ? ಬಿಡುವಿನಲ್ಲಿ ನೆನೆಯುತ್ತಿರುವೆಯಾ ನನ್ನ ನೀನು? ಲಟಿಗೆ ಮುರಿದ ಬೆರಳು ಸ್ಪರ್ಶಕ್ಕಾಗಿ ಹಂಬಲಿಸಿರಬಹುದೇನು? ಚಾಚಿದ ಕಾಲು ಬಯಸಿತಾ ಸಹನಡಿಗೆಯನ್ನು? ಏನೋ ಹುಡುಕುವ ಕ್ಯಾಮರಾ ಕಣ್ಣು ನನ್ನದೇ ಚಿತ್ರ ಸೆರೆಹಿಡಿಯುತ್ತಿದೆಯೇನು? ತುಟಿಸೋಕಿ ಸುಟ್ಟ ಕಹಿಕಾಫಿ ನಿನ್ನ ಪಾಲಿನ ನಾನಲ್ಲವೇನು? ನನ್ನ ಪ್ರೀತಿಯ ಹಾಡು ನಿನ್ನ ಪಾಡಾಗಿ ಕಿವಿಯ ಸೋಕುತ್ತಿರಬಹುದೇನು? ಇಲ್ಲಿ ಬೀಸಿದ ಗಾಳಿ ಸುತ್ತಿ ಸುಳಿದು ನಿನ್ನಾತ್ಮವ ಪುಳಕಿಸಬಾರದಿತ್ತೇನು? ನನ್ನ ಕಣ್ಣು ಕತ್ತಲು ಕಪ್ಪುಪಟ್ಟಿ ಕಟ್ಟದೆಯೇ.. ಕಿವಿ ಮುಚ್ಚಿಹೋಗಿದೆ ಧ್ವನಿ ತಲುಪಲಾಗದೆಯೇ.. ನಾಲಿಗೆ ಸೀಳಿದೆ ಮತ್ತೆಂದೂ ಹೊಲಿಯಲಾಗದೆಯೇ.. ಅವಯವಗಳೇ ಸುಟ್ಟುಹೋಗಿದೆ ಭಾವ ಚಿಗುರಲಾಗದೆಯೇ.. ನಾನೇ ಹೂತುಹೋಗಿರುವೆ ಅಸ್ತಿತ್ವವಿಲ್ಲದೆಯೇ.. ಮಾತೇ ಇಲ್ಲದ ಮೌನದಾಯುಧಗಳು ಸೋತು ಎರಡೂ ಕಡೆ.. ಮನಸು ಜಾರಿ ಹೃದಯದೆಡೆ..ಕದನವಿರಾಮ ಜಾರಿಯಾಗಬಾರದೇ? **********

Back To Top