Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಕವಿತೆ ವಿಜಯಶ್ರೀ ಹಾಲಾಡಿ ಚಿತ್ರ ಬಿಡಿಸುವ ಮರಚಳಿಗೆ ನರಳಿ ಇಬ್ಬನಿಅಡರಿ ಹಿಮಗಾಳಿಶೀತ ಹಿಡಿದುಕೊಂಡಿದೆ ಗಳಿತ ಎಲೆಯೊಂದುಹಳದಿ ಉಸಿರಿನ ಕೂಡೆಮಣ್ಣಿಗೆ ಸೋಕಿ ನಿಡಿದುನಿರಾಳ ಅಪ್ಪಿಕೊಂಡಿದೆ ಧೂಳ ಹೆಜ್ಜೆಗಳಲ್ಲಿಪಾದವೂರಿದ ಬೀಜಮುಗಿಲೂರಿನ ಕನಸರಂಗುಗಳ ಕವಿದುಕೊಂಡಿದೆ ಮೈಮುರಿದು ಆಕಳಿಸುವನಿಗೂಢ ಇರುಳು ಮಾತ್ರಬಿಟ್ಟ ಕಣ್ಣು ಬಿಟ್ಟಹಾಗೆಗೂಬೆದನಿಗೆ ಆಲಾಪಿಸಿದೆ. *******

ಕಾವ್ಯಯಾನ

ಗಾಂಧಿ ನಕ್ಕರು ಅಶ್ವಥ್ ಗಾಂಧಿ ನಕ್ಕರು ಗಾಂಧಿತಾತ ರಾಷ್ಟ್ರಪಿತ ತನ್ನೊಳಗೇ ತಾನು ದೈವಭಕ್ತ ಸಂಪತ್ತಿನುತ್ತುಂಗ ಎಂಜಿ ರಸ್ತೆ ಗಾಂಧಿಗೆಂದು ಮೀಸಲಂತೆ ಬೀದಿ ಬದಿಯ ಬಡವನ ಪಾಲು ಚಿತ್ರಮಂದಿರದ ಕೊನೆಯ ಸಾಲು ಕಣ್ಣರಳಿಸಿ ಕತ್ತನೆತ್ತಿ ತುಣುಕು ತುಣುಕೇ ದೃಶ್ಯವುಂಡು ಬೆರಗಾಗುವ ಬೆಪ್ಪನ ಕಂಡು ಗಾಂಧಿ, ಸುಮ್ಮನೆ ನಕ್ಕುಬಿಟ್ಟರು ಹೊಸ ಕಾಲದ ಅಭ್ಯುದಯಕೆ ಒಂದು ಸಂಜೆ ಕಾರ್ಯಕ್ರಮಕೆ ಸೆಲ್ಫಿ ತೆಗೆದುಕೊಳ್ಳಲೊಂದು ಪೊರಕೆ ತಂದು, ಕ್ಯಾಮರ ಬಂದು ಸಾವಧಾನ ಕೊಂಡುತಂದು ಗಾಂಧಿಯನ್ನು ಬಳಸಿಕೊಂಡು ನೀರು ಸಿಂಪಡಿಸಿಕೊಂಡು ಹುಸಿಬೆವರು ಬರಿಸಿಕೊಂಡು ಸಮಾಧಾನ ಭಂಗಿಯಲ್ಲಿ ಕ್ಲಿಕ್ ಕ್ಲಿಕ್ ಚಿತ್ರ ತೆಗೆವ ಹುಸಿ ಮುಸಿ ನಗುವ ಮುಡಿಸಿ ಮಸಿಯ ಬಳಿವ ನಾಯಕ ನಾಲಾಯಕ್ಕರ ನೆನೆದು ಗಾಂಧಿ, ನಕ್ಕು ಸುಮ್ಮನಾದರು ವಿಶ್ವಗುರುವು ನಮ್ಮ ಬೃಹತ್ ದೇಶ ಉದ್ದಗಲಕೂ ಇದೇ ವೀರಾವೇಶ ಕೂತರೆ ಖಂಡಾಂತರ ನಿಂತರೆ ಹಿಮಾಲಯದೆತ್ತರ ಸಮಾನತೆಗಿಲ್ಲ ಅರ್ಥ ಸನಾತನವದೊಂದೇ ತೀರ್ಥ ಫಡಫಡ ಬಾಯಿ, ಬಡಾಯಿ ದಂಡು ಗಗನ ನೌಕೆ ತೇಲ್ವುದನ್ನು ಕಂಡು ಗಾಂಧಿ, ಸುಮ್ಮನಿರದೇ ನಕ್ಕರು ಆಟಗಾತಿ ಓಡಿ ಪದಕ ತಂದರಲ್ಲಿ ಜಾತಿ ಹುಡುಕಿಕೊಂಡು ಬಂದರಿಲ್ಲಿ ಕಣ್ ಮುಚ್ಚಿ ಹಾಲು ಕುಡಿವ ಬೆಕ್ಕು ಮುಲ್ಲಾನ ಮಿಯಾಂವೇ ಇರಬೇಕು! ಬಾಂಬಿನಲ್ಲೂ ಧರ್ಮವ ಕಂಡು ನಿಂತಲ್ಲಿಯೇ ಬೆರಗುಗೊಂಡು ಗಾಂಧಿ, ನಗಲಾರದೇ ಸುಮ್ಮನಿದ್ದರು! ಬಂಗಾರದ ರಸ್ತೆಯ ಮಾತನಾಡಿ ಬಡವರ ಬುಡಮೇಲು ಮಾಡಿ ನೂರೈವತ್ತನೇ ಜಯಂತಿ ಕಂಡು ಗಾಂಧಿ, ನಕ್ಕು ಸುಮ್ಮನಾದರು ‘ಮತ್ತೆ ಹುಟ್ಟಿ ಬಾ’ ಎಂಬುದನ್ನು ಕೇಳಿ ಗಾಂಧಿ, ನಕ್ಕು ನಕ್ಕು ಸುಸ್ತಾದರು *********

ಕಾವ್ಯಯಾನ

ಜಾತ್ರೆ ಅಂಜನಾ ಹೆಗಡೆ ಬಯಲಿಗಿಳಿದ ದೇವರೆದುರು ತಲೆಬಾಗಿ ನಿಂತರೆ ಮೆದುಳಿಂದ ಮೃದುವಾಗಿ ಎದೆಗಿಳಿದ ಜಯಜಯ ಶಂಕರಿ ಜಯ ಜಗದೀಶ್ವರಿ…. ತಂಪಾದ ಹಾಡು ತಲೆಗೆ ಮೆತ್ತಿದ ಬಣ್ಣಕ್ಕೂ ಎದೆಗಿಳಿದ ಮೆದುಳಿಗೂ ಸಂಪರ್ಕವೇ ಇಲ್ಲದಂತೆ ದೇವರೇ ಮೈಮೇಲೆ ಬಂದಂತೆ ಮನಬಂದಂತೆ ಒದರುವ ಮೈಕಿನಲ್ಲಿ ಧೂಮ್ ಮಚಾಲೇ ಧೂಮ್… ತಲೆ ಕುಣಿಸುತ್ತ ನಿಂತ ತೊಟ್ಟಿಲ ಸಾಲು ತಿರುಗಿಸುವವನನ್ನು ಕಂಡವರಿಲ್ಲ ಹತ್ತಾರು ಸುತ್ತು ಸುತ್ತಿ ಒಮ್ಮೆ ಮೇಲಕ್ಕೆ ಇನ್ನೊಮ್ಮೆ ನೆಲಕ್ಕೆ…. ಪ್ರಪಂಚ ತೋರಿಸಿದ್ದೇ ಸುಳ್ಳೆನ್ನುವಂತೆ ನಿಂತುಹೋದ ತೊಟ್ಟಿಲಿಂದ ಇಳಿದ ಪೋರ ಹುಡುಕಿದ್ದು ಅಪ್ಪನ ಕಿರುಬೆರಳಿಗೆ ಹರಕೆ ತೀರಿಸಿ ಬೆವರೊರೆಸಿಕೊಳ್ಳುವವಳ ಕೈಗಂಟಿದ ಕುಂಕುಮದ ಚಿತ್ರ ಕುತ್ತಿಗೆ ಮೇಲೆ ಕುತ್ತಿಗೆಯಿಂದ ಬೆನ್ನಿಗಿಳಿದ ಕೆಂಪು ಬೆವರಿಗೆ ಬಣ್ಣದ ಘಮ ಸ್ಲೀವ್ ಲೆಸ್ ಟಿ ಶರ್ಟಿನ ಹುಡುಗನ ಕುತ್ತಿಗೆ ಮೇಲೊಂದು ತ್ರಿಶೂಲದ ಟ್ಯಾಟೂ ಘನಗಾಂಭೀರ್ಯದಿಂದ ಹಗ್ಗದ ಮೇಲೆ ನಡೆಯುತ್ತಿದ್ದಾಳೆ ಹುಡುಗಿ ಏಳುಬೀಳಿನ ಭಯವಿಲ್ಲದಂತೆ ಭವದ ಸದ್ದುಗಳಿಗೆ ಕಿವುಡಾದ ಬಾಲೆ ಹಗ್ಗದ ಮೇಲೆಯೇ ಭುವನೇಶ್ವರಿಯಾಗುತ್ತಾಳೆ ದೂರದಿಂದ ಘಂಟೆಯ ಸದ್ದು ಬೆಚ್ಚಗೆ ಎದೆಗಿಳಿಯುತ್ತಿದೆ *******

ಕಾವ್ಯಯಾನ

ಪದಗಳೇ ಹೀಗೆ ಜಿ.ಲೋಕೇಶ್ ಪದಗಳೇ ಹೀಗೆ ಪದಗಳೇ ಹೀಗೆ ಅಲೆಸುತ್ತವೆ ಇಂದು ಬಾ ನಾಳೆ ಬಾ ಎಂದು ಕವಿತೆಗಳನ್ನು ಕಟ್ಟಲು ಎರವಲು ಪಡೆಯಲು ಹೋಗಬೇಕಾಗಿದೆ ನಮ್ಮೂರ ಶೆಟ್ಟಿ ಬಳಿಗೆ ನನ್ನವ್ವ ಸಾಲ ಪಡೆಯಲು ಹೋಗುವಂತೆ ಬಡ್ಡಿ ಬೇಕಾದಷ್ಟು ನೀಡುತ್ತೇನೆಂದರೂ ಏನೋ ಅನುಮಾನ ಪದಗಳಿಲ್ಲಿ ಸಿಗಲೊಲ್ಲವು ಸರಿ ಕಾಯುತ್ತಿದ್ದೇನೆ ಬಾಗಿಲು ತೆರೆಯುವ ಮುನ್ನವೇ ಸರದಿಯಲ್ಲಿ ನಿಂತು ಇವತ್ತು ನಾನೇ ಮೊದಲು!! ********

ಕಾವ್ಯಯಾನ

ಬೆಳಕಿನ ಬೀಜಗಳು.. ಚಂದ್ರಪ್ರಭ ಬೆಳಕಿನ ಬೀಜಗಳು.. ಪುರುಷನೆಂದರು ಪ್ರಕೃತಿಯೆಂದರು ನಾವು ತಲೆದೂಗಿದೆವು ಗಂಡೆಂದರು ಹೆಣ್ಣೆಂದರು ನಾವು ತಲೆದೂಗಿದೆವು ಅವನೆಂದರು ಅವಳೆಂದರು ನಾವು ತಲೆದೂಗಿದೆವು ತುದಿಯೆಂದರು ಮೊದಲೆಂದರು ನಾವು ತಲೆದೂಗಿದೆವು ಅಖಿಲವೆಂದರು ಅಣುವೆಂದರು ನಾವು ತಲೆದೂಗಿದೆವು ಅನಾದಿಯಿಂದ ಇದು ನಡೆದೇ ಇದೆಯಲ್ಲ ಹೊಸತೇನಿದೆ ಇದರಲ್ಲಿ!! ನಾವು ಒಡಲು ತುಂಬಿ ಹೆತ್ತು ಹೊರುತ್ತ ಬಂದಿದ್ದೇವೆ ಅಟ್ಟು ಬೇಯಿಸಿ ಹಸಿವ ನೀಗುತ್ತೇವೆ ಚಳಿ ಗಾಳಿ ಮಳೆ ಬಿಸಿಲಿಗೆ ತತ್ತರಿಸುವಾಗ ಜೀವವನು ವಾತ್ಸಲ್ಯದ ಸೆರಗಲ್ಲಿ ಕಾಪಿಡುತ್ತೇವೆ ಸೂರುಗಳಿಗೆ ಜೀವ ತುಂಬಿ ಲವಲವಿಕೆಯ ಮನೆಯಾಗಿಸುತ್ತೇವೆ ಗೋಡೆಗಳನು ಕೆಡವಿ ಸೇತುವೆ ಕಟ್ಟುತ್ತೇವೆ ಮನೆ ಅಂಗಳ ರಸ್ತೆಗಳನೆಲ್ಲ ಗುಡಿಸಿ ಅಂದದ ರಂಗೋಲಿ ಬಿಡಿಸುತ್ತೇವೆ ಬಟ್ಟೆ ಪಾತ್ರೆ ನೆಲ ಗೋಡೆ ಎಲ್ಲ ತಿಕ್ಕಿ ತೊಳೆದು ಹಸನುಗೊಳಿಸುತ್ತೇವೆ ಮನಮನದೊಳು ದೀಪ ಉರಿಸಿ ಅಲ್ಲೊಂದಿಷ್ಟು ಬೆಳಕು ಇಣುಕುವಂತೆ ಮಾಡುತ್ತೇವೆ ಮುಟ್ಟು ಬಸಿರು ಬಾಣಂತನ ಎಂಬೆಲ್ಲವುಗಳನು ಜೀವ ಕಾರುಣ್ಯದ ಕಣ್ಣಿಂದಲೇ ನಿರುಕಿಸುತ್ತೇವೆ ಅದನೆಲ್ಲ ಅಕ್ಕರೆಯಿಂದ ಒಪ್ಪಿ ಅಪ್ಪಿಕೊಳ್ಳುತ್ತೇವೆ ಕೂಸು ಕುನ್ನಿ ಮುದಿ ಜೀವಗಳು ಆರೋಗ್ಯ ಬಾಧೆಯಿಂದ ಪೀಡಿತರು ಮನೋವ್ಯಾಕುಲತೆಗೆ ಒಳಗಾದವರೆಲ್ಲ ನಮಗೆ ನೊಂದ ಜೀವಗಳಾಗಿ ಕಂಡಿವೆ ಅವರ ಸಾಂತ್ವನ ಸೇವೆಗೆ ನಮ್ಮೊಳಗಿನ ತಾಯಿ ದಾದಿ ಸದಾ ತುದಿಗಾಲಲ್ಲಿ ನಿಂತು ತುಡಿಯುತ್ತಾಳೆ ಪ್ರಕೃತಿ ಎನಿಸಿದ ಕ್ಷಣದಿಂದ ನಮ್ಮನ್ನು ಎರಡನೇ ಸಾಲಿಗೆ ದೂಡಲಾಗಿದೆ ಸಹಸ್ರಮಾನಗಳಿಂದ ನಮ್ಮನ್ನು ಹಿಡದೆಳೆದು ತೊಟ್ಟ ಬಟ್ಟೆ ಸೆಳೆದು ಅಂಗ ಅಂಗವನು ಛಿದ್ರಗೊಳಿಸಿ ಹೃದಯವನ್ನು ಬಟಾ ಬಯಲಿನಲ್ಲಿ ಬಿಕರಿಗಿಡಲಾಗಿದೆ ಆದರೂ ಮಿಡಿಯುವುದ ತೊರೆದಿಲ್ಲ ನಾವು ಹೃದಯ ತನ್ನ ಮಿಡಿತ ಮರೆತರೆ ಜಗ ನಿಶ್ಚಲವಾಗುವುದೆಂಬ ಎಚ್ಚರ ಸದಾ ನಮ್ಮನ್ನು ಪೊರೆದಿದೆ ಮನೆ ಮಕ್ಕಳು ಪಾತ್ರೆ ಪಗಡದೊಂದಿಗೆ ನಮ್ಮನ್ನು ಹಿಂಸೆ ಅತ್ಯಾಚಾರಗಳ ಭೀಬತ್ಸಕ್ಕೆ ನಿರಂತರ ಗುರಿ ಮಾಡಲಾಗಿದೆ ಸೆರಗಿನ ಮರೆಯಲ್ಲಿ ನಾವು ನಮ್ಮ ಕರುಳ ಕುಡಿಗಳನು ಪೊರೆದಿದ್ದೇವೆ ಗುಂಡು ಗೋಲಿ ಬಡಿಗೆ ಕತ್ತಿ ಖಡ್ಗಳಿಗೆ ವಿನಾಕಾರಣ ಜೀವ ತೆತ್ತ ಜತೆಗಾರ ಇಂದು ಬರುವ ನಾಳೆ ಬರುವನೆಂಬ ಹುಸಿ ಭರವಸೆಯನೆ ತುಂಬುತ್ತ ಎಳೆಯ ಜೀವಗಳ ಸಲಹಿದ್ದೇವೆ ಬೆಂಕಿ ಬಯಲು ಕಂಬಿ ಜೈಲುಗಳು ನಮ್ಮ ಕಾರುಣ್ಯದೆದುರು ಮಂಡಿಯೂರಿವೆ ಗಾಢ ಅಗಾಧ ಎಂಬ ಬಣ್ಣನೆಗೆ ಪಾತ್ರವಾಗುವ ಅಂಧಕಾರ ನಮ್ಮೊಂದು ಸೆಳಕಿನೆದುರು ನಿಲ್ಲದೆ ಸೋತು ಕಾಲ್ಕಿತ್ತಿದೆ ಈ ಊರು ಆ ಊರು ಈ ದೇಶ ಆ ದೇಶ ಎನುವ ಭೇದವೇ ಇರದೆ ಬುವಿ ಎಲ್ಲೆಡೆ ಮೆಲ್ಲಗೆ ಕುಡಿಯೊಡೆದು ಬೆಳಕು ಸೂಸಿ ನಿಧಾನವಾಗಿ ಬಿಸಿಲು ಚೆಲ್ಲುತ್ತೇವೆ ಹರಿತ್ತುವಿನಲ್ಲಿ ಜೀವ ಸಂಚಾರವಾಗುತ್ತದೆ ನೋಯಿಸುವ ನೊಂದ ಪೊರೆದ ಈರ್ಷೆಗೆ ನಿಂತ ಜೀವಗಳೆಲ್ಲ ಕೈ ಮುಂದೆ ಮಾಡುವಾಗ ನಾವು ಕೈ ತುತ್ತು ನೀಡುತ್ತೇವೆ.. ಆಗ ಎಲ್ಲ ಇಲ್ಲಗಳ ನಡುವೆ ಜಗತ್ತು ಸುಂದರವಾಗಿ ಕಾಣತೊಡಗುತ್ತದೆ ರೊಟ್ಟಿಯೆದುರು ಬಣ್ಣ ಬಣ್ಣದ ಪತಾಕೆಗಳು ಗುಡಿ ಗುಂಡಾರ ದೈವಗಳೆಲ್ಲ ಸೋತು ನೆಲ ಕಚ್ಚುತ್ತವೆ ಸಂದಿಗೊಂದಿಗಳಲ್ಲಿ ಬೆಳಕಿನ ಎಳೆ ಎಳೆ ಸೂಸಿ ಒಂದಿಷ್ಟು ಕರುಳ ಬಳ್ಳಿಯ ಬೇರಿಗೂ ತಾಕುವಾಗ ಬುದ್ಧ ಬಸವ ಬಾಬಾ.. ಕನಕ ಕಬೀರ ಏಸು ಅಕ್ಕ ಮೀರಾ ಲಲ್ಲಾ.. ಕಪ್ಪು ಕೆಂಪು ಹಸಿರು ಎಲ್ಲ ಒಂದರೋಳು ಇನ್ನೊಂದು ಬೆರೆತು ಬೆಳ್ಳನೊಂದು ಬೆಳಕು ಹೊಮ್ಮುತ್ತದೆ…. ************

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಗಜ಼ಲ್ ನಿನ್ನ ಕಣ್ಣಲ್ಲಿ ಕಂಡ ನೆರಳುಗಳ ಬರೆಯಲಾರೆ ಕೆನ್ನೆಯಲಿ ಮಡುವಾದ ಬಣ್ಣಗಳ ಬರೆಯಲಾರೆ ಕಡಲೇಕೆ ಕುದಿಕುದಿದು ಮರಳಿದೆ ಹೀಗೆ ಎದೆಯಾಳದ ಉಮ್ಮಳಗಳ ಬರೆಯಲಾರೆ ನಿನ್ನನ್ನು ಒಮ್ಮೆ ಸೋಕಲು ಎಂಥ ತಪನೆಯಿತ್ತು ಚಾಚಿ ಚಾಚಿ ಮರಗಟ್ಟಿದ ಬೆರಳುಗಳ ಬರೆಯಲಾರೆ ತೋಳಲ್ಲಿ ತಲೆಯಿಟ್ಟಾಗ ಎದ್ದ ಕಂಪನವೆಷ್ಟು ಬದುಕಿನ ಬದುಕಾದ ಚಣಗಳ ಬರೆಯಲಾರೆ ಬರಿಯ ಮಾತುಗಳಿಗೆ ದಕ್ಕಿದ್ದು ಏನು ‘ಜಂಗಮ’ ನುಡಿಯುಂಬರದಲ್ಲೆ ನಿಂತ ಭಾವಗಳ ಬರೆಯಲಾರೆ **********

ಕಾವ್ಯಯಾನ

ದಂಗೆ. ಜ್ಯೋತಿ ಡಿ.ಬೊಮ್ಮಾ. ಶಾಂತಿದೂತ ಪಾರಿವಾಳವೇ ಇನಿತು ಹೇಳಿ ಬಾ ಅವರಿಗೆ ದ್ವೇಷ ತುಂಬಿದ ಎದೆಗೂಡೊಳಗೆ ಕೊಂಚ ಪ್ರೀತಿಯ ಸಿಂಚನ ಮೂಡಿಸಲು.. ಪ್ರೀತಿಯ ಮೇಘದೂತನೆ ಸ್ವಲ್ಪ ಅರುಹಿ ಬಿಡು ಅವರನ್ನು ಸೇಡಿನ ಜ್ವಾಲೆಯಿಂದ ಒಬ್ಬರನ್ನೊಬ್ಬರು ದಹಿಸಿಕೊಳ್ಳದಿರೆಂದು.. ಎಲ್ಲೆಡೆ ಸಮನಾಗಿ ಹಬ್ಬಿದ ಬೆಳದಿಂಗಳೆ ತಿಳಿಸಿ ಹೇಳು ಅವರಿಗೆ ಹಿಂದಿನಂತೆ ಮುಂದೆಯೂ ಇದು ರಾಮ ರಹೀಮರ ನಾಡೇ ಎಂದು.. ಎಲ್ಲರಿಗೂ ಬೆಳಕನ್ನು ಹಂಚುವ ಬಿಸಿಲೆ ಅರ್ಥ ಮಾಡಿಸು ಅವರಿಗೆ ಅಮಾಯಕರನ್ನೂ ಪ್ರಚೋದಿಸಿ ದಂಗೆ ಎಬ್ಬಿಸಿ ಶಾಂತಿ ಕದಡುವ ಆಗಂತುಕರಿದ್ದಾರೆಂದು.. ನಾಲ್ಕು ದಿಕ್ಕಿಗೂ ಬೀಸುವ ಗಾಳಿಯೆ ದೃಢ ಪಡಿಸು ಅವರನ್ನೂ ಇಲ್ಲಿ ಯಾರು ಯಾರ ಹಕ್ಕು ಕಸಿಯುತ್ತಿಲ್ಲವೆಂದೂ ದಾಖಲೆ ಹೊಂದುವದರಿಂದ ನಮ್ಮ ಹಕ್ಕುಗಳು ಇನ್ನಷ್ಟೂ ಗಟ್ಟಿಗೊಳ್ಳುತ್ತವೆಂದು.. ಎಲ್ಲರ ತೃಷೆ ತೀರಿಸುವ ಜಲದೇವಿಯೇ ಶುಧ್ಧ ಗೊಳಿಸು ಮನಕ್ಕಂಟಿದ ಮಲೀನವನ್ನೂ ಭಾರತದಲ್ಲಿರುವ ನಾವೆಲ್ಲರೂ ಭಾರತೀಯರಾಗಿರೋಣ ಎಂದೆಂದಿಗೂ. ************

ಕಾವ್ಯಯಾನ

ಗಝಲ್ ಸುಜಾತಾ ರವೀಶ್ ಆಸೆಯ ತೇರನೇರು ಮರೆತು ಹಳತನು ಹೊಸತು ನಿರೀಕ್ಷೆಯಲಿ ಗೆಳತಿ  ಭಾಷೆಯ ರಥದಲ್ಲಿ ಕಲೆತು ಬಾಳಪಥ ನಿರತ ಪರೀಕ್ಷೆಯಲ್ಲಿ ಗೆಳತಿ  ಒಲವು ಬಂದಿರಲು ದಿನವು ಹೃದಯದಿ ನಿನ್ನದೇ ಆರಾಧನೆ ಏತಕೆ?  ಬಲವು ತಂದಿರಲು ಮನದಿ ಉಪಾಸನೆ ಪಾವನ ಪ್ರತೀಕ್ಷೆಯಲಿ ಗೆಳತಿ ಸಂಗಾತಿ ಬರೆದಿರಲು ಮುನ್ನುಡಿ ಬದುಕಿನ ಪ್ರಣಯ ಕಾದಂಬರಿಯಲಿ  ಸಂಪ್ರೀತಿ ಮೆರೆದಿರಲು ಕನ್ನಡಿ ಬಾಳಿನ ಬರಹ ಸಮೀಕ್ಷೆಯಲಿ ಗೆಳತಿ   ನಿನ್ನಯ ಆಗಮನದಿ ಮನಸಿದು ಮುಗಿಲನು ನೋಡಿದ ನವಿಲಿನಂತೆ ನನ್ನ ಆಂತರ್ಯದ ಕನಸಿದು ನಲಿವಿನ ಮೋಡಿಯ ಅಪೇಕ್ಷೆಯಲಿ ಗೆಳತಿ ಬೆಸುಗೆ ತಂತಿಗಳು ಜೋಡಿಸಿ ಭರವಸೆ ನೇದಿಹ ಅನುಬಂಧ ವಿದು  ಒಸಗೆ ವಿನಂತಿಗಳು ಸುಜಿಯ ವಿಶ್ವಾಸ  ಕೋರುವ ಅಕಾಂಕ್ಷೆಯಲಿ ಗೆಳತಿ *******

ಕಾವ್ಯಯಾನ

ಸಲುಗೆ ಮೀರಿ ಬಂದಾಕಿ ರೇಖಾ ವಿ.ಕಂಪ್ಲಿ ಸಲುಗೆ ಮೀರಿ ಬಂದಾಕಿ ಮಲ್ಲಿಗೆ ಮುಡಿದು ನನ್ನ ಮೆಲ್ಲನೆ ತಬ್ಬವಾಕಿ ಸಲುಗೆ ಮೀರಿ ಬಂದಾಕಿ ನನ್ನೊಲವ ಬಯಸಿದಾಕಿ…….. ಮನಸ್ಸೆಂಬ ಗುಡಿಯಲಿ ನನ್ನ ಪೂಜಿಸಿವಾಕಿ ಹಗಲಿರುಳು ನೋಡದೆ ದುಡಿಯುವಾಕಿ ಜೀವದ ಹಾದಿಬೆಳ್ಚುಕ್ಕಿ ಮೂಡಿಸಿದಾಕಿ ಸಲುಗೆ ಮೀರಿ ಬಂದಾಕಿ ನನ್ನೊಲವ ಬಯಸಿದಾಕಿ……… ತನ್ನವರ ಮರೆತು ನನ್ನ ನಂಬಿದಾಕಿ ನನ್ನ ಹುಚ್ಚಿಹಾಂಗ ಪ್ರೀತಿಸುವಾಕಿ ಗುಡಿ ಗೋಪುರಗಳ ಸುತ್ತಿ ನನಗಾಗಿ ಪ್ರಾಥಿ೯ಸುವಾಕಿ ಸಲುಗೆ ಮೀರಿ ಬಂದಾಕಿ ನನ್ನೊಲವ ಬಯಸಿದಾಕಿ……… ಹಾಗಾಗ ಗುದ್ದಾಡಿ ನನ್ನ ಕ್ಷಮಿಸುವಾಕಿ ನನಗಿಂತ ಹೆಚ್ಚಾಗಿ ಚಿಂತಿಸುವಾಕಿ ಹಾಗಾಗ ಬಿಕ್ಕಿಬಿಕ್ಕಿ ಅಳುವಾಕಿ ಸಲುಗೆ ಮೀರಿ ಬಂದಾಕಿ ನನ್ನೊಲವ ಬಯಸಿದಾಕಿ………. ***************************

ಅನುವಾದ ಸಂಗಾತಿ

ಪಾತರಗಿತ್ತಿಯ ನಗು ಮೂಲ: ಕ್ಯಾಥರೀನ್ ಮ್ಯಾನ್ಸ್ ಫೀಲ್ಡ್ ಕನ್ನಡಕ್ಕೆ: ಕಮಲಾಕರ ಕಡವೆ ನಮ್ಮ ಗಂಜಿಯ ಬಟ್ಟಲಿನ ಮಧ್ಯಒಂದು ನೀಲಿ ಪಾತರಗಿತ್ತಿಯ ಚಿತ್ರ;ಪ್ರತಿ ಮುಂಜಾನೆ ಅದರ ತಲುಪಿದ ಮೊದಲಿಗರಾಗಲು ನಮ್ಮ ಪ್ರಯತ್ನ.ಅಜ್ಜಿ ಹೇಳುತ್ತಿದ್ದಳು: “ಪಾಪ, ಆ ಪಾತರಗಿತ್ತಿಯ ತಿಂದುಬಿಡಬೇಡಿ!”ಹಾಗೆಂದಾಗ ನಾವು ನಗುತ್ತಿದ್ದೆವು.ಅಜ್ಜಿ ಯಾವಾಗಲೂ ಹಾಗೆ ಹೇಳುತ್ತಿದ್ದಳು, ಪ್ರತಿಸಲ ನಮಗೆ ನಗು.ಅದು ಅಷ್ಟು ಅಪ್ಯಾಯಮಾನ ಜೋಕಾಗಿತ್ತು.ನನಗೆ ಖಾತ್ರಿ ಇತ್ತು, ಒಂದು ಮುಂಜಾನೆಆ ಪಾತರಗಿತ್ತಿ ವಿಶ್ವದ ಅತ್ಯಂತ ಹಗುರ ನಸು ನಗುವ ನಗುತ್ತ,ನಮ್ಮ ಬಟ್ಟಲಿನಿಂದ ಎದ್ದು ಹಾರಿ ಹೋಗುವುದೆಂದು,ಹೋಗಿ ಅಜ್ಜಿಯ ಮಡಿಲ ಮೇಲೆ ಕೂರುವದೆಂದು. ******* “Butterfly Laughter” In the middle of our porridge platesThere was a blue butterfly paintedAnd each morning we tried who should reach thebutterfly first.Then the Grandmother said: “Do not eat the poorbutterfly.”That made us laugh.Always she said it and always it started us laughing.It seemed such a sweet little joke.I was certain that one fine morningThe butterfly would fly out of our plates,Laughing the teeniest laugh in the world,And perch on the Grandmother’s lap.

Back To Top