ಕಾವ್ಯಯಾನ

ಕಾವ್ಯಯಾನ

ಭ್ರೂಣಹತ್ಯೆ ಶಾಲಿನಿ ಆರ್. ಕನಸುಗಳು ಹೌ ಹಾರಿವೆ ನಾ ಬರುವ ಮೊದಲೆ ಅಮ್ಮಾ , ಬಾಯಿಯಿರದ ನಾ’ ನಿರಪರಾಧಿನೆ ಕಣೆ ! ಮನದ ಭಾವನೆಗಳು ಒಡಲಲಿಳಿದು ಒಡಮೂಡಿದಾಗ ಹೊಡೆತಗಳ ಸವಿ‌ ತಿನಿಸು, ಚುಚ್ಚು ಮಾತುಗಳಾರತಿಗೆ, ಭಾವಗಳ ಬಸಿರಲೆ, ನನ್ನಿರುವು ಕಮರಿ ಕುಸಿದು ಹೋಯಿತು, ಕಥೆ ಮುಗಿದ ನನ್ನ ವ್ಯಥೆಗೆ ಅಂಕಣ ಪರದೆ ಜಾರಿತು, ರಕ್ಷಿಸುವ ಕೈಗಳಿಗೆ ಕೊಳ ತೊಡಿಸಿದ ರಾಕ್ಷಸರು, ನೋಡುವ ಹೃದಯಗಳು ಕೆಲವು ಚೀತ್ಕರಿಸಲರಿಯದ ಮನಗಳು ಹಲವು, ಬಾಯಿ‌ ಇರುವ ಮೂಕರನೇಕರ ನಡುವೆ ,ನತದೃಷ್ಟೆ ನಾನಮ್ಮ! […]

ಕಾವ್ಯಯಾನ

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ಎಷ್ಟೊಂದು ಕನಸುಗಳು ನಿನ್ನ ತಲೆಯಲಿ ಕುಂತಿವೆ ಅಮ್ಮಾ ನಾಳೆ ಬಿದ್ದು ಹೋಗುವ ಸೂರಿನೊಳಗೆ ನಿಂತಿವೆ ಅಮ್ಮಾ ಹಕ್ಕಳೆ ಉದುರಿದ ಗೋಡೆ ಇಂದೋ ನಾಳೆ ಬಿಳಲಿದೆ ಎಲ್ಲ ಚಿಂತೆಗಳನ್ನು ಗಂಟು ಕಟ್ಟಿ ಕುಳಿತಿರುವೆ ಅಮ್ಮಾ ಗೆದ್ದಿಲು ಹಿಡಿದ ಬಾಗಿಲು ಇಂದೋ ಎಂದೋ ಕಿತ್ತು ಹೋಗಲಿದೆ ನಿನ್ನೊಳಗೆ ಎಷ್ಟು ಕನಸುಗಳ ತುಂಬಿ ಕೊಂಡಿರುವೆ ಅಮ್ಮಾ ಇಂದು ನಾಳೆಗಳ ಹಂಗಿಗಂಜದೆ ಗಂಜಿಯ ಚಿಂತೆ ಬಿಟ್ಟು ಹೋಗಿದೆ ಪುಸ್ತಕದೊಳು ನೀ ಮುಳುಗಿ ಈಜಾಡುತ್ತ ಸಾಗುತ್ತಿರುವೆ ಅಮ್ಮಾ ಬಡತನ ಸಿರಿತನದ […]

ಕಾವ್ಯಯಾನ

ನನ್ನೊಳಗಿನ ನೀನು ದೀಪಾ ಗೋನಾಳ ಏನೋ ಹೇಳಬೇಕಿತ್ತು ಹೇಳುವುದು ಬೆಟ್ಟದಷ್ಟಿತ್ತು ಸಂತಸದ ಮೂಟೆ‌ಹೊತ್ತು ನಿನ್ನ ಬಾಗಿಲು ತಟ್ಟಿದೆ ನೂಕಿಕೊಂಡು ರಭಸವಾಗಿ ಒಳನುಗ್ಗಿದೆ, ಅವಸರ ಸಲ್ಲದು ನಿಧಾನ ಎಂದವನ ಧ್ವನಿಯಲ್ಲಿ ಕೋಪ ಮಿಶ್ರಿತ ಪ್ರೀತಿಯಿತ್ತು ಇನ್ನೇನು ಎಲ್ಲ ಹೇಳಿ ಗೆಲುವ ಹಂಚಿ ತೇಗಬೇಕು ಮಾತಿನ ನಡುವಿನ ಅಂತರದಲ್ಲಿ ಅವಾಂತರವೆದ್ದಿತು ಹೋಗು ಇನ್ನೊಮ್ಮೆ ಹುಡುಕಿ ತಾ ಎಂದಿ, ಬಂದೆ, ತಿರುವಿನಲ್ಲಿ ನಿಂತು ಬಿಕ್ಕಳಿಸಿ ತಂದ ಮೂಟೆಯ ತಲೆಯಲ್ಲೆ ಉಳಿಸಿ ಹೊರಟೆ, ಎಲ್ಲಿಗೆ!? ನನ್ನ ಜೀವ ತಲ್ಲಣಿಸುತ್ತಿತ್ತು ಹಿಡಿ ಮಾತು ಹುಡಿಯಾಗಿ […]

ಕಾವ್ಯಯಾನ

ನೀನೆಂದರೆ ಮೋಹನ್ ಗೌಡ ಹೆಗ್ರೆ ನೀನೆಂದರೆ ಬರಿ ಬೆಳಕಲ್ಲ ಕುರುಡು ಕತ್ತಲೆಯ ಒಳಗೆ ಮುಳ್ಳು ಚುಚ್ಚಿದ ಕಾಲಿನ ನೋವ ಗುರುತಿಸುವ ಮಹಾಮಾತೆ ಜಗದ ತದ್ವಿರುದ್ಧಗಳ ಸಮದೂಗಿಸಿ, ಅಳುವ ಕಣ್ಣೀರಿಗೆ ಬಾಡಿ ಹೋದ ಮೊಲೆಯ ತೊಟ್ಟಿಂದ ಅಮೃತವ ಉಣಬಡಿಸುವ ಕರುಣಾಳು…. ನೀನೆಂದರೆ ಬರಿ ಕಷ್ಟಜೀವಿಯಲ್ಲ ಕಷ್ಟಗಳನೆ ಅಂಜಿಸುವ ಮಹಾತಾಯಿ ಬರೆಯದೇ ಇರುವ ಖಾಲಿ ಪುಸ್ತಕದೊಳಗೆ ನಾನೊಬ್ಬನೇ ಓದಬಹುದಾದ ಕೋಟಿ ಕಥೆ ನಿನ್ನ ಮುಖ ಯಾವ ಚಟಕ್ಕೂ ಹಾತೊರೆಸದ ದಿಗ್ಬಂಧನದ ಮಹಾ ಮಂಟಪ ಸಹಸ್ರ ಸಂಕಷ್ಟಗಳ ಹಡೆದ ನಿನ್ನ ಪಾದದಲ್ಲೆ […]

ಕಾವ್ಯಯಾನ

ಜೀವ ಕನಿಷ್ಠವಲ್ಲ ಮದ್ದೂರು ಮಧುಸೂದನ ಕಾಣದ ಜೀವಿಯ ಕರಾಮತ್ತಿಗೆ ದೀಪದ ಹುಳುಗಳಾಂತದ ಭಾರತ ವಿಲವಿಲದ ನಡುವೆ ಸಾವಿನ ದಳ್ಳುರಿ ಧಗ ಧಗಿಸಿ ಆವರಿಸುತ್ತಿದ್ದರೂ ಧರ್ಮದ ಅಪೀಮು ತಿಂದವರ ದಿಗಿ ದಿಗಿ ನೃತ್ಯ ನಿಂತಿಲ್ಲ.. ಜಾತಿ ಮತ ಧರ್ಮಗಳ ಸ್ಪೃಶ್ಯ ಅಸ್ಪೃಶ್ಯಗಳ ಸೋಂಕಿತರ ನಡುವೆ ಅವರವರ ಧರ್ಮದ ಉಳುವಿಗೆ ವಿಧ ವಿಧ ಲೆಕ್ಕಚಾರದ ಅಸಹ್ಯವೂ ಸಹ್ಯ ಧರ್ಮದ ಕಿನ್ನರಿ ಮುಂದೆ ಸಾವು ತುಟ್ಟಿಯಲ್ಲ ಬಿಡಿ! ನನ್ನ ಒಂದು ಕಣ್ಣು ಕಿತ್ತಾದರೂ ವಿರೋಧಿಗಳ ಎರೆಡೆರಡು ಕಣ್ಣು ಕೀಳುವ ಕುಹಕ ಕೇಕೆ […]

ಕಾವ್ಯಯಾನ

ಪ್ರಿಯತಮೆ ವೀಣಾ ರಮೇಶ್ ಈ ಧರೆಯ ಒಡಲು ಧರಿಸಿದೆ, ಸ್ವರ್ಗದ ಹಸಿರು ತಳಿರು,ತಳೆದಿದೆ ಸೊಬಗಿನ ಸಿರಿಯ ಸೌಂದರ್ಯ ಮೇಳೈಸಿದೆ ಮೌನವಿಲ್ಲಿ ಪ್ರೀತಿಸಿದೆ ಸ್ರಷ್ಟಿಯ ಸಿರಿಯಲಿ ರಸ ವೈಭೋಗ ತೂಗಿದೆ ಮತ್ತೆ ಋತುರಾಜ ಬಂದ ಚಿಗುರು ತಂದ ಚಲುವ ನಗೆಯ  ಅರಳೋ ಮುಗುಳು ಈ ಇಳೆಯ ಹಸಿರಲಿ ನಿನ್ನ ನಗುವಿನ ಸವಾರಿ ಕೇಳೇ ನನ್ನ ವೈಯಾರಿ ಈ ಕಣ್ಣ ನೋಟದ ಬಿಗಿ ಸರಳು,ಸೆರೆಯಾದೆ ನಾ ನಿನಗೆ ಪ್ರತಿಬಿಂಬದ ಪ್ರತಿಕ್ಷಣದ ಪ್ರತಿ ನೆರಳು ಸೆಳೆವ ಕಂಗಳ ಅಂಚಿಗೆ ಮುತ್ತಿಡುವ ಈ […]

ಅಂತಿಮ ನಮನ

ಟಿ.ಎಲ್.ರಾಮಸ್ವಾಮಿ ಅಪರೂಪದ ಕ್ರಿಯಾಶೀಲ, ಸೃಜನಶೀಲ ಪತ್ರಿಕಾ ಛಾಯಾಗ್ರಾಹಕ ಟಿ.ಎಲ್‌.ರಾಮಸ್ವಾಮಿಯವರು..! ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂಬ ಮಾತಿದೆ. ಅದರಂತೆ ಕ್ರಿಯಾಶೀಲ ಮತ್ತು ಸೃಜನಶೀಲ ಪತ್ರಿಕಾ ಛಾಯಾಚಿತ್ರ ಗ್ರಾಹಕ ಟಿ.ಎಲ್. ರಾಮಸ್ವಾಮಿಯವರು ತೀರಿದ್ದಾರೆ. ಅವರು ಆರು ದಶಕಗಳಿಗೂ ಹೆಚ್ಚು ಕಾಲದಿಂದ ಪತ್ರಿಕಾ ಛಾಯಾಗ್ರಾಹಕರಾಗಿ ಸಾವಿರಾರು ಚಿತ್ರಗಳ ಮೂಲಕ ಕರ್ನಾಟಕದ ಆಗುಹೋಗುಗಳನ್ನು ಸೆರೆಹಿಡಿದವರು. ಅವರು ಪತ್ರಿಕಾ ಛಾಯಾಚಿತ್ರ ಕಲೆಯಲ್ಲಿ ವಿಶಿಷ್ಟ ಪ್ರತಿಭೆಯನ್ನೂ ತೋರಿ ದೇಶ ವಿದೇಶಗಳ ಪತ್ರಿಕೆಗಳ ಗೌರವಾದರ ಪಡೆದವರು… 1950 ರಿಂದ 1985 ರವರೆಗೆ ಡೆಕ್ಕನ್ ಹೆರಾಲ್ಡ್, […]

ಪ್ರಸ್ತುತ

ಪರೀಕ್ಷೆಗಳತ್ತ ಚಿತ್ತ ವನಜಾ ಸುರೇಶ್ ಪರೀಕ್ಷೆಗೆ  ದಿನಗಣನೆ  ಆರಂಭವಾಗಿದೆ  . ಕೆಲವು  ಮಕ್ಕಳಿಗೆ.  ಪರೀಕ್ಷೆ  ಮುಗಿದರೆ ಸಾಕೆಂಬ ಮನೋಭಾವವು ಇದೆ . ಕೆಲವರಲ್ಲಿ ಭಯವೂ ಇದೆ. 2019 ಜೂನ್ ನಿಂದು ಪ್ರಾರಂಬಿದ  ಪರೀಕ್ಷಾ ತಯಾರಿ  ಅಂತಿಮ ಹಂತಕ್ಕೆ ಬಂದು ನಿಂತಿದೆ.   ಡಿಸೆಂಬರ್ ಗೆ ಬೋದಿಸಬೇಕಾದ ಪಠ್ಯಭಾಗವನ್ನು  ಮುಗಿಸಿ  ಜನವರಿಯಿಂದ  ಪುನರಾವರ್ತನೆ ಮಾಡಲಾಗಿದೆ  ಫೆಬ್ರವರಿಯಿಂದ  ಸಾಕಷ್ಟು ಸರಣಿ ಪರೀಕ್ಷೆಗಳನ್ನು ಮಾಡಿ  ಬರವಣಿಗೆ ದೋಷವನ್ನು ಸರಿಪಡಿಸಿಕೊಳಲು ತಿಳುವಳಿಕೆ ಹೇಳಲಾಗಿದೆ ಕ್ಲಿಷ್ಟಕರಕರವೆನಿಸಿದ  ಪಠ್ಯಭಾಗವನ್ನು  ಪುನಃ ಪುನಃ ಬೋಧನೆ ಮಾಡಿ ಪರೀಕ್ಷೆ […]

ಕಾವ್ಯಯಾನ

ಪ್ರೀತಿಸಲಾಗುವುದಿಲ್ಲವಲ್ಲ ದೀಪಾ ಗೋನಾಳ.. ದ್ವೇಷಿಸುವಷ್ಟು ಸುಲಭವಾಗಿ ಪ್ರೀತಿಸಲಾಗುವುದಿಲ್ಲವಲ್ಲ ಎನೆಲ್ಲ ನೋವು ಹತಾಷೆ, ಸಂಕಟ ಅನುಭವಿಸಿಯು ಅನದೆ ಉಳಿಯಬೇಕಲ್ಲ ಹಾವು ತುಳಿದರೂ ಹೂವು ತುಳಿದದ್ದೆಂದು ಸಂಭಾಳಿಸಬೇಕಲ್ಲ ಕನಸು ಕನವರಿಕೆ ಬೆಸುಗೆ ಹಾಕಿ ಚೆಂದದ ಮಾತ ಹೇಳಿದಾಗಲೂ ಮುನಿಸು ಮಾಡುವ ಗೆಳೆಯನ ಉಳಿಸಿಕೊಳಬೇಕಲ್ಲ ಕಾಡಿಗೆಯಿಟ್ಟ ಕಣ್ಕೆಳಗಿನ ಕಪ್ಪು ವರ್ತುಲಕೆ ಬೆಳ್ಳಂಬೆಳ್ಳಗಿನ ಪೌಡರು ಹಾಕಿ ನಿಂದು, ಒಂದೂದ್ದದ ನಿದ್ದೆ ಮಾಡಿದೆ ಕನಸಿನ ತುಂಬ ನೀನೆ ಎಂದಂದು ಅವನ ಕನಸಿನ ಹೆಣಿಕೆಗೆ ದಾರವಾಗಬೇಕಲ್ಲ ಭುಜ ಹಿಡಿದು ಅಲುಗಿಸಿದಾಗೆಲ್ಲ ಕಳೆದು ಹೋದ ಚಿಂತೆಜಾತ್ರೆಯ ಮುಚ್ಚಿಟ್ಟು […]

ಕಾವ್ಯಯಾನ

ತಾಳು ಮನವೆ. ಚೈತ್ರಾ ಶಿವಯೋಗಿಮಠ ತಲ್ಲಣಿಸದಿರು ಮನವೆ! ದಟ್ಟೈಸುವ ಕಾರ್ಮೋಡಗಳ ಸುರಿದು ಹಗುರಾಗಿ ಮತ್ತೆ ಕಂಗೊಳಿಸದೆ ನೀಲ ನಭವು??? ತಲ್ಲಣಿಸದಿರು ಮನವೆ! ಕಗ್ಗತ್ತಲ ಒಡಲ ಹರಿದು ಪ್ರಖರವಾಗಿ ಇರುಳ ಗರ್ಭದಿ ಜನಿಸಿ ಬರುವನಲ್ಲವೆ ಇನನು?? ತಲ್ಲಣಿಸದಿರು ಮನವೆ! ಬೊಬ್ಬೆಯಿಟ್ಟು ಚಂಡಿಹಿಡಿದ ಕಂದನ ಹಾಲುಣಿಸಿ ಸಂತೈಸಲು ಬರಲಾರಳೇನು ಅಬ್ಬೆಯು?? ತಲ್ಲಣಿಸದಿರು ಮನವೆ! ಶೀತ ಹೇಮಂತನ ಕೊರೆತವ ಕರಗಿಸಿ ಬಿಸುಪ ಮುದ ನೀಡಲು ಬರುವಳಲವೆ ಗ್ರೀಷ್ಮಳು? ತಲ್ಲಣಿಸದಿರು ಮನವೆ! ಕಾಲಚಕ್ರವದು ನಿಲದೆ ತಿರುಗುವುದು ಅಹಿತವು ಅಳಿದು ಹಿತವು ನಿನಗಾಗಿ ಬಾರದೆ?? […]

Back To Top