ಕಾವ್ಯಯಾನ

ಕಾವ್ಯಯಾನ

ತವರಿನ ಮುತ್ತು ರೇಮಾಸಂ ಡಾ.ರೇಣುಕಾತಾಯಿ.ಸಂತಬಾ ಮರೀಯಲಿ ಹ್ಯಾಂಗ ಮರೀ ಅಂದರ ಅವ್ವನ ಅರಮನೆಯ ಅಂತಃಪುರವ ತವರಿನ ಗಂಜಿಯು ಅಮೃತದ ಕಲಶವು ಅಕ್ಕರೆಯು ಅಚ್ಚಿನ ಬೆಲ್ಲವ ಮೆಲ್ಲದಂಗ// ತವರಿನ ಉಡುಗೊರೆ ಆಗೇನಿ ನಾನು ಅತ್ತೆಯ ಮನೆಗೆ ಮುತ್ತಾಗಿ ಬಂದೇನಿ ಕಟ್ಟ್ಯಾರ ಕಂಕಣವ ಕೂಡು ಬಾಳ್ವೆಗೆ ಹಾದಿಗೆ ಹರವ್ಯಾರ ಹವಳದ ಹೂವ// ತಾಯಂಗ ತಡದೇನ ಕಂಟಕದ ಕದನವ ಅಪ್ಪನಂಗ ತಪ್ಪಿಲ್ಲದ ಹೆಜ್ಜೆನ ಇಟ್ಟೇನಿ ನುಡಿದಂಗ ನೇರ ನಡೆ ನಡದೇನಿ ಮಾತನ್ಯಾಗ ಮಂದ್ಯಾಗೆಲ್ಲ ಹೌದಾಗೇನಿ// ಬಂಗಾರದಂತ ನನ್ನ ಅಣ್ಣರ ತಮ್ಮರ ಬಳುವಳಿಯಾಗಿ […]

ಕಾವ್ಯಯಾನ

ಗಝಲ್ ಎ.ಹೇಮಗಂಗಾ ಅವನಿಗಾಗಿ ಕಾದ ಕಣ್ಣ ನೋಟ ಮಬ್ಬಾಗಿದೆ ಸಖಿ ಅವನಿಲ್ಲದೇ ಯಾವ ಹಬ್ಬವೂ ಬೇಡವಾಗಿದೆ ಸಖಿ ವಚನ ಮೀರದವ ಇಂದು ವಚನ ಮೀರಿದನೇಕೋ ಮಿಲನವಿಲ್ಲದ ಯಮುನೆ ತಟ ಭಣಗುಡುತಿದೆ ಸಖಿ ಒಮ್ಮೆಗೇ ಬಂದು ಪರಿಪರಿಯಾಗಿ ಕಾಡುವ ಅವನು ರಾಸಲೀಲೆಯಿಲ್ಲದ ಬಾಳು ನೀರಸಗೊಂಡಿದೆ ಸಖಿ ಸುತ್ತಲಿನ ಗಾಳಿಯೂ ಅವನ ಬರುವಿಕೆ ಸೂಚಿಸುತ್ತಿಲ್ಲ ಸೊಲ್ಲಿಲ್ಲದೇ ನಗುವಿಲ್ಲದೇ ಮನ ಮಸಣವಾಗಿದೆ ಸಖಿ ತೊರೆದು ಹೋದ ಶ್ಯಾಮ ಮತ್ತೆ ಬರುವನೇ ಹೇಳು ಅವನಿರದೇ ಸಾವೇ ಹಿತವಾಗಿ ಹತ್ತಿರ ಸೆಳೆದಿದೆ ಸಖಿ ********

ಕಾವ್ಯಯಾನ

ಅಮುಕ್ತ ಅಮೃತಮತಿ ಲಕ್ಷ್ಮೀ ಪಾಟೀಲ ಅಂಗ ಸೌಷ್ಠವದ ಬಾಹ್ಯ ಸೌಂದರ್ಯ ರಾಜ ವರ್ಚಸ್ಸು ವಜ್ರ ವೈಡೂರ್ಯ ಭೋಗ ಭಾಗ್ಯಗಳ ನಿವಾಳಿಸಿ ಅಂತರಂಗ ಬೇಟಕೆ ಮನವ ಬೀಳಿಸಿ ಬಿಗಿ ಮೌನ ಮುರಿದು ಮಾತಾಗಲು ನಡೆದೆ ಪಂಜರದ ಅರಗಿಳಿಗೆ ಮಾತು ಕಲಿಸಿದ್ದೂ ಮರೆತು, ಕಾಡ ಕೋಗಿಲೆ ಕರೆಗೆ ವಸಂತ ಕೂಟಕೆ ನಡೆದೆ ಬೇಟ ಕೂಟಕೆ ಮನವ ಮಿಡಿಸಿ ಶರತ್ತುಗಳಿಲ್ಲದೆ ಪ್ರೀತಿ ಕೊಡಲು ಮೈ ಬೆವರ ಬಸಿದು ಸೋನೆ ಸುಯ್ಯಲು ಬಿಡುವಿಲ್ಲದೆ ನಡೆದೆ, ಭಾವ ಕೂಟಕೆನಡೆದೆ,,, ಅಗ್ನಿ ದಿವ್ಯದ ದಾರಿಗೆ ಅಗ್ನಿ […]

ಕವಿತೆ ಕಾರ್ನರ್

ಸರಳುಗಳು ಸರಳುಗಳು ನನ್ನತ್ತ ತೂರಿಬಂದ ಕಲ್ಲುಗಳನ್ನುಹೂ ಮಾಡಿಕೊಳ್ಳುವ ಕಲೆ ಸಿದ್ದಿಸಿರಲಿಲ್ಲ ನನಗೆ ಹಲವು ಹಣೆಗೆ ಬಡಿದವು ಕೆಲವು ಎದೆಗೆ ಬಡಿದವುಒಟ್ಟಿನಲ್ಲಿ ರಕ್ತಸಿಕ್ತವಾಯಿತು ಮೈ ತಂದು ಕೂಡಿ ಹಾಕಿದ ದವಾಖಾನೆಯೇಕಾರಾಗೃಹವಾಗಿಬಿಸಿಲಿಗೆ ಸರಳುಗಳು ಹೆದರಿಸುವ ಕಪ್ಪು ನೆರಳುಗಳಾಗಿನನ್ನ ಹಗಲುಗಳು ನರಕಸದೃಶವಾದವು ಇರುಳುಗಳು ಬಂದವೊ ಹೋದವೊ ಅರಿವಾಗದೆಸುಮ್ಮನೇ ಕೂರುತ್ತೇನೆ ದ್ಯಾನಸ್ಥನಾಗಿ ಪದ್ಮಾಸನ ಹಾಕಿ ಯಾವತ್ತಾದರೂ ಒಂದು ದಿನ ಸರಳುಗಳು ಇಲ್ಲವಾಗಬಹುದುಸೆರೆಮನೆಯಂತಹ ದವಾಖಾನೆ ಬಯಲೂ ಅಗಬಹುದು ಅಂತಹದೊಂದು ದಿನನಾನು ಮತ್ತೆ ಬರುತ್ತೆನೆ ನಿನ್ನ ಕಾಣಲುಹಳೆಯ ಕನಸುಗಳನು ನನಸಾಗಿಸಲುಕಾಯುವೆಯಾದರೆ ಅಲ್ಲಿಯವರೆಗೂಸಹಿಸಬಲ್ಲೆ ಸರಳುಗಳ ಹಿಂದಿನ ಯಾತನೆಗಳ […]

ಕವಿತೆ ಕಾರ್ನರ್

ಬದುಕುವೆ…… ಆ ಮುಂಜಾನೆ ನನಗಿನ್ನೂ ನೆನಪಿದೆಎಳೆ ಗರಿಕೆಯ ಮೇಲೆ ಕೂತ ಇಬ್ಬನಿಯಂತೆ ನೀನಿದ್ದೆ ನನ್ನೆದುರು! ಆ ಮದ್ಯಾಹ್ನ ನನಗಿನ್ನೂ ನೆನಪಿದೆಊರಾಚೆಯ ಚಿತಾಗಾರದಲ್ಲಿ ಬೇಯುತ್ತಿದ್ದ ಹೆಣದಂತೆ ನೆನಪಾಗಿದ್ದೆ ನನ್ನೊಳಗೆ! ಆ ಸಂಜೆ ನನಗಿನ್ನೂ ನೆನಪಿದೆದೂಳು ಬಿದ್ದ ಕಣ್ಣೊಳಗೆ ಬಾಣಂತಿ ಎದೆಹಾಲ ಹನಿಸಿದಂತಿದ್ದೆ ನನ್ನುಸಿರೊಳಗೆ! ಈಗೆಲ್ಲ ಮರೆತು ಹೋಗಿದೆನೀನಿದ್ದದ್ದುನೀ ಹೋದದ್ದು! ನಿಜ ಬಿಡು ಸುಳ್ಳು ಹೇಳಲೂ ಮಿತಿಯಿರಬೇಕುಎನ್ನುವ ಮಾತೇ ಮರೆತು ಹೋಗಿದೆ——! ನೀನಿರುವೆ ನೀನಿಲ್ಲಗಳ ನಡುವೆಬದುಕಿದೆ ಬದುಕಿರುವೆ ಮುಂದೆಯೂ ಬದುಕವೆ! ***** ಕು.ಸ.ಮಧುಸೂದನ್

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-8 ತೆಗೆದೀತೆ ದುಡಿಮೆಯ ಬಾಗಿಲು? ನಾಲ್ಕು ವರ್ಷಗಳ ಕೃಷಿ ಲೇಖನಗಳ ಸರಣಿ ಬರಹಕ್ಕಾಗಿ ಹಲವು ಹಳ್ಳಿಗಳ ರೈತರನ್ನು ಸಂದರ್ಶಕ ಮಾಡಿದ್ದೆ. ಎಲ್ಲ ರೈತರೂ ಕಾರ್ಮಿಕರ ಕೊರತೆಯನ್ನೆದುರಿಸುತ್ತಿರುವ ವಿಷಯ ಹೇಳುತ್ತಿದ್ದರು. ಯಾಕೆ ಎಲ್ಲ ಹಳ್ಳಿಗಳಲ್ಲಿಯೂ ಹೀಗೆ? ಎಂದು ಕಾರ್ಮಿಕರನ್ನು ವಿಚಾರಿಸಲಾರಂಭಿಸಿದೆ. ನಗರದ ಅಂಚಿನ ಹಳ್ಳಿಯಲ್ಲಿ ವಾಸಿಸುವ ಕಾರ್ಮಿಕರು ಕೃಷಿ ಭೂಮಿಯಲ್ಲಿ ದುಡಿಯುವುದಕ್ಕಿಂತ ನಗರಗಳಲ್ಲಿ ಕೆಲಸಕ್ಕೆ ಹೋದರೆ ಕೂಲಿ ಹೆಚ್ಚು ಸಿಗುತ್ತದೆ ಎಂದು ಲೆಕ್ಕ ಹಾಕಿ ದಿನವೂ ನಗರಕ್ಕೆ […]

ಕಾವ್ಯಯಾನ

ಗಝಲ್ ಲಕ್ಷ್ಮಿ ದೊಡಮನಿ ಮಹಾಮಾರಿಯ ಬಲಿ ಕಂಡು ಎದೆಗೆ ಬೆಂಕಿ ಇಟ್ಟಂತಾಗಿದೆ ಎಲ್ಲರ ಕೈಮೀರುತ್ತಿದೆಯೆಂದು ಎದೆಗೆ ಬೆಂಕಿ ಇಟ್ಟಂತಾಗಿದೆ ನನ್ನ ದೌರ್ಬಲ್ಯಗಳನ್ನು ಖಚಿತ ಪಡಿಸಿಕೊಂಡು ನನ್ನೊಂದಿಗೆ ಕಣ್ಣುಮುಚ್ಚಾಲೆಯಾಡುತ್ತಿರುವೆಯೆಂದು ಎದೆಗೆ ಬೆಂಕಿ ಇಟ್ಟಂತಾಗಿದೆ ಹಳೆಯದಾದರೂ ಮರೆಯಾಗುತ್ತಿಲ್ಲ ಹೆಚ್ಚುತ್ತಿದೆ ನೋವು ಮನ ನೆನಪಿಸುತ್ತಿದೆಯೆಂದು ಎದೆಗೆ ಬೆಂಕಿ ಇಟ್ಟಂತಾಗಿದೆ ಅಂದಿನ ಅನ್ನವನ್ನು ಅಂದೇ ಗಳಿಸುವ ಜನ ನಾವು ಗೃಹಬಂಧನದಿ ಹೊಟ್ಟೆ ಹೊರೆದುಕೊಳ್ಳುವದ್ಹೇಗೆಂದು ಎದೆಗೆ ಇಟ್ಟಂತಾಗಿದೆ ಅತಿಯಾದ ಸ್ವಾರ್ಥವನೆಂದಿಗೂ ನಾನು ಯೋಚಿಸಿಲ್ಲ ‘ಚೆಲುವೆ’ ಈ ಅನೀರಿಕ್ಷಿತತೆಯ ಮಾತು ಎದೆಗೆ ಬೆಂಕಿ ಇಟ್ಟಂತಾಗಿದೆ *********

ಕಾವ್ಯಯಾನ

ಹಂಬಲಿಸಿರುವೆ ಶಿವಲೀಲಾ ಹುಣಸಗಿ ನಿನ್ನ ಮೇಲೊಂದು ಮುನಿಸಿದೆ ಕಾರಣ ಹೇಳಲ್ಲ ಚಿಂತಿಸೊಮ್ಮೆ.! ಕನಿಕರಿಸದ ಇರುಳುಗಳೆಲ್ಲ ಉರುಳುಗಳಾಗಿ ಬೆಸೆದಿವೆ..! ಮಬ್ಬಿನಲೊಂದು ನಿಟ್ಟುಸಿರು ತುಟಿಯಂಚಿನಲೊಂದು ಹಸಿಯಾದ ಮೌನದುಸಿರು.! ಕಾಡಿಗೆಯ ಕರಿನೆರಳು.. ಕಮರಿದಾ ಪುಷ್ಪದಂತೆ ರತಿ ಉರಿದು ಭಸ್ಮವಾದಂತೆ..! ಕಪ್ಪುಛಾಯೆಯ ಬಿಂಕನಾನೊಲ್ಲೇ ಮಡುಗಟ್ಟಿದ ಒಡಲುನನ್ನಲ್ಲೇ ನಿನ್ನುಸಿರ ಅಪ್ಪುಗೆಯಲಿ ಬಿಗಿದು ಮುತ್ತಿನಾ ಮಳೆಯ ಸುರಿದ ಬಾರದೇ ನನಗಿನ್ನೇನೂ ಬೇಕಿಲ್ಲ..ನಲ್ಲಾ.. ನಿನ್ನ ಹಿಡಿ ಪ್ರೀತಿಯ ಹೊರತು…! ನಿನ್ನೊಟಕೆ ಹುಸಿಗೋಪ ಮರೆವೆನು ಮರುಗಿದಾಗೆಲ್ಲ ಕನವರಿಕೆಗಳು ಮೊಳಕೆಯೋಡಯದ ಕನಸುಗಳು ನಿಟ್ಟೂಸಿರು ಬಿಡದಾ ಕಂಗಳು..! ನೀ ನೀಡಿದ ಉದರಾಗ್ನಿಯಲಿ […]

ಕಾವ್ಯಯಾನ

ಮಕ್ಕಳ ಕವಿತೆ ಆಸೆ ಮಲಿಕಜಾನ ಶೇಖ ಆಕಾಶಕ್ಕೆ ಹಾರುವ ಆಸೆ ರೆಕ್ಕೆಗಳಿಲ್ಲದೆ ಹಾರುವದ್ಹೇಗೆ..? ಗರುಡನೆ ಗರುಡನೆ ಕೇಳಿಲ್ಲಿ ನಿನ್ನಯ ರೆಕ್ಕೆ ಕೊಡು ಎನಗೆ.. ಮುದ್ದಿನ ಬಾಲಕ ಕೇಳಲೆ ನೀನು ರೆಕ್ಕೆಗಳೇನು ಕೊಡುವೆನು ನಾನು ಛಲವಿಲ್ಲದನೆ ಹಾರುವದ್ಹೇಗೆ..? ರೆಕ್ಕೆಗಳಂತು ಚಿಟ್ಟೆಗೆವುಂಟು..! ಸಾಗರದಾಚೆ ಈಜುವ ಆಸೆ ಕಿವಿರುಗಳಿಲ್ಲದೆ ಈಜುವದ್ಹೇಗೆ..? ಮೀನವೆ ಮೀನವೆ ಕೇಳಿಲ್ಲಿ ನಿನ್ನಯ ಕಿವಿರು ಕೊಡು ಎನಗೆ.. ಪುಟ್ಟನೆ ಪುಟಾಣಿ ಕೇಳಲೆ ನೀನು ಕಿವಿರುಗಳೇನು ಕೊಡುವೇನು ನಾನು ತಾಳ್ಮೇಯ ಇಲ್ಲದೆ ಈಜುವದ್ಹೇಗೆ..? ಕಿವಿರುಗಳಂತು ಚಿಪ್ಪೆಗೆವುಂಟು..! ಗುಬ್ಬಿಯ ಗೂಡನು ಕಟ್ಟುವ […]

ಕಾವ್ಯಯಾನ

‘ಪ್ರಶ್ನೆ ದಾಳ’ ವಸುಂಧರಾ ಕದಲೂರು.  ಎಳೆ ಹುಡುಗನನ್ನು ಮಲೆ ಮೇಲೆ ಕೂರಿಸಿ ಆತ, ಮೊಲೆ ಕಾಣಬಾರದೆಂದು ಬಿಡುತ್ತಾರೆ ! ಹತ್ತಲು ೧೮ ಏಕೆ ..? ಉತ್ತರವಿಲ್ಲದವರ ಬಳಿ ಇಂತಹ ಪ್ರಶ್ನೆ ಕೇಳಬಾರದು. ಎರಡೊಂಬತ್ತಲಿ ಹದಿನೆಂಟೆಂದು ಒಂದು ಗರ್ಭಾವಧಿಯ ಅವಧಿಯ ಮರೆತು ಬಿಡುತ್ತಾರೆ. ಬೀಜ ನಾಟಿ, ಬೇರು ಚಿಗುರಿ ಹೂವೋ ಕಾಯೋ ಅರಳಿಕೊಳಲು ಒಂದ್ಹೊಂಬತ್ತು. ಹೊಟ್ಟೆ ಮಗುಚಿ ಅಂಬೆಗಾಲಿರಿಸಿ, ಬಾಯ ತೊದಲು ಶುರುವಿಗೆ ಇನ್ನೊಂದು ಒಂಬತ್ತು. . ಆಯಿತಲ್ಲ ಹದಿನೆಂಟು..! ಪ್ರತೀ ಪ್ರಶ್ನೆಗೂ ಒಂದು ಉತ್ತರವಿದೆ ಒಪ್ಪಿತವಾದರೆ. ಆದರೂ […]

Back To Top