ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ನೋಡ ನೋಡುತ್ತಿದ್ದ ಹಾಗೆ ಬೆಳಗಾಗಿಬಿಟ್ಟಿತು ಕನವರಿಸುತ್ತಿದ್ದಂತೇ ಕನಸು ಹರಿದುಬಿಟ್ಟಿತು ಹಂಬಲಿಸಿದ್ದೆಷ್ಟು ತಯಾರಿಯ ಸಂಭ್ರಮವೆಷ್ಟು ತಾಸೆರಡು ತಾಸಿನಲ್ಲಿ ‘ಆಟ’ ಮುಗಿದೇಬಿಟ್ಟಿತು ಹೊಳೆ ಮೈಲು ದೂರವಿರುವಾಗಲೇ ಸಿದ್ಧನಿದ್ದೆ ಪಾದವನ್ನೂ ನೆನೆಸದೆ ನೀರು ಸರಿದುಬಿಟ್ಟಿತು ಭಾರವನ್ನು ಅವರೂ ಹೊರುವ ನಿರೀಕ್ಷೆಯಿತ್ತು ನನ್ನ ತಲೆಗೇ ಎಲ್ಲ ಕಟ್ಟಿ ಮಂದಿ ಕೈಬಿಟ್ಟಿತು ಬೆಳಗಾದರೆ ಪರಿಹಾರ ಸಿಗುವ ವಿಶ್ವಾಸವಿತ್ತು ನಸೀಬು ಖೊಟ್ಟಿ, ರಾತ್ರಿಯೇ ಎಣ್ಣೆ ತೀರಿಬಿಟ್ಟಿತು ಕೈಗೆ ಸಿಗದೇ ನಡೆಯುವ ‘ಜಂಗಮ’ನ ಕೇಳಬೇಕು ಇರವು-ಅರಿವಿನ ನಡುವೇಕೆ ಬಿರುಕುಬಿಟ್ಟಿತು ******

ಗಾಳೇರ್ ಬಾತ್

ಗಾಳೇರ್ ಬಾತ್ -03 ಬದುಕು ಏನೆಲ್ಲಾ ಮಾಡಿಸುತ್ತದೆ…….. ಇವನೌನ್ ಇವನೇನು ಬರಿತಾನ ಅಂತೀರಲಾ….. ನಿಜ ಕಣ್ರೀ ನಾನು ಬೇರೆ ಏನು ಬರೆಯುವುದಿಲ್ಲ! ನಮ್ಮ-ನಿಮ್ಮ ನಡುವೆ ನಡೆಯುವ ದಿನ ನಿತ್ಯದ ಘಟನೆಗಳೇ ನನ್ನ ಬರವಣಿಗೆಗಳಿಗೆ ಶೃಂಗಾರ.          ಆಗ ತಾನೆ ನಾನು duty ಮುಗಿಸಿಕೊಂಡು restroom ನಲ್ಲಿ ಏನೋ ಯೋಚಿಸುತ್ತ ಕೂತಿದ್ದೆ. Duty ನಾ.. ಯಾವ duty….  ಅಂತ ಜಾಸ್ತಿ ತಲೆ ಕೆಡಿಸ್ಕೋಬೇಡಿ. ಅದೇ ನಾನು ಮಾಡ್ತಿದ್ನಲ್ಲ housekeeping ಕೆಲಸ. ಹೀಗೆ ಕೂತಿರಬೇಕಾದ್ರೆ ಪ್ರಕಾಶ ಎಲ್ಲಿಂದ ಬಂದ್ನೋ ಗೊತ್ತೆ […]

ಕಾವ್ಯಯಾನ

ಜೇಡ ರಾಜೇಶ್ವರಿ ಭೋಗಯ್ಯ ಕಾವ್ಯಕ್ಕೆ ವಸ್ತುವಾಗಲೆಂದು ಜೇಡವನ್ನು ಆರಿಸಿಕೊಂಡಿದ್ದೆ ಕವಿಯೊಬ್ಬರು ಹೇಳಿದ್ದರು , ವಸ್ತು ಯಾವುದಾದರೂ ಆಗಬಹುದು ಕವನ ಕಟ್ಟುವುದಕ್ಕೆ, ಒಡೆದ ದೋಣಿ ,ಮುರಿದ ಏಣಿ ಹೀಗೆ… ಜೇಡ ಕಟ್ಟುತ್ತಲೇ ಇತ್ತು ಬಲೆಯನ್ನು ನಾ ಕೆಡವುತ್ತಲೇ ಇದ್ದೆ ಪದೇ ಪದೇ ಅದರ ಬದುಕನ್ನು ಕೂತು ನೋಡಿದ್ದೇ ಬಂತು, ಪದಗಳು ಬರಲಿಲ್ಲ ರಾಜ ಬಲೆ ಹೆಣವುದ ನೋಡಿಯೇ ಸ್ಪೂರ್ತಿಗೊಂಡನಲ್ಲ ಜೇಡ ಬಲೆಯನ್ನು ಹೆಣೆಹೆಣೆದು ಕಟ್ಟಿಯೇ ಬಿಟ್ಟಿತು ತನ್ನರಮನೆಯನ್ನು ದಿಕ್ಕೆಟ್ಟಿದ್ದವ ಅವ, ಜೇಡ ಮನೆಕಟ್ಟಿದ್ದ ನೋಡಿ ತಾನೂ ಕಟ್ಟಿದ ಪುನಃ […]

ಅನುವಾದ ಸಂಗಾತಿ

ಕನ್ನಡ ಮೂಲ: ರಾಜು ಹೆಗಡೆ ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ಹುಟ್ಟು ಹುಟ್ಟು ದೇವರಾಣೆ! ನನಗೆ ಗೊತ್ತಿರಲಿಲ್ಲ. ನಾನು ಹುಟ್ಟುತ್ತೇನೆಂದು ಹುಟ್ಟಿ ಇಷ್ಟು ವರ್ಷವಾದರೂ ಹುಟ್ಟಲಾಗಲೇ ಇಲ್ಲ. ಖಾಲಿ ಆಕಾಶದ ಕೆಳಗೆ ಬಟಾಬಯಲ ಒಳಗೆ ಬೋಳು ಮರದಡಿಯಲ್ಲಿ ಕೂರುತ್ತಿರಲಿಲ್ಲ ಹೀಗೆ ನಾನು ಹುಟ್ಟಿದ್ದರೆ ನಿರುದ್ಯೋಗ ಕಲಿಯದಿದ್ದರೆ ಇರುತ್ತಿರಲಿಲ್ಲ ಹೀಗೆ ನಾ ಹುಟ್ಟಿದ್ದರೆ ಕ್ಷಮಿಸಿ, ನನ್ನ ಕೈಲಿನ್ನೂ ಹುಟ್ಟಲಾಗಲೇ ಇಲ್ಲ.. -********** Birth ——- Swear God! I didn’t know that I would be born. After […]

ಲಹರಿ

ಎಮ್ಮೆ ಮತ್ತು ಜೋತಿಷ್ಯ ಅನುಸೂಯ ಎಂ.ಆರ್. ನಮ್ಮ ಅಮ್ಮ ಗಟ್ಟಿ ಮುಟ್ಟಾಗಿರುವ ತನಕ ನಾವು ಹಾಲು ಕೊಂಡು ಕೊಳ್ಳುತ್ತಿರಲಿಲ್ಲ.ನಮ್ಮ ಮನೆಯಲ್ಲಿ ಹಾಲು ಕರೆಯುವ ಒಂದು ಎಮ್ಮೆ ಸದಾ ಇದ್ದೇ ಇರುತ್ತಿತ್ತು. ಬೆಳಿಗ್ಗೆ ನಾಲ್ಕೈದು  ಲೀಟರ್ ಮತ್ತು ಸಂಜೆ ಅಷ್ಟೇ ಪ್ರಮಾಣದಹಾಲು ಕೊಡುವಂತಹವು.ಆಗ ನಮ್ಮ ಮನೆಯಲ್ಲಿ ಸದಾಹಾಲು,ಮೊಸರು,ತುಪ್ಪಗಳ ಸಮೃದ್ಧಿಯ ಸುವರ್ಣಯುಗ. ನಮ್ಮಮ್ಮ ಹಸುಗಳನ್ನು ಸಾಕುತ್ತಿರಲಿಲ್ಲ,ಹಸು ನಮಗೆ ಆಗಿ ಬರುವುದಿಲ್ಲ ಎಂದು ಹೇಳುತ್ತಿದ್ದರು. ನಮ್ಮಮ್ಮನ ದಿನಚರಿ ಆರಂಭವಾಗುವುದೆ,  ಹಾಲು ಕರೆಯುವುದರಿಂದ ಸೌದೆ ಒಲೆಯ ಸಣ್ಣ ಉರಿಯಲ್ಲಿ ಹಾಲು ಕಾಯಿಸುತ್ತಿದ್ದ ಕಾರಣ […]

ಕಾವ್ಯಯಾನ

ಮತ್ತೆ ವಸಂತ ತೇಜಾವತಿ.ಹೆಚ್.ಡಿ ಮರಳ ಅಂಗಳದೊಳಗೆ ಬಾಳರಂಗೋಲಿ ಬಿಡಿಸುವುದು ಬೇಡ ಗೆಳೆಯ… ಶಿಲೆಗಳಲ್ಲಿ ಕೆತ್ತೋಣ ಶಾಶ್ವತವಾಗಿ… ! ಭುವಿಯಾಗಸ ಚಂದ್ರಾರ್ಕರ ಸಾಕ್ಷಿ ಸಾಕು.. ತೊಟ್ಟ ಬಟ್ಟೆ ಒಳಗಿನ ಕಾಯ ಕುಳಿತ ಜಾಗ ಕೊಚ್ಚಿಹೋಗುವ ಮುನ್ನ ಎದ್ದು ನಡೆಯೋಣ.. ಗತದ ಕಹಿನೆನಪುಗಳ ದೊರೆತಿರುವ ಒಲವಿನಲಿ ಮುಳುಗಿಸಿಬಿಡು! ಒಡಲ ದಹಿಸಿದ ವ್ಯರ್ಥ ಮಂದಾಗ್ನಿಯ ಉಗುಳಿಬಿಡು.. ಮತ್ತೆ ಸ್ವಚ್ಛಂದವಾಗಿ ನಾ ನಿನಗೆ, ನೀ ನನಗೆಂದು ಒಲವಸಾಗರದಲ್ಲಿ ಮತ್ಸ್ಯಗಳಾಗೋಣ.. ! ಬೇರೆಲ್ಲ ಬದಿಗಿರಲಿ ಮೊದಲು ನಮ್ಮ ತನವ ಮೆರೆಯೋಣ. . ಹಮ್ಮು ಬಿಮ್ಮುಗಳ […]

ಕಾವ್ಯಯಾನ

ಒಂದು ಕೊಂಕಣಿ ಬಾಷೆಯ ಕವಿತೆ ಜವಾಬ್ ಪಂಚ್‍ವೀಸ್ ವರ್ಸಾ ಉಪರಾಂತ ಪರತ ತಾಕ್ಕಾ ಭೇಟೂಚೊ ಅವಕಾಶ. ತಶಿ ಮಣೂನ ಆಯ್ಲಾ ತಾಗೆಲೆ ಸಂದೇಶ‌. ಮನ ಧಾಂವ್ಲೆ ಪಂಚ್‍ವೀಸ ವರಸಾ ಮಾಕ್ಷಿ. ಪತಂಗಾ ವರಿ ಉಬಲೆ ದೇವ ಸಾಕ್ಷಿ. ತಾಗೆಲೊ ಏಕ ಸವಾಲಾ ಚೊ ಝಾಪ್ ಮೆಗೆಲೆ ಭಿತ್ತರಿ ವರಲಾ. ತ್ಯಾ ವೇಳ ಉತ್ರಾಂನ ಮೆಗೆಲೆ ಸಾಥ್ ದಿಲಲೆ ನಾ. ಆಜ ಹಾಂವ ತಾಗೆಲೆ ಸಗ್ಳೇ ಸವಾಲಾಚೆ ಜವಾಬ ದಿತ್ತಲಿ ಮನಾಚೆ ಜಡಾವಣ ದೆವೊನು ಹಗೂರ ಜಾತ್ತಲಿ ಧಾಂವಲಿ […]

ಪ್ರಸ್ತುತ

ಲಾಕ್ಡೌನ್ ತೆರವಿನ ಪರಿಣಾಮಗಳು ರೇಶ್ಮಾ ಗುಳೇದಗುಡ್ಡಾಕರ್ ಕೊರೊನಾ ಸಾವಿರದ ಗಡಿದಾಟಿದೆ ಇಂತ ಆತಂಕದ ಸ್ಥಿತಿ ಯಲ್ಲಿ ಸರ್ಕಾರ ಲಾಕ್ಡೌನ್ ಹಂತ ಹಂತವಾಗಿ ತೆರವು ಗೊಳಿಸುವದು ಎಷ್ಟು ಸರಿ? ಸಾರಿಗೆ ಸಂಚಾರ ಆರಂಭವಾದರೆ ಸಾಮಾಜಿಕ ಅಂತರ ಸಾದ್ಯವೆ ನಮ್ಮ  ಜನರ ಇಗಿನ ಮನಸ್ಥಿತಿ ಯಲ್ಲಿ  ರಾಜ್ಯದ ಲ್ಲಿ ?ಶಾಲೆ ಪುನಾರಂಭ ಎರಡು ಪಾಳಿಯಲ್ಲಿ ಮಾಡಲು ಸಚಿವರು ಹೇಳಿದರು ಇಂತಹ ಸಂಧರ್ಭದಲ್ಲಿಕೊರೊನಾ ತಡೆಗಟ್ಟಲು ಸೂಕ್ತ ವ್ಯವಸ್ಥೆ ಇದೆಯೇ ಶಾಲೆಯಲ್ಲಿ  ಎಂಬುದನ್ನು ಪರೀಶೀಲಸ ಬೇಕು . ಶಾಲಾ ಅವರಣದಲ್ಲಿ ಮಕ್ಕಳು ಸಾಮಾಜಿಕ […]

ಕಾವ್ಯಯಾನ

ನಾಲಿಗೆ ಕತ್ತರಿಸಿ ನಡೆದವರು ಜಹಾನ್ ಆರಾ ದೂರ ವಿಮಾನದಿಂದ ಹಾರಿ ಬಂದವರು ತಂದ ಆಧುನಿಕತೆಯ ಭಾರವನ್ನು ಸಾವಿರಾರು ಮೈಲಿ ಹೊತ್ತು ನಡೆಯುತ್ತಿದ್ದೇವೆ ಈಗ ಕಾಲುಗಳು ಸೋತಿವೆ ತಲುಪುವ ಊರು ಇನ್ನೂ ಬಹು ದೂರ ದುಡಿದು ತಿಂದ ದೇಹ ದಾರಿಯುದ್ಧಕ್ಕೂ ಬೇರೆಯವರ ದಾನಕ್ಕಾಗಿ ಕೈ ಒಡ್ಡಿತು ಮೇಲೆ ಕುಳಿತವನು ಆಡಿಸಿದಂತೆ ದೀಪವು ಹಚ್ಚಿದ್ದೇವೆ ನಮ್ಮ ರಕುತ ಬಸೆದು ಜಾಗಟೆಯೂ ಬಾರಿಸಿದ್ದೇವೆ ಖಾಲಿ ಹೊಟ್ಟೆ ಬಡಿದು ಹಗಲು-ರಾತ್ರಿ ಬಿಸಿಲು ಹಸಿವು ಯಾರ ಮಾತು ಕಿವಿಗೆ ಬೀಳಲಿಲ್ಲ ನಿಮ್ಮ ಆಶಾದಾಯಕತೆಯ ಹೊರತು […]

ಕಾವ್ಯಯಾನ

ಜೀವನಕ್ಕೊಂದು ಕ್ಲಾಸ್ ಶೀಲಾ ಭಂಡಾರ್ಕರ್ ನಾನೊಂದು ಹೆಜ್ಜೆ ಇಡುವುದರಲ್ಲಿ..ಸಾಗುತ್ತದೆ. ನಾಲ್ಕು ಹೆಜ್ಜೆ ಮುಂದೆ ನನ್ನ ಜೀವನ. ಪುನಃ ನನ್ನ ಒಂದು ಹೆಜ್ಜೆಗೆ ಅದು ಮತ್ತೆ ನಾಲಕ್ಕು. ಆದರೂ ನಗುತ್ತಲೇ ಇದ್ದ ನನ್ನ ನೋಡಿ. ಕೇಳಿತೊಮ್ಮೆ ನನ್ನದೇ ಮನಸ್ಸು. ನಗುತ್ತಲೇ ಇರುವಿಯಲ್ಲ.. ಬದುಕೇ ನಿನ್ನಿಂದ ಬಲು ಮುಂದೆ ಸಾಗಿದ್ದರೂ..!! ನಾನಂದೆ.. ಎಷ್ಟು ವೇಗವಾಗಿ ಸಾಗಿದರೂ ಇದ್ದೇ ಇದೆಯಲ್ಲ ಮುಂದೆ ಗಡಿ.. ಅಲ್ಲಿಂದ ಇಡಲಾದೀತೆ ಒಂದೇ ಒಂದು ಅಡಿ. ಅಲ್ಲಿ ನಿಂತು ಕಾಯುತ್ತಿರಲಿ. ತಲುಪುತ್ತೇನೆ ನಾನು ನನ್ನದೇ ವೇಗದಲ್ಲಿ ನನ್ನದೇ […]

Back To Top