Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಗಝಲ್ ಎ.ಹೇಮಗಂಗಾ ಅವನಿಗಾಗಿ ಕಾದ ಕಣ್ಣ ನೋಟ ಮಬ್ಬಾಗಿದೆ ಸಖಿ ಅವನಿಲ್ಲದೇ ಯಾವ ಹಬ್ಬವೂ ಬೇಡವಾಗಿದೆ ಸಖಿ ವಚನ ಮೀರದವ ಇಂದು ವಚನ ಮೀರಿದನೇಕೋ ಮಿಲನವಿಲ್ಲದ ಯಮುನೆ ತಟ ಭಣಗುಡುತಿದೆ ಸಖಿ ಒಮ್ಮೆಗೇ ಬಂದು ಪರಿಪರಿಯಾಗಿ ಕಾಡುವ ಅವನು ರಾಸಲೀಲೆಯಿಲ್ಲದ ಬಾಳು ನೀರಸಗೊಂಡಿದೆ ಸಖಿ ಸುತ್ತಲಿನ ಗಾಳಿಯೂ ಅವನ ಬರುವಿಕೆ ಸೂಚಿಸುತ್ತಿಲ್ಲ ಸೊಲ್ಲಿಲ್ಲದೇ ನಗುವಿಲ್ಲದೇ ಮನ ಮಸಣವಾಗಿದೆ ಸಖಿ ತೊರೆದು ಹೋದ ಶ್ಯಾಮ ಮತ್ತೆ ಬರುವನೇ ಹೇಳು ಅವನಿರದೇ ಸಾವೇ ಹಿತವಾಗಿ ಹತ್ತಿರ ಸೆಳೆದಿದೆ ಸಖಿ ********

ಕಾವ್ಯಯಾನ

ಅಮುಕ್ತ ಅಮೃತಮತಿ ಲಕ್ಷ್ಮೀ ಪಾಟೀಲ ಅಂಗ ಸೌಷ್ಠವದ ಬಾಹ್ಯ ಸೌಂದರ್ಯ ರಾಜ ವರ್ಚಸ್ಸು ವಜ್ರ ವೈಡೂರ್ಯ ಭೋಗ ಭಾಗ್ಯಗಳ ನಿವಾಳಿಸಿ ಅಂತರಂಗ ಬೇಟಕೆ ಮನವ ಬೀಳಿಸಿ ಬಿಗಿ ಮೌನ ಮುರಿದು ಮಾತಾಗಲು ನಡೆದೆ ಪಂಜರದ ಅರಗಿಳಿಗೆ ಮಾತು ಕಲಿಸಿದ್ದೂ ಮರೆತು, ಕಾಡ ಕೋಗಿಲೆ ಕರೆಗೆ ವಸಂತ ಕೂಟಕೆ ನಡೆದೆ ಬೇಟ ಕೂಟಕೆ ಮನವ ಮಿಡಿಸಿ ಶರತ್ತುಗಳಿಲ್ಲದೆ ಪ್ರೀತಿ ಕೊಡಲು ಮೈ ಬೆವರ ಬಸಿದು ಸೋನೆ ಸುಯ್ಯಲು ಬಿಡುವಿಲ್ಲದೆ ನಡೆದೆ, ಭಾವ ಕೂಟಕೆನಡೆದೆ,,, ಅಗ್ನಿ ದಿವ್ಯದ ದಾರಿಗೆ ಅಗ್ನಿ […]

ಕಾವ್ಯಯಾನ

ಗಝಲ್ ಲಕ್ಷ್ಮಿ ದೊಡಮನಿ ಮಹಾಮಾರಿಯ ಬಲಿ ಕಂಡು ಎದೆಗೆ ಬೆಂಕಿ ಇಟ್ಟಂತಾಗಿದೆ ಎಲ್ಲರ ಕೈಮೀರುತ್ತಿದೆಯೆಂದು ಎದೆಗೆ ಬೆಂಕಿ ಇಟ್ಟಂತಾಗಿದೆ ನನ್ನ ದೌರ್ಬಲ್ಯಗಳನ್ನು ಖಚಿತ ಪಡಿಸಿಕೊಂಡು ನನ್ನೊಂದಿಗೆ ಕಣ್ಣುಮುಚ್ಚಾಲೆಯಾಡುತ್ತಿರುವೆಯೆಂದು ಎದೆಗೆ ಬೆಂಕಿ ಇಟ್ಟಂತಾಗಿದೆ ಹಳೆಯದಾದರೂ ಮರೆಯಾಗುತ್ತಿಲ್ಲ ಹೆಚ್ಚುತ್ತಿದೆ ನೋವು ಮನ ನೆನಪಿಸುತ್ತಿದೆಯೆಂದು ಎದೆಗೆ ಬೆಂಕಿ ಇಟ್ಟಂತಾಗಿದೆ ಅಂದಿನ ಅನ್ನವನ್ನು ಅಂದೇ ಗಳಿಸುವ ಜನ ನಾವು ಗೃಹಬಂಧನದಿ ಹೊಟ್ಟೆ ಹೊರೆದುಕೊಳ್ಳುವದ್ಹೇಗೆಂದು ಎದೆಗೆ ಇಟ್ಟಂತಾಗಿದೆ ಅತಿಯಾದ ಸ್ವಾರ್ಥವನೆಂದಿಗೂ ನಾನು ಯೋಚಿಸಿಲ್ಲ ‘ಚೆಲುವೆ’ ಈ ಅನೀರಿಕ್ಷಿತತೆಯ ಮಾತು ಎದೆಗೆ ಬೆಂಕಿ ಇಟ್ಟಂತಾಗಿದೆ *********

ಕಾವ್ಯಯಾನ

ಹಂಬಲಿಸಿರುವೆ ಶಿವಲೀಲಾ ಹುಣಸಗಿ ನಿನ್ನ ಮೇಲೊಂದು ಮುನಿಸಿದೆ ಕಾರಣ ಹೇಳಲ್ಲ ಚಿಂತಿಸೊಮ್ಮೆ.! ಕನಿಕರಿಸದ ಇರುಳುಗಳೆಲ್ಲ ಉರುಳುಗಳಾಗಿ ಬೆಸೆದಿವೆ..! ಮಬ್ಬಿನಲೊಂದು ನಿಟ್ಟುಸಿರು ತುಟಿಯಂಚಿನಲೊಂದು ಹಸಿಯಾದ ಮೌನದುಸಿರು.! ಕಾಡಿಗೆಯ ಕರಿನೆರಳು.. ಕಮರಿದಾ ಪುಷ್ಪದಂತೆ ರತಿ ಉರಿದು ಭಸ್ಮವಾದಂತೆ..! ಕಪ್ಪುಛಾಯೆಯ ಬಿಂಕನಾನೊಲ್ಲೇ ಮಡುಗಟ್ಟಿದ ಒಡಲುನನ್ನಲ್ಲೇ ನಿನ್ನುಸಿರ ಅಪ್ಪುಗೆಯಲಿ ಬಿಗಿದು ಮುತ್ತಿನಾ ಮಳೆಯ ಸುರಿದ ಬಾರದೇ ನನಗಿನ್ನೇನೂ ಬೇಕಿಲ್ಲ..ನಲ್ಲಾ.. ನಿನ್ನ ಹಿಡಿ ಪ್ರೀತಿಯ ಹೊರತು…! ನಿನ್ನೊಟಕೆ ಹುಸಿಗೋಪ ಮರೆವೆನು ಮರುಗಿದಾಗೆಲ್ಲ ಕನವರಿಕೆಗಳು ಮೊಳಕೆಯೋಡಯದ ಕನಸುಗಳು ನಿಟ್ಟೂಸಿರು ಬಿಡದಾ ಕಂಗಳು..! ನೀ ನೀಡಿದ ಉದರಾಗ್ನಿಯಲಿ […]

ಕಾವ್ಯಯಾನ

ಮಕ್ಕಳ ಕವಿತೆ ಆಸೆ ಮಲಿಕಜಾನ ಶೇಖ ಆಕಾಶಕ್ಕೆ ಹಾರುವ ಆಸೆ ರೆಕ್ಕೆಗಳಿಲ್ಲದೆ ಹಾರುವದ್ಹೇಗೆ..? ಗರುಡನೆ ಗರುಡನೆ ಕೇಳಿಲ್ಲಿ ನಿನ್ನಯ ರೆಕ್ಕೆ ಕೊಡು ಎನಗೆ.. ಮುದ್ದಿನ ಬಾಲಕ ಕೇಳಲೆ ನೀನು ರೆಕ್ಕೆಗಳೇನು ಕೊಡುವೆನು ನಾನು ಛಲವಿಲ್ಲದನೆ ಹಾರುವದ್ಹೇಗೆ..? ರೆಕ್ಕೆಗಳಂತು ಚಿಟ್ಟೆಗೆವುಂಟು..! ಸಾಗರದಾಚೆ ಈಜುವ ಆಸೆ ಕಿವಿರುಗಳಿಲ್ಲದೆ ಈಜುವದ್ಹೇಗೆ..? ಮೀನವೆ ಮೀನವೆ ಕೇಳಿಲ್ಲಿ ನಿನ್ನಯ ಕಿವಿರು ಕೊಡು ಎನಗೆ.. ಪುಟ್ಟನೆ ಪುಟಾಣಿ ಕೇಳಲೆ ನೀನು ಕಿವಿರುಗಳೇನು ಕೊಡುವೇನು ನಾನು ತಾಳ್ಮೇಯ ಇಲ್ಲದೆ ಈಜುವದ್ಹೇಗೆ..? ಕಿವಿರುಗಳಂತು ಚಿಪ್ಪೆಗೆವುಂಟು..! ಗುಬ್ಬಿಯ ಗೂಡನು ಕಟ್ಟುವ […]

ಕಾವ್ಯಯಾನ

‘ಪ್ರಶ್ನೆ ದಾಳ’ ವಸುಂಧರಾ ಕದಲೂರು.  ಎಳೆ ಹುಡುಗನನ್ನು ಮಲೆ ಮೇಲೆ ಕೂರಿಸಿ ಆತ, ಮೊಲೆ ಕಾಣಬಾರದೆಂದು ಬಿಡುತ್ತಾರೆ ! ಹತ್ತಲು ೧೮ ಏಕೆ ..? ಉತ್ತರವಿಲ್ಲದವರ ಬಳಿ ಇಂತಹ ಪ್ರಶ್ನೆ ಕೇಳಬಾರದು. ಎರಡೊಂಬತ್ತಲಿ ಹದಿನೆಂಟೆಂದು ಒಂದು ಗರ್ಭಾವಧಿಯ ಅವಧಿಯ ಮರೆತು ಬಿಡುತ್ತಾರೆ. ಬೀಜ ನಾಟಿ, ಬೇರು ಚಿಗುರಿ ಹೂವೋ ಕಾಯೋ ಅರಳಿಕೊಳಲು ಒಂದ್ಹೊಂಬತ್ತು. ಹೊಟ್ಟೆ ಮಗುಚಿ ಅಂಬೆಗಾಲಿರಿಸಿ, ಬಾಯ ತೊದಲು ಶುರುವಿಗೆ ಇನ್ನೊಂದು ಒಂಬತ್ತು. . ಆಯಿತಲ್ಲ ಹದಿನೆಂಟು..! ಪ್ರತೀ ಪ್ರಶ್ನೆಗೂ ಒಂದು ಉತ್ತರವಿದೆ ಒಪ್ಪಿತವಾದರೆ. ಆದರೂ […]

ಕಾವ್ಯಯಾನ

ವಿಶ್ವಗುರು ಬಸವಣ್ಣ ತೇಜಾವತಿ ಹೆಚ್. ಡಿ ನೀನೇ ಅಲ್ಲವೇ ಮಹಾಮಾನವತಾವಾದಿ ಹನ್ನೆರಡನೆಯ ಶತಮಾನದ ಕ್ರಾಂತಿಯೋಗಿ ಅದೆಷ್ಟೋ ಅಂಧಕಾರದ ಧೂಳುಹಿಡಿದ ಮನಗಳಲಿ ಅರಿವಿನ ಪ್ರಣತಿಯ ಬೆಳಗಿದೆ ! ಹುಟ್ಟುಬ್ರಾಹ್ಮಣ ಸಂಸ್ಕಾರಶರಣ ಅಂಧಶ್ರದ್ಧೆ ಜಡ ಸಂಪ್ರದಾಯ ತೊರೆದು ಸತ್ಯಾನ್ವೇಷಕನಾದೆ ! ಅಂತರ್ಜಾತಿ ವಿವಾಹ ಮಾಡಿಸಿ ಬಿಜ್ಜಳನಾಸ್ಥಾನ ಮಂತ್ರಿ ನೀನು ಗಡೀಪಾರಿಗೀಡಾದೆ! ಸಮಾಜ ಸುಧಾರಕನಾದೆ ಕಾಯಕವೇ ಕೈಲಾಸವೆಂದೆ ನುಡಿದಂತೆ ನಡೆಯೆಂದೆ ಅಂತರಂಗಶುದ್ಧಿಯೇ ಮಿಗಿಲೆಂದೆ ಜ್ಞಾನವೇ ಬಂಢಾರವೆಂದು ನೀ ಭಕ್ತಿ ಬಂಢಾರಿಯಾದೆ ! ಆಚಾರವೇ ಸ್ವರ್ಗವೆಂದೆ ಅನಾಚಾರವೇ ನರಕವೆಂದೆ ಅನುಭವ ಮಂಟಪದೊಳು ಮಹಾಜ್ಞಾನಿಯಾದೆ […]

ಕಾವ್ಯಯಾನ

ಬಸವಣ್ಣ ಡಾ.ಪ್ರಸನ್ನ ಹೆಗಡೆ ಅಣ್ಣ ಬಸವಣ್ಣನೆಂದರೆ ಬಿಜ್ಜಳ ಮಂತ್ರಿಯೊಂದೇ ಅಲ್ಲ ಸಾವಿರದ ಬೀಜ ಬಿತ್ತಿದ ಮಹಾ ಮಂತ್ರ ಮೂರ್ತಿ ಅಣ್ಣ ಬಸವಣ್ಣನೆಂದರೆ ಬರೆ ವಚನಕಾರನಲ್ಲ ಹೊಸ ವಿಚಾರ ಸೃಜಿಸಿದ ವಿವೇಕ ಮೂರ್ತಿ ಅಣ್ಣ ಬಸವಣ್ಣನೆಂದರೆ ಬರೇ ಶಿವಶರಣನಲ್ಲ ಶಿವ ಚರಣ ಮುಟ್ಟದಾ ವಿಶ್ವ ಮೂರ್ತಿ ಅಣ್ಣ ಬಸವಣ್ಣನೆಂದರೆ ವಿಚಾರವಾದಿಯೊಂದೇ ಅಲ್ಲ ಶಿಷ್ಟಾಚಾರ ಪಾಲಿಸಿದ ಇಷ್ಟ ಮೂರ್ತಿ ಅಣ್ಣ ಬಸವಣ್ಣನೆಂದರೆ ಬರೇ ಲಿಂಗ ಪಿಡಿದವನಲ್ಲ ಲಿಂಗವನ್ನೇ ಮೆಚ್ಚಿಸಿದ ಜ್ಞಾನ ಮೂರ್ತಿ ಅಣ್ಣ ಬಸವಣ್ಣನೆಂದರೆ ಜ್ಞಾನ ಸಾಗರವಷ್ಟೇ ಅಲ್ಲ ಸರ್ವರನೂ […]

ಕಾವ್ಯಯಾನ

ಕರೋನ ಕರೋನಾ.. ವಾಣಿ ಮಹೇಶ್ ಅತ್ತ ಹೋಗ್ ಬ್ಯಾಡಿ ಕರೋನಾ ಐತೆ ಇತ್ತ ಬರ್ ಬ್ಯಾಡಿ ಕರೋನಾ ಐತೆ ಎತ್ತಾ ಹೋದ್ರೂನೂ ಪೋಲೀಸು ಕಾಟ ಎತ್ತಾ ಬಂದ್ರೂನೂ ವೈದ್ಯರಾ ಕಾಟ ಏನು ಮಾಡೋದಪ್ಪ… ಹೆಂಗಿರೋದಪ್ಪಾ..? ಮನೆಯಲ್ಲಿ ಕುಂತೂ.. ನಿಂತೂ.. ಸಾಕಾಗೋಗೈತೆ.. ಅಯ್ಯೋ ಸಾಕಾಗೋಗೈತೆ // ಪಕ್ಕದಾ ಮನೆಯಾ ಇಣುಕಿ ನೋಡಲೂ ಭಯವಾಗುತೈತೆ ಯಾಕೋ.. ಏನೋ.. ಬಂದಾ.. ಕೆಮ್ಮು ನೋಡಿದಾ ಜನ ದೂರ ಸರಿಸಿಯೇ ಬಿಟ್ಟರಲ್ಲ!!! ಅಯ್ಯೋ ಓಡಾಡ್ಸಿ ಬಿಟ್ಟರಲ್ಲ..!! ಬೆಳಗಿಂದಾ.. ಮೈ ಬೆಚ್ಗೆ.. ಊರೆಲ್ಲಾ ಸುತ್ತೋಕೆ ಹೋಗಿದ್ನಲ್ಲ […]

ಕಾವ್ಯಯಾನ

ಅಂತಿಮಯಾತ್ರೆ ಹರೀಶ ಕೋಳಗುಂದ ಉಸಿರು ಬಿಗಿ ಹಿಡಿದಿದೆ, ಎದೆಬಡಿತ ಕ್ಷೀಣ. ಕೆಲವೇ ಸಮಯ ಬಾಕಿ. ಪಸೆಯಾರಿದ ಗಂಟಲಿಗೆ ಕಡೆಯ ಬಯಕೆ, ಗುಟುಕು ಗಂಗಾಜಲ ಮಾತ್ರ. ಮತ್ತೇನೂ ಬೇಡ. ಉರಿವ ಹಣತೆಯ ಸೊಡರು ಬೀಸುಗಾಳಿಗೆ ತುಯ್ದಾಟ….! ಕಾಲ ಮೀರುತ್ತಿದೆ, ಸಾಸಿವೆಯ ಸಾಲಕ್ಕೆ ಹೋದವಳು ಇನ್ನೂ ಮರಳಿಲ್ಲ, ದಾರಿಯಲಿ ಬುದ್ಧ ಸಿಕ್ಕಿರಬೇಕು. ಕಾಲವಶದಲ್ಲಿ ಸಾವಿತ್ರಿಯೂ ಲೀನ. ಪುರುದೇವನ ವರ್ತಮಾನವೂ ಇಲ್ಲ. ಕಣ್ಣು ಕವಿಯುತ್ತಿದೆ, ಚಾಚಿ ಮಲಗಿದ ದೇಹ ಅಸಾಧ್ಯ ಭಾರ. ಸುತ್ತ ಕತ್ತಲೆಯ ಕೂಪ, ಏಕಾಂಗಿ ಭಾವ, ಹಠಾತ್ತನೆ ಯಾರದೋ […]

Back To Top