ಕಾವ್ಯಯಾನ

ಕಾವ್ಯಯಾನ

ಗುಲಾಬಿ ನಕ್ಷತ್ರ ಅಂಜನಾ ಹೆಗಡೆ ಶಾಪಿಂಗ್ ಹೋದಾಗಲೊಮ್ಮೆ ಪರಿಚಯದ ಅಂಗಡಿಯವ ಗುಲಾಬಿ ಬಣ್ಣದ ಚಪ್ಪಲಿ ಹೊರತೆಗೆದ ಬೆಳ್ಳನೆಯ ಪೇಪರಿನೊಳಗೆ ಬೆಚ್ಚಗೆ ಸುತ್ತಿಟ್ಟ ರಾಣಿ ಪಿಂಕ್ ಚಪ್ಪಲಿ! “ಸೈಜ್ ನೋಡಿ ಮೇಡಂ; ನಿಮ್ಮ ಕಾಲಿಗೆ ಹೇಳಿ ಮಾಡಿಸಿದ ಬಣ್ಣ” ಎಂದ ಹಳೆ ಚಪ್ಪಲಿಯ ಕಳಚಿ ಪಾದಗಳನ್ನೊಮ್ಮೆ ಕೈಯಿಂದ ತಡವಿ ಧೂಳು ಕೊಡಹಿ ಅಳೆಯಲು ನಿಂತೆ ಬಣ್ಣ ಗಾತ್ರಗಳ! ಬಳಸಲಾಗದು ಅಳತೆ ದಕ್ಕದೆ ಕುತ್ತಿಗೆಯ ತುಸುಬಾಗಿಸಿ ಬಿಳಿಯ ಸ್ಟ್ರೈಪ್ ಗಳೊಳಗೆ ಬೆರಳುಗಳ ಬಂಧಿಸಿ ದಿಟ್ಟಿಸಿದೆ! ಕನ್ನಡಿಯೊಳಗಿನ ಪಾದಗಳ ಮೇಲೆ ಹೊಳೆದವು […]

ಮಮತೆಯ ಮಡಿಲು

ಬಣ್ಣಿಸಲು ಪದಗಳು ಬೇಕೇ? ಚಂದ್ರು ಪಿ.ಹಾಸನ ಮಮತೆಯ ಮಡಿಲಲ್ಲಿ ಮಿಡಿದ ಭಾವಗಳು ನೂರಾರು ಅಲ್ಲಿ ಕಳೆದ ಪ್ರತಿಕ್ಷಣಗಳು ಮಧುರ ಚಿರನೂತನ.ಮಾಂಸ ಮುದ್ದೆಯನ್ನು ನವಮಾಸ ತನ್ನ ಗರ್ಭದಲ್ಲಿ ಪೋಷಿಸಿ , ಈ ಜಗತ್ತನ್ನು ಪರಿಚಯಿಸಿ ಮಗುವಿನ ಬಾಳಿಗೆ ಆಸರೆಯಾಗುವವಳೇ ಅಮ್ಮ. ದೇವರಿಗೆ ದೇವರು ಅಮ್ಮ ಆಗಿರುವಾಗ ಮೂಲಕಥೆಗೆ ಪದವಿಲ್ಲ ಕೇವಲ ವಾತ್ಸಲ್ಯದ ಗುರುತುಗಳನ್ನು ಅಕ್ಷರವಾಗಿ ಸಿ ಮಮತೆಯ ಕ್ಷಣಗಳನ್ನು ಅವಳ ನೆನಪನ್ನು ಅವಳ ಮಡಿಲಲ್ಲಿ ಕಳೆದ ಕ್ಷಣಗಳನ್ನು ಪದವಾಗಿಸಿ ಒಂದೊಂದೇ ಈ ಲೇಖನದಲ್ಲಿ ತುಂಬಬಹುದಷ್ಟೇ. ಇತಿಹಾಸ ಅನ್ನಾ ಜಾರ್ವಿಸ್ […]

ಲಹರಿ

ಪ್ರೀತಿ ಗಂಧವನರಸುತ ಸಂಧ್ಯಾ ಶೆಣೈ ಫೋನ್ ರಿಂಗಾಯಿತು.. ಯಾರೆಂದು ನೋಡಿದರೆ ನಾನು ಆಗಾಗ ಊರಕಡೆಯ ತರಕಾರಿ ತೆಗೆದುಕೊಳ್ಳುತ್ತಿದ್ದ ತರಕಾರಿ ವ್ಯಾಪಾರದ ಹೆಂಗಸು. ” ಅಕ್ಕ ಒಳ್ಳೆ ಕಾಟು ಮಾವಿನ ಹಣ್ಣು ಬಂದಿದೆ ಸ್ವಲ್ಪ ತಗೊಂಡ್ ಹೋಗಿ “ಎಂದು ಹೇಳಿದಳು. ನಾನು ಹೇಳಿದೆ “ಬ್ಯಾಡ ಬ್ಯಾಡ ಮಾರಾಯ್ತಿ.. ಈ ಕೊರೋನಾ ಬಂದ ಮೇಲೆ ನಾನು ಮನೆಯಿಂದ ಹೊರಗೆ ಹೋಗಲೇ ಇಲ್ಲ. ಹೋಗುವುದೂ ಇಲ್ಲ. ಹಾಗಾಗಿ ಬೇಡ ನಂಗೆ ಬರಲಿಕ್ಕಿಲ್ಲ” ಎಂದೆ ಅದಕ್ಕವಳು” ಅಯ್ಯೋ ಅಷ್ಟೇಯಾ.. ಹೌದು ನೀವು ಹೇಳಿದಾಗೆ […]

ಮಾತೃ ದೇವೋಭವ

ಮಾತೃ ದೇವೋಭವ ಸಂಮ್ಮೋದ ವಾಡಪ್ಪಿ ದೇವ ಬಿತ್ತಿದ ಇಲ್ಲಿ ಎದ್ದು ನಿಲ್ಲಲೆಂದು ಹಸಿರ ಚಿಗುರೊಡೆದು ಮೇಲೇಳಲೆಂದು ಬಸಿರ ಭೂತಾಯಿಯ ಒಡಲ ಹೊರಬಂದು ಉಸಿರ ಬೆಸೆದು ನಸು ನಗುವ ಬೀರಲೆಂದು ಇದು ಜನುಮ ಅಗೋಚರ ಶಕ್ತಿಯಿಂದ ಅಳುವ ದ್ವನಿಯ ಕೇಳುವ ತವಕದಿಂದ ಹುಟ್ಟು ನವಮಾಸದ ತಪದ ದಾರಿಯಿಂದ ಪಯಣ ಆ ಮಾತೆಯ ಲಾಲಿ ಹಾಡಿನಿಂದ ರತ್ನವಾಗಲಿ ಎನುತ ತೊಟ್ಟಿಲ ತೂಗಿದಾಗ ಮಂದಹಾಸದಿ ದೃಷ್ಟಿ ಬೊಟ್ಟು ಒತ್ತಿದಾಗ ಸುಪಥವ ಹಿಡಿದು ನಡೆಸಲು ಹರಸಾಹಸ ಯಶೋದೆಯ ಪರಿಶ್ರಮವೇ ಅವನ ವಿಕಾಸ ಭವದ […]

ಅಮ್ಮಂದಿರ ದಿನದ ವಿಶೇಷ- ಬರಹ

ಅಮ್ಮನದಿನ          ಎನ್.ಶೈಲಜಾ ಹಾಸನ   ಕಳೆದ ವರ್ಷವಷ್ಟೆ ಅಮ್ಮನ ದಿನ ಆಚರಿಸಿದೆವು.ಈ ವರ್ಷವೂ ಅಮ್ಮಂದಿರ ದಿನ ಬಂದಿದೆ. ಅಮ್ಮನಿಗಾಗಿ ಒಂದು ದಿನವೇ ಎಂದು ಹುಬ್ಬೇರಿಸುವವರ ನಡುವೆಯೂ ಅಮ್ಮನನ್ನು ನೆನೆಸಿಕೊಂಡು ಅಮ್ಮನಿಗಾಗಿ ಉಡುಗರೆ ನೀಡಿ ಅಮ್ಮನ ಮೊಗದಲ್ಲಿ ಸಂತಸ ತುಂಬಿzವರು, ಅಮ್ಮನ ದಿನ ಮಾತ್ರವೇ ನೆನಸಿಕೊಂಡು ಅಮ್ಮನ ದಿನ ಆಚರಿಸಿದವರೂ, ತಮ್ಮ ಜಂಜಾಟದ ನಡುವೆ ಅಮ್ಮನನ್ನೆ ಮರೆತವರೂ, ಈ ಅಮ್ಮಂದಿರ ದಿನದ ಆಚರಣೆಗಳೆÉಲ್ಲ ನಮ್ಮ ಸಂಸ್ಕ್ರತಿ ಅಲ್ಲ, ನಾವೂ ದಿನವೂ ಅಮ್ಮನನ್ನು ಜೊತೆಯಲ್ಲಿಯೇ […]

ಅಮ್ಮಾ ಎಂಬ ಬೆಳದಿಂಗಳು

ಅಮ್ಮಾ ಎಂಬ ಬೆಳದಿಂಗಳು ನಾಗರೇಖಾ ಗಾಂವಕರ ಅಮ್ಮಾ! ಅಂದ ಕೂಡಲೇ ಅದೇನೋ ಮಧುರವಾದ ಭಾವ ಎದಗೂಡಲ್ಲಿ ಚಕ್ಕನೇ ಸುಳಿದಂತಾಗುತ್ತದೆ. ಆಪ್ತವಾದ ಹೃದಯವೊಂದರ ಬಡಿತ ದೂರದಲ್ಲಿದ್ದರೂ ನಮ್ಮ ಹತ್ತಿರವೇ ಸುಳಿದಾಡುತ್ತಿದೆ ಎಂಬಂತೆ ಭಾಸವಾಗುತ್ತದೆ. ಮಗಳಿಗೆ ಇಷ್ಟವೇನು? ಕಷ್ಟವೇನು ಎಂಬುದನ್ನು ನನ್ನಮ್ಮ ಅರಿತುಕೊಂಡಿದ್ದಳೇ? ಕೆಲವೊಮ್ಮೆ ಅನ್ನಿಸುತ್ತಿತ್ತು. ಅಮ್ಮನಾಗುವುದೆಂದರೆ ಆ ಪರಿಯ ಜವಾಬ್ದಾರಿಯೇ!  ನನ್ನಮ್ಮನೇಕೆ ಸಣ್ಣದಕ್ಕೂ ರೇಗುತ್ತಾರೆ? ಯಾಕೆ ನನ್ನ ಹುಟ್ಟಿಸಿಕೊಳ್ಳಬೇಕಿತ್ತು. ಬೈಯುವುದಾದರೂ ಏಕೆ? ಅಮ್ಮ ಬೈದಾಗ ತಂದೆ ಬೆಂಬಲಿಸುತ್ತಿದ್ದರೂ ಅಮ್ಮ ಅದಕ್ಕೂ ಹುಸಿಮುನಿಸು ತೋರುತ್ತಿದ್ದಾಗ  ಅಮ್ಮ ! ನಿನಗೆ ಹೊಟ್ಟೆ […]

ಕಾವ್ಯಯಾನ

ಕ್ವಾರೆಂಟೈನ್ ಹಾಯ್ಕುಗಳು. ಪ್ರಮೀಳಾ ಎಸ್.ಪಿ. ಕರೊನಾಕ್ಕೆ ಕಾರಣವಂತೆ ಶಾಂಗ್ಲಿ ಮತ್ತವಳ ಬಾವಲಿ ನರಳುತ್ತಿರೋದು ಮಾತ್ರ ಇಟಲಿಯ ಇಲಿ. ಸತ್ತರಂತೆ ಅಮೆರಿಕಾದಲ್ಲಿ ಅಷ್ಟೊಂದು ಜನ. “ಹೊಯ್” ! ಟೀವಿಯಲ್ಲಿ ಮಾರಾಯ… ಎಂದು ಅಡ್ಡಾಡಿದರು ನಮ್ಮೂರ ಜನ . ಸುರರೇ ಕುಡಿಯುತ್ತಿದ್ದರು ಎಂಬ ನೆಪ ಕುಡುಕರದ್ದು ಕೇಳದಿದ್ದರೂ ನೀಡಿದವರು ಹೇಳಲಾರದ ನೆಪ ‘ಗಲ್ಲ’ದ್ದು. ಕಂಠ ಪೂರ್ತಿ ಕುಡಿದು ಅಪ್ಪ ಅಮ್ಮನಾದರು ಬೆತ್ತಲು ಕಣ್ಣು ಬಿಟ್ಟ ಮಗುವಿನ ಮನದಲ್ಲೀಗ ಕತ್ತಲು. ಕೇಳುವರೆಲ್ಲ ತೆರೆಯಲೆಂದು ಅವರವರ ಆದಾಯದ ಬಾಗಿಲು ತೆರೆಯಿರಿ ಎಂದು ಕೇಳುವುದೇ […]

ಕಾವ್ಯಯಾನ

ಹೆಣ್ಣಿನಂತರಾಳ ವಾಣಿ ಮಹೇಶ್ ಮಮತೆಯ ಮಡಿಲಲ್ಲಿ ಮಮತೆಯ ಕಾಣದೆ ಮರುಗುವುದ ಕಲಿತೆ ಮರುಳ ಮನಸು ಅರಿಯದೆಲೆ ಆಸೆಗಳು ಕಂಗಳ ತುಂಬಿವೆ / ಕೊರಳುಬ್ಬಿ ಕಂಗಳ ಕಂಬನಿ ಜಾರಲು.. ಹೆದರಿ ಅಲ್ಲೇ ಅವಿತು ತನ್ನಿರವ ಸೂಚಿಸಿದೆ / ಪ್ರೇಮಮಯಿ ಮಾತೆ ತನ್ನಿರವ ಮರೆತಳು ನಾ ಬರೆದ ರಾಗಕೆ ಸ್ವರವೇ ಇಲ್ಲವಾಗಿಸಿಹಳು ತಂತಿ ಕಡಿದು ಜೀವವೀಣೆ ಜೀವಚ್ಛವವಾಗಿದೆ/ ರಾಗಾಲಾಪಗಳು ಶೋಕದಿ ಬಿಕ್ಕುತಿವೆ ಬಯಸಿದ ಮಮತೆ ದೂರ ಸಾಗಿ ಹೋಗಿದೆ.. ಕಾಣದಾ ಲೋಕಕೆ ನೆನಪು ಹಚ್ಚ ಹಸಿರಾಗಿ ಬೊಬ್ಬಿಡುತಿದೆ / ಮೌನ […]

ಕಾವ್ಯಯಾನ

ಅಂತಃಶುದ್ಧಿಯ ಸಮಯ…!! ಅರ್ಚನಾ ಹೆಚ್ ಜಾತಿ ಧರ್ಮಗಳ ಸುಳಿಯಲರಳಿದ ಕುಸುಮಗಳಿಂದು‌ ಶಿವಪೂಜೆಗೊದಗದೆ ಬರಿದೆ ಬಾಡಿದ ಬೆರಗು..!! ಹೆತ್ತ ಮಡಿಲಲಿ ಮತ್ತೆ ಕೂಸುಗಳು..! ಬದುಕಿದರೂ ಸತ್ತರೂ ಅವಳೊಡಲೇ ಗಮ್ಯ.. ಮಣ್ಣಾಗಬಾರದವುದೆಂಬುದೊಂದೇ ತಾಯಿ ಹರಕೆ..!! ನಾನು ನನ್ನಂದೆಂಬ ತುಂಬು ಗರ್ವದಲಿದ್ದೆ..!!?? ಮತ್ತೆ ಮೇಲಿಹನಾಗ್ರಹ..! ಕಣ್ಣೆವೆಯಿಕ್ಕದೆ ದಿಟ್ಟಿಸಿ ನೋಡು..! ಸ್ವಾರ್ಥ ದುರಾಗ್ರಹದ ಪೀಡೆಯೊಳಾಡಿದ ಮರುಳ ಮಾನವರಿಗಿದೇಟು! ರಣತಂತ್ರ!! ವಿಕೃತ ಮನಸ್ಥಿತಿಗಳಾಟ! ವಿಶ್ವವ್ಯಾಪಿ ಬೀಸಿ ಚಾಟಿಯೇಟು..!! ಧನವೋ! ಋಣವೋ!?? ಶಕ್ತಿಯಾಟದಲಿ ಸತ್ತವರ ಲೆಕ್ಕಗಳು ಸರ್ವವ್ಯಾಪಿ! ಮೃತ್ಯು ಕಡುಕೋಪಿ..!! ಮಾತೃಭೂಮಿಯ ಸೊಗಡು ಭಕ್ತಿ ಮರೆತವಗೆ […]

ಕಥಾಯಾನ

 ಒಂದು ಹನಿ ನೀರಿನ ಕಥೆ ಜ್ಯೋತಿ ಬಾಳಿಗಾ ಸದಾಶಿವ ರಾಯರಿಗೆ ಆರೋಗ್ಯದಲ್ಲಿ ತೊಂದರೆ ಆಗಿ ಆಸ್ಪತ್ರೆಗೆ ಸೇರಿಸಿದ್ದಾರಂತೆ. ಹಳ್ಳಿಯಿಂದ ನಿನ್ನ ಮಾವನ ಪೋನು ಬಂದಿತ್ತು ಸಚಿನ್. ರಾಯರು ಹೇಗಿದ್ದಾರೆ ಅಂತ ಒಮ್ಮೆ ನೋಡಿಕೊಂಡು ಬರೋಣ ಅಂದರೆ ಅಷ್ಟು ದೂರ ಪ್ರಯಾಣ ನನ್ನಿಂದ ಸಾಧ್ಯವಿಲ್ಲ ಮಗನೇ….ನಿನ್ನ ವಿದ್ಯಾಭ್ಯಾಸಕ್ಕೆ ತುಂಬಾ ಸಹಾಯ ಮಾಡಿದ್ದಾರೆ ರಾಯರು. ನೀನಾದರೂ ಅವರ ಬಗ್ಗೆ ವಿಚಾರಿಸಿಕೊಂಡು ಬಾ ಎಂದು ಅಪ್ಪಾಜಿ ಹೇಳಿದಾಗ,ಆಸ್ಪತ್ರೆ ಎಂದರೆ ಮಾರು ದೂರ ಓಡುವ ನನಗೆ ಏನು ಮಾಡುವುದೆಂದು ತಿಳಿಯದೇ ಹುಂಗುಟ್ಟಿದೆ. ಊರಿಗೆ […]

Back To Top