ಗಾಳೇರ್ ಬಾತ್

ಗಾಳೇರ್ ಬಾತ್

ಗಾಳೇರ್ ಬಾತ್-05 ಬಿ.ಸಿ.ಎಮ್ hostelನಲ್ಲಿ ಅಡ್ಡ ಹೆಸರುಗಳು……. ಇವತ್ತು ನಾನೇನಾದರೂ ಒಂದೆರಡು ಅಕ್ಷರ ಬರೆದು ನಿಮಗೆ ಓದ್ಲಿಕ್ ಹಚ್ಚಿನಂದ್ರ ಆಯಪ್ಪನ ಋಣನ ನಾನ್ಯಾವತ್ತೂ ಮರೆಯೋ ಆಗಿಲ್ಲ. ನಾನಷ್ಟೇ ಅಲ್ಲ! ಎಷ್ಟೋ ಬಡ ವಿದ್ಯಾರ್ಥಿಗಳಿಗೆ ದೇವರಾಜ ಅರಸರು ನನ್ನಂತ ಆರಕ್ಕೇರದ ಮೂರಕ್ಕಿಳಿಯದ ಕುಟುಂಬದ ಮಕ್ಕಳಿಗೆ ತಂದೆತಾಯಿ ಎಲ್ಲವನ್ನೂ ಆಗಿಬಿಟ್ಟಿದ್ದ. ಇಂತಹ ದೇವರಾಜ ಅರಸುರವರ ಸ್ಥಾಪಿಸಿದ ಬಿಸಿಎಂ ಹಾಸ್ಟೆಲ್ನಲ್ಲಿ ನನ್ನ ಪ್ರೌಢಶಿಕ್ಷಣ ಮುಗಿಸಿದೆ.       ಆ ವಯಸ್ಸಿನಲ್ಲಿ  ಅಲವಾರು ಸ್ವಾರಸ್ಯಕರ ಘಟನೆಗಳು, ವಿಚಿತ್ರವಾದ ಸಂಗತಿಗಳು ನಡೆದಿದ್ದವು. ಅವು ನನಗಷ್ಟೇ ಅಲ್ಲ […]

ಕಾವ್ಯಯಾನ

ಇಂದಿನ ಕವಿತೆ ಡಾ.ವೈ.ಎಂ.ಯಾಕೊಳ್ಳಿ ಬೇಡ ಗೆಳೆಯ ನನ್ನ ಕವಿತೆಗಳಲ್ಲಿ ನನ್ನ ಹುಡುಕಬೇಡ ಬರೀ ನನ್ನ ಬಗ್ಗೆ ನಾನು ಬರೆದರೆ ಕವಿಯಾಗಲಾರೆ ಕೂಡ ಪಕ್ಕದ‌ಮನೆಯಲಿ ಹಸಿದವರ ಅರೆಹೊಟ್ಟೆಯ‌ ಬಗ್ಗೆ ಬರೆಯದಿರೆ ನನ್ನ ಕವಿತೆ ಆಗಬಹುದು ಬರೀ ಪದಗಳ ಸಂತೆ ಸುತ್ತಲಿನ ಜಗದಲಿ ನೋವಿಂದ ನಲುಗಿರಲು ನನ್ನ ಮಂದಿ ಚಂದ್ರ ತಾರೆಗಳ ಬಗ್ಗೆ ಹಾಡು ಕಟ್ಟಿದರೆ ನಾ ಎಂಥ ಕವಿಯು ಅಂದಿ ನನ್ನ ಹಾಡು ಜೊತೆಯಾಗಬೇಕು ಗೆಳೆಯ ನನ್ನೂರ ರೈತ ಗೆಳೆಯನ ನೇಗಿಲ ಕುಳಕೆ ರಾಟಿಯ ಎತ್ತುಗಳ ನೊಗದಿ ಬಾವಿಯಾಳವ […]

ಕಾವ್ಯಯಾನ

ನೆನಪ ತಿಜೋರಿ ಶಾಲಿನಿ ಆರ್. ನೆನಪಿಗೊಂದು ಮೊಳೆ ಹೊಡೆಯುತಿದ್ದೇನೆ, ಯಾರಿರದ ಇರುಳಲಿ ಚಂದಿರನ ಬೆಳಕಲಿ, ಮೆಲ್ಲನೆ ಅರಳಿದ ನೈದಿಲೆಗು ಸಂಕೋಚ, ಸದ್ದು ಕೇಳಿಸಿತೇ ಅವನಂಗಳಕು! ಸುದ್ದಿಯಾಗದಿರಲಿದು ಹೊಸ್ತಿಲಾಚೆ, ಮರಳಿ ಮನದ ಮೂಲೆಗೆ ನೆನಪುಗಳ ಜೇಡ ಬಲೆ ಸುಮ್ಮನೆ ಜಿನುಗಿದ ಕಣ್ಣಹನಿಗೂ ದಿಗಿಲು, ನಗುವ ಕತ್ತಲಿಗೂ ಬಿಕ್ಕು ಕೇಳಿಸಿತೇ? ಮತ್ತೆ ನೋಡುತ್ತೇನೆ ಗೋಡೆಯ ಕ್ಯಾಲೆಂಡರ್ ದಿನದ ಅಂಕ, ನಗೆಯ ಅನುರಣಿತ ಬೇಡದೆ ಉಳಿದ ಮಾವಿನ ಚೂರುಗಳು ಮರುಗುವಾಗ ಮನದಾಚೆಯ ಹೆದ್ದಾರಿಲಿ ಭಾರಿ ಮಳೆಯ ಸದ್ದು ತೊಯ್ದರು ತೋಯದ ನಿರ್ಲಿಪ್ತ […]

ಕಾವ್ಯಯಾನ

ಒಡೆದ ಕನ್ನಡಿ ವಿಭಾ ಪುರೋಹಿತ ಒಡೆದ ಕನ್ನಡಿ ಬಿಂಬದಲಿ ಬದುಕು ಹುಡುಕುವ ಹುಚ್ಚು ಎಂದೋ ಬಸವಳಿಯಬೇಕಿತ್ತು ನಿಂತನೀರಿಗೆ ಬಿದ್ದ ತುಂತುರು ಹನಿಗಳ ಪ್ರೇಮ ಮತ್ತೆ ನಗಿಸಿತ್ತು. ಎಷ್ಟು ತುಂಡಾದರೂ ಇಡಿಯಾಗಿ ಬೆಳೆವ ಮಣ್ಣು ಹುಳುವಿನ ಹಟವು ಬೆರಗು ಕಂಡಿತ್ತು ಕಣಕಣದ ಉಸಿರು ಜೀವಂತವಾಗಿ ಬೆಳೆದು ಪ್ರೀತಿ ಹಬ್ಬಿತ್ತು. ಬುಡಕಡಿದ ಮರಗಳಿಗೆ ಚಿಗುರುಣಿಸುವ ಪ್ರಕೃತಿ ವಾತ್ಸಲ್ಯ ವು ದಂಗುಬಡಿಸಿತ್ತು, ನರನಾಡಿಗಳ ನೆಲದ ಮೋಹ ಆಳಕ್ಕಿಳಿದ ಛಲವು ತುಂಬಾ ಕಾಡಿತ್ತು. ಕಡಲಲೆಗಳಾ ಸದ್ದಿನಲ್ಲಿ ವಾಸ್ತವದ ಕೊನೆಯಿರದ ಸಂಕೋಲೆಯಲಿ ಗೆದ್ದು ಬದುಕಿದೆ, […]

ಅನುವಾದ ಸಂಗಾತಿ

ಯಾರಿವಳು? ಕನ್ನಡ: ಶೀಲಾ ಭಂಡಾರ್ಕರ್ ಮಲಯಾಳಂ: ಚೇತನಾ ಕುಂಬ್ಳೆ ಅಡುಗೆಮನೆಯಲ್ಲಿ ಹಾಲು ಉಕ್ಕುವುದರೊಳಗೆ ಓಡಿ ಅದನ್ನು ತಪ್ಪಿಸುವವಳು. ಹೆಣೆದಿಟ್ಟ ಮಧುರ ಕ್ಷಣಗಳ ಕನಸುಗಳು ಹರಿದುಹೋದರೂ ಕಾಣದಂತೆ ಸುಮ್ಮನಿರುವಳು. ರೊಟ್ಟಿ ಕರಕಾಗದಂತೆ ಎಚ್ಚರಿಕೆಯಿಂದ ಬೇಯಿಸಿಕೊಡುವವಳು.. ಎಷ್ಟೋ ಆಸೆಗಳನ್ನು ಸುಟ್ಟು ಬೂದಿ ಮಾಡಿ ಎಸೆದು ಬಿಡುವಳು. ಪಾತ್ರೆಗಳು ಬಿದ್ದು ತಗ್ಗುನುಗ್ಗಾಗದಂತೆ ನೋಡಿಕೊಳ್ಳುವವಳು. ತನ್ನ ಹುಮ್ಮಸ್ಸು, ಉತ್ಸಾಹಗಳನ್ನು ತಾನೇ ಹೊಸಕಿ ಹಾಕುವಳು. ಬಟ್ಟೆಯ ಕಲೆಗಳನ್ನು ಜಾಣ್ಮೆಯಿಂದ ತೊಡೆಯುವವಳು.. ಅಶಕ್ತ ಶಬ್ಧಗಳನ್ನು ಬರೆದ ವಿಷಾದದ ಮಸಿಯನ್ನು ಎದೆಯ ಗೋಡೆಯ ಮೇಲಿಂದ ಅಳಿಸಿಹಾಕುವಳು. ಬಂಧಿಸಿಟ್ಟ […]

ಪ್ರಸ್ತುತ

ಮಾತಾಡುವ ಮರಗಳು ಮೋಹನ್ ಗೌಡ ಹೆಗ್ರೆ ಬೆಳವಣಿಗೆ ಮತ್ತು ಬದಲಾವಣೆ ಪ್ರಕೃತಿ ನಿಯಮಗಳಲ್ಲೊಂದು. ಈ ಬೆಳವಣಿಗೆ ಮತ್ತು ಬದಲಾವಣೆಯನ್ನು ದೈಹಿಕವಾಗಿಯೂ, ಮಾನಸಿಕವಾಗಿಯೂ ಕಂಡುಕೊಳ್ಳಬಹುದಾಗಿದೆ. ಈ ಪ್ರಕ್ರಿಯೆ ಕೇವಲ ಮನುಷ್ಯನಿಗೆ ಮಾತ್ರ ಸಂಬಂಧಿಸಿದ್ದಲ್ಲ. ಮನುಷ್ಯನೊಡಗೂಡಿ ಬದುಕುವ ಚರಾಚರ ಜೀವರಾಶಿಗಳು ಬೆಳವಣಿಗೆ ಮತ್ತು ಬದಲಾವಣೆಯ ಪ್ರಕ್ರಿಯೆಯಲ್ಲಿ ಒಳಗೊಳ್ಳಲೇಬೇಕು. ಪಿಳಿಪಿಳಿ ಕಣ್ಣುಬಿಟ್ಟು ತಾಯಿಯ ತೊಡೆ ಮೇಲೆ ಮಲಗಿದ ಮಗು ಬೆಳವಣಿಗೆಯಾಗಿ, ಮಗುವಿನ ತೊದಲು ಮಾತಿಗೆ ಕೈತಟ್ಟಿ ಕುಣಿದ ಮುದಿ ಜೀವಗಳು ಮಗು ಬೆಳವಣಿಗೆಯಾದ ನಂತರದಲ್ಲಿ ಅಂತಹದೇ ಮಗ್ದ ಪ್ರೇಮದ ನುಡಿಗಳ ಕೇಳಿರಬಹುದು […]

ಕಾವ್ಯಯಾನ

ಸ್ವರ್ಗಸ್ತ ಅಜ್ಜಿಯ ಬಯಕೆ ಸಿ.ಎಚ್.ಮಧುಕುಮಾರ ನಾನೂ ಸ್ವರ್ಗಕ್ಕೆ ಹೋಗಿದ್ದೆ. ಅಲ್ಲಿ ನನ್ನಜ್ಜಿ ಮಾತಿಗೆ ಸಿಕ್ಕರು. ಮೊದಲಿನಂತೆ ದುಂಡನೆಯ ದೇಹವಿಲ್ಲ, ಸೊರಗಿ ಸಣಕಲಾಗಿದ್ದರು. ಅದೂ ಸ್ವರ್ಗದ ನಿವಾಸಿಯಾಗಿ! ಆತುರದಿಂದಲೇ ಪ್ರಶ್ನಿಸಿದೆ: ಯಾಕಜ್ಜಿ? ಒಂದು ಕಡೆ ಕುಂತ್ರು ಕೂರದ ಜೀವ ನಿನ್ನದು ಯಾರು ಎಷ್ಟೇ ಗೊಣಗಿದರೂ ನಿನ್ನಿಷ್ಟದಂತೆಯೇ ಬದುಕಿದವಳು ನೀನು ಇಲ್ಲಾದರೂ ನೆಮ್ಮದಿ ಕಾಣಬಾರದೆ? ಅಜ್ಜಿ ಹೇಳಿತು: ನನಗಿಲ್ಲಿ ಏನೂ ಕೊರತೆಯಿಲ್ಲ. ಮಕ್ಕಳು ಮೊಮ್ಮಕ್ಕಳ ಗಿಜಿಗಿಜಿ ಸದ್ದು ವಾರಗೆಯವರೊಂದಿಗಿನ ಒಡನಾಟ ಮನೆಮಂದಿ, ನೆಂಟರಿಷ್ಟರಿಗೆ ಊಟಕ್ಕಿಕ್ಕಿ ಉಂಡವರು ತೃಪ್ತಿಯಾಗಿ ತೇಗಿದ ಸದ್ದು […]

ಕಾವ್ಯಯಾನ

ಸಿಗಲಾರದ ಅಳತೆ ವಸುಂದರಾ ಕದಲೂರು ನೀನು, ನಿನ್ನ ಕಣ್ಣು ಕೈ ಮನಸ್ಸು ನಾಲಗೆಗಳಲ್ಲಿ ಅಂದಾಜು ಪಟ್ಟಿ ಹಿಡಿದು ಅಳೆದೆ ಅಳೆದೆ ಅಳೆದೆ ಅಳೆಯುತ್ತಲೇ ಇದ್ದೀಯೆ.. ಸರಿ, ಅಳೆದುಕೋ ಹಾಗೆ ಅಳತೆಗೆ ದಕ್ಕುವುದಾದರೆ ನೀ ಅಳೆಯುವುದಾದರೂ ಏನನ್ನು! ಒಂದಷ್ಟು ಅಂದಾಜು ಸಿಗುವ ಗಾತ್ರ- ಗೋತ್ರ; ಉಬ್ಬುತಗ್ಗು ಅವಯವ- ಅವ್ವವ್ವಾ !! ಅಷ್ಟೇ. ಅಷ್ಟಕ್ಕೇ ನಿನಗೆ ದಕ್ಕಿಬಿಟ್ಟರೆ, ರೇ… ಅರೇ ಹೋಗು, ಅಳೆದುಕೋ ನಿನ್ನಾ ಅಳತೆಗೋಲು ಅಂದಾಜು ಶತಮಾನ ಹಳತು ಅದರ ಗೋಲು. ಮಾಡಿಕೊಂಡು ಬಂದದ್ದು ಬರೀ ರೋಲುಕಾಲು. ಅಳೆದೂ […]

ಸಂತಾಪ

ಕನ್ನಡದ ಪ್ರಮುಖ ಕಥೆಗಾರ್ತಿ ಶಾಂತಾದೇವಿ ಕಣವಿಯವರು ಕನ್ನಡ ನಾಡಿನ ಪ್ರಮುಖ ಕಥೆಗಾರ್ತಿ,ಶುದ್ಧ ಕನ್ನಡ ಜನಪದ ಹೃದಯ ಶ್ರೀಮಂತಿಕೆಯ ಸಹಕಾರ ಮೂರ್ತಿ, ಲೇಖಕಿ,⁣ಹಿರಿಯ ಕವಿ, ವಾತ್ಸಲ್ಯಮಯಿ, ಸಮರಸವೇ ಜೀವನ ಎಂದು ಬಾಳು ಬದುಕಿದ ಕವಯಿತ್ರಿ. ಉತ್ತರ ಕರ್ನಾಟಕದ ದೇಸಿ ಸೊಬಗು, ಧ್ವನಿಪೂರ್ಣ ಭಾಷೆ, ತಂತ್ರಗಾರಿಕೆ, ಕಸರತ್ತಿಲ್ಲದ ಬರವಣಿಗೆ ವೈಶಿಷ್ಟ್ಯ ಸಾಕ್ಷಿಕರಿಸಿದ್ದ ಸಾಹಿತಿ ಶಾಂತಾದೇವಿ ಕಣವಿಯವರು.ಹಾಗಾಗಿ ಕನ್ನಡ ಸಾಹಿತ್ಯ ಲೋಕದ ಅನುಪಮ ದಂಪತಿಗಳಲ್ಲಿ ಪ್ರಮುಖವಾಗಿ ಬಂದು ನಿಲ್ಲುವ ಹೆಸರು ಶಾಂತಾದೇವಿ ಕಣವಿ ಮತ್ತು ಚನ್ನವೀರ ಕಣವಿಯವರು ಬಂಧುಗಳೆ. ಜನನ/ಜೀವನ : […]

ಕಾವ್ಯಯಾನ

ಮನದ ಮಾಮರ ಸುವರ್ಣ ವೆಂಕಟೇಶ್ ಮನದ ಮಾಮರಕ್ಕೆ ಮದ ಮತ್ಸರದ ಕಟ್ಟೆ ಕಟ್ಟಿ ಸ್ವಾರ್ಥದ ಜಲವ ಹರಿಸಿ ಬೇರು ಪಸರಿಸಿ ನೇರಳಾಗಿ ನಿಲ್ಲು ಎಂದೊಡನೆ ಎಂತಯ್ಯಾ!! ಮೋಹದ ಕಿರಣವ ತಾಡಿಸಿ ಬೆಂಕಿಯ ಮಳೆ ಸುರಿಸಿ ಮರಳುಗಾಡಿನಲ್ಲಿ ನೆಡಸಿ ಹಚ್ಚ ಹಸಿರಿನ ತರು ಲತೆ ಹೊತ್ತು ಎದ್ದು ನಿಲ್ಲಂದರೆ ಎಂತಯ್ಯಾ!! ಭಾವ ಇಲ್ಲದ ಭಕುತಿ ತೋರಿಸಿ ಅಹಂಕಾರದ ತೊಗಟೆ ಊಡಿಸಿ ಬಿಸಿಲಿನಿಂದ ಬಲೆಯ ಹೆಣೆದು ವಿಷ ಬೀಜವ ಬಿತ್ತಿ ಅಮೃತದ ಸಿಹಿ ಬಯಸಿದೋಡನೆ ಎಂತಯ್ಯಾ!! *********

Back To Top